/newsfirstlive-kannada/media/media_files/2025/10/10/trisha-2025-10-10-19-19-02.jpg)
ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ತಮ್ಮ ಅಭಿನಯದಿಂದಲೇ ದಕ್ಷಿಣ ಭಾರತದವರಿಗೆ ಹತ್ತಿರವಾಗಿರುವ ತ್ರಿಶಾ ಕೃಷ್ಣನ್ ಮದುವೆ ಯಾವಾಗ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ. ಅವರ ಅಭಿಮಾನಿಗಳಂತೂ ತ್ರಿಶಾ ಯಾರನ್ನು ಮದುವೆ ಆಗಬಹುದು ಎಂದು ಕುತೂಹಲದಿಂದ ಇದ್ದಾರೆ. ತ್ರಿಶಾ ಹಾಗೂ ದಳಪತಿ ವಿಜಯ್ ಜೊತೆ ಏನು ನಡೆಯುತ್ತಿದೆ ಎಂದು ಗುಸು ಗುಸು ನಡೆಯುತ್ತಿತ್ತು. ಇದರ ಬೆನ್ನಲ್ಲೇ ತ್ರಿಶಾ ಮ್ಯಾರೇಜ್​ ಬಗ್ಗೆ ಬಿಗ್ ಅಪ್​ಡೇಟ್​ ಒಂದು ಹೊರ ಬಿದ್ದಿದೆ.
ದಳಪತಿ ವಿಜಯ್ ಹಾಗೂ ತ್ರಿಶಾ ಈ ಇಬ್ಬರು ಅಭಿನಯಿಸಿದ ತಮಿಳು ಸಿನಿಮಾ ಸೋಲು ಎಂಬುದೇ ನೋಡಿಲ್ಲ. ಗಿಲ್ಲಿ, ತಿರುಪಾಚಿ ಮತ್ತು ಕುರುವಿ ಮೂವಿ ಸೂಪರ್ ಹಿಟ್ ಆಗಿದ್ದವು. ಕುರುವಿ ಚಿತ್ರದ ನಂತರ ಇಬ್ಬರು ದೂರವಾಗಿದ್ದರು. ತಮಿಳಿನಲ್ಲಿ ಅಷ್ಟೊಂದು ಹವಾ ಕ್ರಿಯೇಟ್ ಮಾಡಿತ್ತು ಈ ಜೋಡಿ. ಇತ್ತೀಚೆಗಿನ ಲಿಯೋ ಸಿನಿಮಾದಲ್ಲೂ ಈ ಜೋಡಿ ಮಸ್ತ್​ ನಟನೆ ಮಾಡಿ ಫ್ಯಾನ್ಸ್​ ಹೃದಯ ಗೆದ್ದಿದ್ದರು.
ಇದನ್ನೂ ಓದಿ: 7 ಶತಕ ಬಾರಿಸಿದ ಯಶಸ್ವಿ ಜೈಸ್ವಾಲ್.. ಮಹತ್ವದ ದಾಖಲೆ ಬರೆದ ಯಂಗ್ ಓಪನರ್!​ ​
/filters:format(webp)/newsfirstlive-kannada/media/media_files/2025/10/10/trisha_new-2025-10-10-19-19-14.jpg)
ತ್ರಿಶಾ ಅವರು ಶೀಘ್ರದಲ್ಲೇ ಮದುವೆಯಾಗಲು ಪ್ಲಾನ್ ಮಾಡುತ್ತಿದ್ದಾರೆ ಎನ್ನಲಾಗಿದ್ದು ಇದಕ್ಕೆ ಸಂಬಂಧಿಸಿದಂತೆ ತ್ರಿಶಾ ಅವರ ಪೋಷಕರು ಚಂಡೀಗಢದಲ್ಲಿ ವರನನ್ನು ಹುಡುಕಿದ್ದಾರಂತೆ. ಎರಡು ಕುಟುಂಬಗಳು ಹಲವಾರು ವರ್ಷಗಳಿಂದ ಪರಿಚಯಸ್ಥರು ಆಗಿದ್ದು ಈ ಬಗ್ಗೆ ಎರಡು ಕುಟುಂಬಗಳು ಚರ್ಚೆ ಮಾಡಿವೆ ಎನ್ನಲಾಗಿದೆ.
ಈ ಸಂಬಂಧ ನಟಿ ತ್ರಿಶಾ ಆಗಲಿ ಅವರ ಕುಟುಂಬಸ್ಥರು ಆಗಲಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ ಶೀಘ್ರದಲ್ಲೇ ಹಸೆಮಣೆ ಏರಲು ತ್ರಿಶಾ ತಯಾರಿಯಲ್ಲಿದ್ದಾರೆ ಎಂದು ಗುಸು ಗುಸು ಮಾತಾಡುತ್ತಿದ್ದಾರೆ. ಈ ಹಿಂದೆ ಅಂದರೆ 2015ರಲ್ಲಿ ಉದ್ಯಮಿ ವರುಣ್ ಮನೈನ್ ಹಾಗೂ ತ್ರಿಶಾ ಉಂಗುರ ಬದಲಾವಣೆ ಮಾಡಿಕೊಂಡಿದ್ದರು. ಆದರೆ ತ್ರಿಶಾ ಸಿನಿಮಾದಲ್ಲಿ ಅಭಿನಯ ಮುಂದುವರಿಸಿದ್ದರಿಂದ ಈ ಸಂಬಂಧ ಮುರಿದು ಬಿದ್ದಿತ್ತು. ಇದಾದ ಮೇಲೆ ಇದೀಗ ತ್ರಿಶಾ ವಿವಾಹದ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us