Advertisment

ಕೇಳ್ರಪ್ಪೋ ಕೇಳಿ.. ಟೆನ್ಷನ್​​ನಲ್ಲಿ ಉಪೇಂದ್ರ ದಂಪತಿ.. ದುಡ್ಡು ಕೇಳಿದ್ರೆ ಕೊಡಬಾರದಂತೆ..! ಯಾಕೆ..?

ನಟ ಉಪೇಂದ್ರ ಹಾಗೂ ಪತ್ನಿ ಪ್ರಿಯಾಂಕ ಉಪೇಂದ್ರ ಅವರು ಎಮರ್ಜೆನ್ಸಿ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಮೊಬೈಲ್ ಜಮಾನದಲ್ಲಿ ಸೈಬರ್ ವಂಚಕರು ನಮ್ಮ ಫೋನ್ ಮೇಲೆ ಕಣ್ಣಿಟ್ಟಿದ್ದು, ಯಾರೂ ಮೋಸ ಹೋಗಬೇಡಿ ಎಂದು ಕಳಕಳಿಯ ಮನವಿ ಮಾಡಿದ್ದಾರೆ. ಏನಾಗಿದೆ ಅಂತಾ ಈ ಸ್ಟೋರಿ ಓದಿ..

author-image
Ganesh Kerekuli
Updated On
upendra and priyanka upendra
Advertisment

ರಿಯಲ್ ಸ್ಟಾರ್​ ಉಪೇಂದ್ರ ಹಾಗೂ ಪ್ರಿಯಾಂಕ ಉಪೇಂದ್ರ ದಂಪತಿಯ ಮೊಬೈಲ್ ಹ್ಯಾಕ್ ಆಗಿದೆ. ಆರ್ಡರ್​ ಹೆಸರಿನಲ್ಲಿ ಸೈಬರ್​ ವಂಚಕರು (cyber crime) ಫೋನ್​ ಹ್ಯಾಕ್​ ಮಾಡಿದ್ದಾರೆ. ಯಾರೂ ನಮ್ಮ ಹೆಸರಲ್ಲಿ ಹಣ ಕೇಳಿದ್ರೆ ಕೊಡಬೇಡಿ ಎಂದು ಉಪೇಂದ್ರ ಮನವಿ ಮಾಡಿಕೊಂಡಿದ್ದಾರೆ. 

Advertisment

ಉಪೇಂದ್ರಗೆ ಶಾಕ್​..!

ಸಾಮಾನ್ಯವಾಗಿ ಸೈಬರ್​ ವಂಚಕರು ಉದ್ಯಮಿಗಳ ಫೋನ್​ ಹ್ಯಾಕ್ ಮಾಡಿ ವಂಚಿಸುತ್ತಿದ್ದರು. ಆದ್ರೀಗ ರಿಯಲ್​ ಸ್ಟಾರ್ ಉಪೇಂದ್ರ ಕುಟುಂಬಕ್ಕೆ ಸೈಬರ್ ವಂಚಕರು ಗೂಗ್ಲಿ ಕೊಟ್ಟಿದ್ದಾರೆ. ಸೈಬರ್​ ವಂಚಕರು ಆರ್ಡರ್​ ಹೆಸರಿನಲ್ಲಿ ಮೋಸ ಮಾಡಿದ್ದಾರೆ.ಇಂದು ಬೆಳಗ್ಗೆ ಆಗಿರೋ ಘಟನೆ  ಮೊಬೈಲ್​ ಹ್ಯಾಕ್ ಆಗಿರೋದನ್ನ ಕಂಡು ಉಪೇಂದ್ರ ಹಾಗೂ ಪ್ರಿಯಾಂಕ ಉಪೇಂದ್ರ ಶಾಕ್​ ಆಗಿದ್ದಾರೆ.. 

ಇದನ್ನೂ ಓದಿ: ಮತ್ತೆ ವೇದಿಕೆ ಮೇಲೆ ಮಾತಿನ ಮಲ್ಲಿ.. ಅನುಶ್ರೀ ಸಂಪ್ರದಾಯ ಪಾಲನೆಗೆ ಉಘೇಉಘೇ..!

ನನ್ನ ಮತ್ತು ಪ್ರಿಯಾಂಕಾ ಮೊಬೈಲ್ ಹ್ಯಾಕ್ ಆಗಿದೆ. ಯಾರಾದರೂ ದುಡ್ಡು ಕೇಳಿದ್ರೆ ಕೊಡ್ಬೇಡಿ ಅಂತಾ ಉಪೇಂದ್ರ ವಿಡಿಯೋ ಮೂಲಕ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಸದ್ಯ ಉಪೇಂದ್ರ  ಈ ಸಂಬಂಧ ದೂರು ದಾಖಲಿಸಿದ್ದಾರೆ.

Advertisment

ಇದನ್ನೂ ಓದಿ: ಮತ್ತೆ ವೇದಿಕೆ ಮೇಲೆ ಮಾತಿನ ಮಲ್ಲಿ.. ಅನುಶ್ರೀ ಸಂಪ್ರದಾಯ ಪಾಲನೆಗೆ ಉಘೇಉಘೇ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Priyanka Upendra Upendra Actress upendra , priyanaka upendra
Advertisment
Advertisment
Advertisment