/newsfirstlive-kannada/media/media_files/2025/08/19/rashmika3-2025-08-19-19-07-34.jpg)
ನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ ಒಂದಲ್ಲಾ ಒಂದು ವಿಷಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಸುದ್ದಿಯಲ್ಲಿರುತ್ತಾರೆ. ನಟಿಯ ಜೊತೆ ಜೊತೆಗೆ ಟಾಲಿವುಡ್ ಖ್ಯಾತ ನಟ ಕೂಡ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಲೇ ಇರುತ್ತಾರೆ. ಕಳೆದ ಕೆಲವು ವರ್ಷಗಳಿಂದ ನಟ ವಿಜಯ ದೇವರಕೊಂಡ ಹಾಗೂ ಕೊಡಗಿನ ಬೆಡಗಿ ನಟಿ ರಶ್ಮಿಕಾ ಮಂದಣ್ಣ ಬಹಳ ಆತ್ಮೀಯರಾಗಿ ಕಾಣಿಸಿಕೊಳ್ಳುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ.
ಇದನ್ನೂ ಓದಿ:ಚಹಾ ಬೇಡ.. ಬ್ಲ್ಯಾಕ್ ಟೀ ಕುಡಿಯೋದ್ರಿಂದ ಆರೋಗ್ಯಕ್ಕೆ ಇವೆ ಸಾಕಷ್ಟು ಲಾಭಗಳು, ಏನೇನು..?
ಈ ಹಿಂದೆಯೇ ಈ ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ. ಇವರು ಜೊತೆಯಾಗಿ ವಿದೇಶದಲ್ಲಿ ತಿರುಗಾಡಿದ್ದಾರೆ ಎಂಬ ವಿಚಾರ ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿರುವುದು ಹೊಸತೇನಲ್ಲ. ದೀಪಾವಳಿ ಹಬ್ಬವನ್ನು ರಶ್ಮಿಕಾ ದೇವರಕೊಂಡ ಜೊತೆ ಆಚರಿಸಿಕೊಂಡಿದ್ದರು ಎನ್ನಲಾಗಿತ್ತು. ಆದರೆ ಇದೀಗ ಡೇಟಿಂಗ್ ಮೀಟಿಂಗ್ ನಡುವೆ ಮದುಮಕ್ಕಳ ಹಾಗೆ ರೆಡಿಯಾಗಿ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅಕ್ಕಪಕ್ಕದಲ್ಲಿ ನಿಂತುಕೊಂಡು ಫೋಟೋಗೆ ಪೋಸ್ ಕೊಟ್ಟಿದ್ದಾರೆ.
ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಹೋಗಿದ್ದೇಲಿಗೆ?
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಇಬ್ಬರು ನ್ಯೂಯಾರ್ಕ್ ನಗರದ ಇಂಡಿಯಾ ಡೇ ಪೆರೇಡ್‌ನಲ್ಲಿ ಭಾಗವಹಿಸಿದ್ದಾರೆ. ಈ ಇಬ್ಬರು ಸ್ಟಾರ್ಗಳನ್ನು ಅದ್ಧೂರಿಯಾಗಿ ಸ್ವಾಗತ ಕೋರಲಾಗಿದ್ದು, ಈ ವೇಳೆ ವಿಜಯ್ ರಶ್ಮಿಕಾರ ಕೈಹಿಡಿದು ನಡೆದಿದ್ದಾರೆ. ಈ ಫೋಟೋ ಹಾಗೂ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಜಯ್ ಶೇರ್ವಾನಿ ಧರಿಸಿದ್ದರೆ, ರಶ್ಮಿಕಾ ಕೆಂಪು ಸೀರೆ ಧರಿಸಿ ಕಂಗೊಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ