/newsfirstlive-kannada/media/media_files/2025/09/15/anusree-2025-09-15-10-44-12.jpg)
ನಿರೂಪಕಿ ಅನುಶ್ರೀ
ಮದುವೆ ಬಳಿಕ ಖ್ಯಾತ ನಿರೂಪಕಿ ಅನುಶ್ರೀಗೆ ಅದ್ದೂರಿ ಸ್ವಾಗತ ಸಿಕ್ಕಿದೆ. ಅನುಶ್ರೀ ವಿವಾಹವಾಗಿ ಮತ್ತೆ ತಮ್ಮ ರಿಯಾಲಿಟಿ ಶೋಗೆ ಮರಳಿದ್ದಾರೆ. ನಾವು ನಮ್ಮವರು ಹಾಗೂ ಮಹಾನಟಿ ಸಮಾಗಮದಲ್ಲಿ ಎಲ್ಲಾ ಕಂಟೆಸ್ಟೆಂಟ್​ ಹಾಗೂ ಜಡ್ಜಸ್​​ ಡಾನ್ಸ್​ ಮೂಲಕ ಅದ್ದೂರಿಯಾಗಿ ಮದುಮಗಳಾದ ಅನುಶ್ರೀಗೆ ಸ್ವಾಗತಿಸಿದ್ದಾರೆ.
ಇದನ್ನೂ ಓದಿ:8 ವರ್ಷಗಳ ವಿರಾಮದ ಬಳಿಕ ‘ಪೀಕಬೂ’ ಎಂದ ಗೋಲ್ಡನ್ ಕ್ವೀನ್.. VIDEO
/filters:format(webp)/newsfirstlive-kannada/media/media_files/2025/09/15/anusree-1-2025-09-15-10-50-54.jpg)
ಮದುವೆಯಾದ ನಂತರ ವೇದಿಕೆಯಲ್ಲಿ ಮತ್ತೆ ಅನುಶ್ರೀ..!
ಇತ್ತೀಚೆಗೆ ಅನುಶ್ರೀ, ಗೆಳೆಯ ರೋಷನ್ ಜೊತೆ ಹಸಮಣೆ ಏರಿದ್ದಾರೆ. ವಿವಾಹದ ಬಳಿಕ ಅನುಶ್ರೀ ಸ್ವಲ್ಪ ಸಮಯ ಹಾಯಾಗಿ ಕಳೆದು ಇದೀಗ ಮತ್ತೆ ತಮ್ಮ ವೃತ್ತಿಗೆ ಮರಳಿದ್ದಾರೆ. ಅನುಶ್ರೀ ಮತ್ತೆ ಝೀ ಕನ್ನಡ ವೇದಿಕೆ ಮೇಲೆ ಕಾಣಿಸಿಕೊಂಡಿದ್ದಾರೆ.
ಅನುಶ್ರೀಗೆ ಜೀ ಕನ್ನಡ ವೇದಿಕೆ ಸಖತ್ತಾಗಿ ವೆಲ್​ ಕಮ್​ ಮಾಡಿದೆ. ಸೆಲೆಬ್ರಿಟಿಗಳು ವಿವಾಹದ ನಂತರ ಮಾಂಗಲ್ಯ ಧರಿಸದಿರುವುದು ಸಾಮಾನ್ಯವಾದರೂ, ಅನುಶ್ರೀ ಅವರ ಸಂಪ್ರದಾಯ ಪಾಲನೆ ಎಲ್ಲರ ಗಮನ ಸೆಳೆದಿದೆ. ಅನುಶ್ರೀ ಮ್ಯಾಂಗಲ್ಯ ಸರ ಧರಿಸಿ ವೇದಿಕೆಗೆ ಎಂಟ್ರಿ ಕೊಟ್ಟಿರೊದಕ್ಕೆ ಫ್ಯಾನ್ಸ್ ಹಾಡಿ ಹೊಗಳಿದ್ದಾರೆ.
/filters:format(webp)/newsfirstlive-kannada/media/media_files/2025/08/29/anushree-2-2025-08-29-19-34-45.jpg)
ನಾವು ನಮ್ಮವರು ಹಾಗೂ ಮಹಾನಟಿ ಸಮಾಗಮದಲ್ಲಿ ಎಲ್ಲಾ ಸ್ಪರ್ಧಿಗಳು ಹಾಗೂ ಎಲ್ಲಾ ಜಡ್ಜರ್ಸ್​ ತುಂಬಾ ಪ್ರೀತಿಯಿಂದ ಬರಮಾಡಿಕೊಂಡಿದ್ದಾರೆ.ವಿಶೇಷವಾಗಿ ನಟಿ ತಾರ ಸಂಪ್ರದಾಯದಂತೆ ಮಡಿಲು ತುಂಬಿಸಿ ಅನುಶ್ರೀಗೆ ಆಶೀರ್ವಾದ ಮಾಡಿದ್ದರು.
ಮದುವೆ ಬಗ್ಗೆ ಅನುಶ್ರೀಯ ಮನದಾಳನದ ಮಾತು
ತಮ್ಮ ಮದುವೆ ಬಗ್ಗೆ ಎಲ್ಲಾ ತಯಾರಿ ಬಗ್ಗೆ ಎಲ್ಲಾ ವೇದಿಕೆ ಮೇಲೆ ಹಂಚಿಕೊಂಡಿದ್ದಾರೆ. ಸರಳವಾಗಿ ಅಂದುಕೊಂಡತೆ ಆಗಿದೆ. ಆದ್ರೆ ಮದುವೆಯಲ್ಲಿ ಅಪ್ಪು ಸರ್​ ನಾ ಮಿಸ್​ ಮಾಡಿಕೊಂಡಿದ್ದೇನೆ. ಇನ್ನು ಅನುಶ್ರೀ ಬದ್ರರ್​ ಫ್ರಮ್​ ಅನಧರ್​ ಮದರ್​ ವರುಣ್​ಗೌಡ​ ಬಗ್ಗೆ ಹಾಗೂ ರಾಜ್​ ಬಿ.ಶೆಟ್ಟಿ ಮದುವೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆಂದು ಹಾಡಿ ಹೊಗಳಿದ್ದಾರೆ. ವೇದಿಕೆಯಲ್ಲಿ ಇವತ್ತು ರೋಷನ್​ ಇರಬೇಕಿತ್ತು ಅಂತಾ ಮಿಸ್​ ಮಾಡಿಕೊಂಡಿದ್ದಾರೆ. ಹಾಗಾಗಿ ನೆಕ್ಸ್ಟ್ ಜೀ ಕುಟುಂಬಕ್ಕೆ ಕರೆದುಕೊಂಡು ಬರುತ್ತೀನಿ ಅಂತಾ ಮಾತುಕೊಟ್ಟಿದ್ದಾರೆ.
ಇದನ್ನೂ ಓದಿ:ವೈರಲ್ ಹುಡುಗಿಗೆ ಬ್ಯಾಡ್​ ಕಾಮೆಂಟ್ಸ್ ಕಾಟ​.. ಏನಂದ್ರು ನಿತ್ಯಶ್ರೀ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us