ನಟಿ ರಮ್ಯಾಗೆ ಕೆಟ್ಟದಾಗಿ ಕಾಮೆಂಟ್ ಮಾಡಿದವ್ರ ಪರಿಸ್ಥಿತಿ ಈಗ ಏನಾಗಿದೆ ಗೊತ್ತಾ..?

ನಟಿ ರಮ್ಯಾ ವಿರುದ್ಧ ಅಶ್ಲೀಲ ಕಾಮೆಂಟ್ ಮಾಡಿ ಬಂಧನಕ್ಕೆ ಒಳಗಾದ ಆರೋಪಿಗಳು ಪ್ರಕರಣದಿಂದ ಹೊರಬರಲು ಪರದಾಟ ನಡೆಸಿದ್ದಾರೆ. ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ನಡೆಸ್ತಿದ್ದಾರೆ.

author-image
Ganesh Kerekuli
ramya(4)
Advertisment

ಬೆಂಗಳೂರು: ನಟಿ ರಮ್ಯಾ ವಿರುದ್ಧ ಅಶ್ಲೀಲ ಕಾಮೆಂಟ್ ಮಾಡಿ ಬಂಧನಕ್ಕೆ ಒಳಗಾದ ಆರೋಪಿಗಳು ಪ್ರಕರಣದಿಂದ ಹೊರಬರಲು ಪರದಾಟ ನಡೆಸಿದ್ದಾರೆ. ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ನಡೆಸ್ತಿದ್ದಾರೆ. 

ಪ್ರಕರಣದಲ್ಲಿ ಜಾಮೀನು ಕೋರಿ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಸೆಷನ್ಸ್​ ಕೋರ್ಟ್, ಆರೋಪಿಗಳ ಜಾಮೀನು ಅರ್ಜಿಯನ್ನು ವಜಾ ಮಾಡಿದೆ. ಪೊಲೀಸರ ತನಿಖೆ ಮತ್ತು ಸೆಕ್ಷನ್ಸ್​ಗಳಿಂದ ಜಾಮೀನಿಗೆ ಕುತ್ತು ಬಂದಿದೆ. ತೀರಾ ಅಸಭ್ಯವಾಗಿ ಕಾಮೆಂಟ್ ಹಾಕಿ ಪೋಸ್ಟ್ ಮಾಡಿದ್ದ ಆರೋಪಿಗಳಿಗೆ ಜಾಮೀನು ಸಿಗುತ್ತಿಲ್ಲ. ಹೀಗಾಗಿ ಬಂಧಿತರು ಹೈಕೋರ್ಟ್ ಮೊರೆ ಹೋಗಬೇಕಾದ ಅನಿವಾರ್ಯತೆ ಇದೆ. 

ಕಳೆದ ಜುಲೈ 26 ರಂದು ಪೊಲೀಸ್ ಕಮಿಷನರ್ ಕಚೇರಿಯಲ್ಲಿ ರಮ್ಯಾ ದೂರು ನೀಡಿದ್ದರು. ಸಿಸಿಬಿ ಸೈಬರ್ ಕ್ರೈಮ್ ಪೊಲೀಸರಿಂದ ತನಿಖೆ ನಡೆಯುತ್ತಿದೆ. ಐಟಿ ಆ್ಯಕ್ಟ್ 67, 66 ಹಾಗೂ ಬಿಎನ್ಎಸ್ 351(2), 351(3), 352, 75(1), 79 ಅಡಿಯಲ್ಲಿ ಕೇಸ್‌ ದಾಖಲಿಸಿಕೊಂಡು 12 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. 

ಇದನ್ನೂ ಓದಿ:ಗ್ರಹಣಕ್ಕೆ ನಿಲುಕದ ಪುಣ್ಯಸ್ಥಳ ಇದು.. ಗ್ರಹಣ ಸಮಯದಲ್ಲೂ ಇಲ್ಲಿ ಸಿಗಲಿದೆ ದರ್ಶನ ಭಾಗ್ಯ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Actress Ramya Actor Darshan Darshan in jail
Advertisment