/newsfirstlive-kannada/media/media_files/2026/02/26/rashmika-mandanna-and-vijay-devarakonda-1-2026-02-26-12-42-57.jpg)
ಟಾಲಿವುಡ್‌ನ ಲವ್ ಬರ್ಡ್ಸ್ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ವಿವಾಹ ಮಹೋತ್ಸವ ರಾಜಸ್ಥಾನದ ಉದಯಪುರದಲ್ಲಿ ಅದ್ಧೂರಿಯಾಗಿ ನೆರವೇರುತ್ತಿದೆ. ಅನೇಕ ವರ್ಷಗಳಿಂದ ಪ್ರೀತಿಯಲ್ಲಿದ್ದ ಜೋಡಿ ಇದೀಗ ಅಧಿಕೃತವಾಗಿ ಸತಿ-ಪತಿಯಾಗಿದ್ದಾರೆ. ಬೆನ್ನಲ್ಲೇ ಈ ಜೋಡಿಯ ಸಿನಿಮಾ ಕೆರಿಯರ್, ಆಸ್ತಿ ಹಾಗೂ ಬ್ರ್ಯಾಂಡ್ ಮೌಲ್ಯದ ಬಗ್ಗೆ ನೆಟ್ಟಿಗರಲ್ಲಿ ಹಾಗೂ ಸಿನಿ-ವಲಯದಲ್ಲಿ ಭಾರಿ ಚರ್ಚೆ ಶುರುವಾಗಿದೆ.
140 ಕೋಟಿ ರೂ. ಒಡೆಯರು ‘ವಿರೋಶ್’ ಕಪಲ್!
ವರದಿಗಳ ಪ್ರಕಾರ, ಮದುವೆಯ ನಂತರ ರಶ್ಮಿಕಾ-ವಿಜಯ್ ಜೋಡಿ ಟಾಲಿವುಡ್‌ನ ಅತ್ಯಂತ ಶ್ರೀಮಂತ ಜೋಡಿ' (Richest Couple) ಎನಿಸಿಕೊಂಡಿದೆ. ತೆಲುಗು, ತಮಿಳು ಸೇರಿದಂತೆ ಹಿಂದಿಯಲ್ಲೂ ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡ್ತಿರುವ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ, ಇದುವರೆಗೆ ಅಂದಾಜು 60 ರಿಂದ 80 ಕೋಟಿ ರೂ. ಆಸ್ತಿ ಗಳಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಹಗರಣದ ಮಾಸ್ಟರ್ ಮೈಂಡ್ ಯಾರೆಂದು ಬಹಿರಂಗ: ಆರೋಪಿಗಳ ಬಂಧನ
/filters:format(webp)/newsfirstlive-kannada/media/media_files/2026/02/26/rashmika-mandanna-12-2026-02-26-11-24-30.jpg)
ವಿಜಯ್ ದೇವರಕೊಂಡ ಸಿನಿಮಾಗಳು ಇತ್ತೀಚೆಗೆ ಬಾಕ್ಸ್ ಆಫೀಸ್‌ನಲ್ಲಿ ಕೊಂಚ ಮಟ್ಟಿಗೆ ಹಿನ್ನಡೆ ಅನುಭವಿಸಿದ್ದರೂ ಅವರ ನಿವ್ವಳ ಆಸ್ತಿ ಮೌಲ್ಯ 60 ರಿಂದ 70 ಕೋಟಿ ರೂ. ಇದೆ ಎಂದು ಅಂದಾಜಿಸಲಾಗಿದೆ. ಅಂದರೆ ಮದುವೆಯ ಬಳಿಕ ಇಬ್ಬರ ಒಟ್ಟು ಆಸ್ತಿ ಮೌಲ್ಯ ಸರಿ ಸುಮಾರು 140 ಕೋಟಿ ರೂಪಾಯಿಗಳಷ್ಟಾಗಲಿದೆ!
ಬ್ಯುಸಿನೆಸ್, ಬ್ರ್ಯಾಂಡ್ ಪ್ರಮೋಷನ್‌ನಿಂದಲೂ ಕಮಾಯಿ
ಸಿನಿಮಾಗಳನ್ನು ಬದಿಗಿಟ್ಟರೆ ಈ ಜೋಡಿ ಬ್ರ್ಯಾಂಡ್ ಪ್ರಮೋಷನ್ಸ್, ಸೋಶಿಯಲ್ ಮೀಡಿಯಾ ಪ್ರಚಾರ ಹಾಗೂ ಖಾಸಗಿ ಕಾರ್ಯಕ್ರಮಗಳ ಮೂಲಕವೂ ಭಾರಿ ಮೊತ್ತವನ್ನು ಸಂಪಾದಿಸುತ್ತಿದ್ದಾರೆ.
ರಶ್ಮಿಕಾ ಆದಾಯ ಮೂಲ: ಸ್ವರೋವ್ಸ್ಕಿ (Swarovski), ಬೋಟ್ (boAt), ಕಲ್ಯಾಣ್ ಜ್ಯುವೆಲರ್ಸ್, ಸೆವೆನ್ ಅಪ್ (7Up), ಮೀಶೋ (Meesho) ಮುಂತಾದ ಜನಪ್ರಿಯ ಉತ್ಪನ್ನಗಳಿಗೆ ರಶ್ಮಿಕಾ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದು, ಇದರಿಂದಲೇ ಕೋಟ್ಯಂತರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.
ಇದನ್ನೂ ಓದಿ:ರಶ್ಮಿಕಾ ವಿಜಯ್ ಉದಯಪುರ ವಿವಾಹ : ರಶ್ಮಿಕಾ- ವಿಜಯ ದೇವರಕೊಂಡ ಈಗ ವಿವಾಹಿತರು
/filters:format(webp)/newsfirstlive-kannada/media/media_files/2026/02/26/rashmika-mandanna-and-vijay-devarakonda-2026-02-26-12-16-56.jpg)
ವಿಜಯ್ ಬ್ಯುಸಿನೆಸ್: ವಿಜಯ್ ದೇವರಕೊಂಡ ಅವರು ತಮ್ಮದೇ ಆದ 'ರೌಡಿ ವೇರ್' (Rowdy Wear) ಬಟ್ಟೆ ಬ್ರ್ಯಾಂಡ್, ಇ-ಕಾಮರ್ಸ್ ಹಾಗೂ ಪಾಪ್-ಅಪ್ ವೆಂಚರ್‌ಗಳ ಮೂಲಕ ಬ್ಯುಸಿನೆಸ್ ರಂಗದಲ್ಲೂ ಯಶಸ್ಸು ಕಂಡಿದ್ದಾರೆ.
ಮದುವೆಯ ಬಳಿಕ ಮತ್ತಷ್ಟು ಹೆಚ್ಚಲಿದೆ ಡಿಮ್ಯಾಂಡ್!
ಪ್ಯಾನ್-ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿರುವ ಈ ಜೋಡಿಯ ಕ್ರೇಜ್ ಮದುವೆಯ ನಂತರ ಮತ್ತಷ್ಟು ಹೆಚ್ಚಾಗಲಿದೆ. ಬ್ಯುಸಿನೆಸ್ ಮತ್ತು ಸಿನಿಮಾ ರಂಗದಲ್ಲಿ ಇವರ ‘ಬ್ರ್ಯಾಂಡ್ ಇಮೇಜ್’ ದುಪ್ಪಟ್ಟಾಗುವ ಸಾಧ್ಯತೆಯಿದೆ. ಪ್ಯಾನ್-ಇಂಡಿಯಾ ಕಪಲ್ ಆಗಿರುವುದರಿಂದ ಟಾಪ್ ನಿರ್ದೇಶಕರು ಹಾಗೂ ನಿರ್ಮಾಪಕರು ಇವರೊಂದಿಗೆ ಸಿನಿಮಾ ಮಾಡಲು ಇನ್ನಷ್ಟು ಆಸಕ್ತಿ ತೋರಲಿದ್ದಾರೆ. ಇವರ ಫ್ಯಾನ್ ಫಾಲೋಯಿಂಗ್ ಕೂಡ ಹೆಚ್ಚಾಗಲಿದ್ದು, ಒಟ್ಟಾರೆಯಾಗಿ ದಕ್ಷಿಣ ಭಾರತದ ಅತ್ಯಂತ ಪ್ರಭಾವಶಾಲಿ ಹಾಗೂ ಶ್ರೀಮಂತ ಜೋಡಿಗಳ (Power Couple) ಪಟ್ಟಿಗೆ ರಶ್ಮಿಕಾ-ವಿಜಯ್ ಹೆಮ್ಮೆಯಿಂದ ಸೇರ್ಪಡೆಯಾಗಲಿದ್ದಾರೆ.
ಇದನ್ನೂ ಓದಿ: ಮದ್ವೆಗೆ ಬಂದ ಸೆಲೆಬ್ರಿಟಿಗಳು ಯಾಱರು..? ಬಿಸಿಬೇಳೆ ಬಾತ್, ಮಟನ್ ಬಿರಿಯಾನಿ, ಪೋರ್ಕ್ ಕರಿ: ‘ಊಟದ ಮೆನು ಏನೇನು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us