/newsfirstlive-kannada/media/media_files/2025/08/05/honnavalli-krishna-2025-08-05-13-43-42.jpg)
ಬೆಂಗಳೂರು: ವೇತನ ಪರಿಷ್ಕರಣೆ ಹಾಗೂ 20 ತಿಂಗಳ ಹಿಂಬಾಕಿ ವೇತನ ಬಿಡುಗಡೆ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಿಎಂಟಿಸಿ, ಕೆಎಸ್ಆರ್ಟಿಸಿ ಸೇರಿದಂತೆ 4 ವಿಭಾಗಗಳ ಸಾರಿಗೆ ನೌಕರರು ಮುಷ್ಕರಕ್ಕೆ ಮುಂದಾಗಿದ್ದರು.
ಇದನ್ನೂ ಓದಿ: ಸಾರಿಗೆ ನೌಕರರ ಮುಷ್ಕರ; ಈ ಕುರಿತು ಸಭೆ ಬಳಿಕ ಸಚಿವ ರಾಮಲಿಂಗಾರೆಡ್ಡಿ ಏನೇನು ಹೇಳಿದರು?
ಸಾರಿಗೆ ನೌಕರರ ಮುಷ್ಕರ ಮಾಡಿದ್ದರಿಂದ ಇತ್ತೀಚಿಗೆ ನೇಮಕವಾದ ಚಾಲಕರು ಇಂದು ಬಸ್ ಚಲಾಯಿಸುತ್ತಿದ್ದರು. ಆದ್ರೆ ಬಹುತೇಕ ಬಸ್ಗಳು ರಸ್ತೆಗೆ ಇಳಿದಿಲ್ಲ. ಹೀಗಾಗಿ ತಮ್ಮ ತಮ್ಮ ಊರಿಗೆ ಹೋಗಲು ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣಗೊಂಡಿತ್ತು.
ಆದ್ರೆ, ಸಾರಿಗೆ ನೌಕರರ ಬಂದ್ ಎಪೆಕ್ಟ್ ಬರೀ ಜನ ಸಾಮಾನ್ಯರಿಗಷ್ಟೇ ಅಲ್ಲದೇ ಸ್ಟಾರ್ ನಟನಿಗೂ ತಟ್ಟಿದೆ. ವೈಟ್ ಪಿಲ್ಡ್ನಿಂದ ಮೆಟ್ರೋ ಮೂಲಕ ಮೆಜೆಸ್ಟಿಕ್ಗೆ ಕನ್ನಡ ಹಿರಿಯ ನಟ ಹೊನ್ನವಳ್ಳಿ ಕೃಷ್ಣ ದಂಪತಿ ಬಂದಿದ್ದರು. ಆದ್ರೆ, ಮೆಜೆಸ್ಟಿಕ್‌ನಿಂದ ಮಾದನಾಯಕನಹಳ್ಳಿಗೆ ಹೋಗಲು ಬಸ್ಗಾಗಿ ಕಾಯುತ್ತಿದ್ದರು. ಆದರೆ ಬಸ್ಗಳು ರಸ್ತೆಗಿಳಿಯದ ಕಾರಣ ಕ್ಯಾಬ್ ಮೂಲಕ ತೆರಳಿದ್ದಾರೆ.
ಈ ಬಗ್ಗೆ ಮಾತಾಡಿದ ನಟ ಹೊನ್ನವಳ್ಳಿ ಕೃಷ್ಣ, ಈ ತರ ಬಂದ್ ಆಗಬಾರದಾಗಿತ್ತು. ಈಗ ತಾನೇ ಊರಿಗೆ ಹೋಗಿ ಬರ್ತಾ ಇದ್ವಿ. ಹೀಗೆ ಆಗಿದಕ್ಕೆ ಜನರಿಗೆ ತುಂಬಾ ತೊಂದರೆ ಆಗಿದೆ. ನಿಲ್ದಾಣದಲ್ಲಿ ಬಸ್ಗಾಗಿ ಕಾದು ಕುಳಿತಿದ್ದಾರೆ. ಇನ್ನೊಂದು ಸಾರಿ ಹೀಗೆ ಆಗದಿರೋ ಹಾಗೇ ನೋಡಿಕೊಳ್ಳಬೇಕು ಎಂದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ