ಚಹಾ ಬೇಡ.. ಬ್ಲ್ಯಾಕ್​ ಟೀ ಕುಡಿಯೋದ್ರಿಂದ ಆರೋಗ್ಯಕ್ಕೆ ಇವೆ ಸಾಕಷ್ಟು ಲಾಭಗಳು, ಏನೇನು..?

ಚಹಾಗಿಂತ ಹೆಚ್ಚು ಆರೋಗ್ಯಕರವಾದ ಚಹಾ ಎಂದರೆ ಅದು ಬ್ಲ್ಯಾಕ್​ ಟೀ. ಹೌದು ಇದು ಆರೋಗ್ಯಕ್ಕೆ ಹೇಗೆಲ್ಲ ಉಪಯೋಗವಾಗುತ್ತದೆ ಎನ್ನುವುದು ನಿಮಗೆ ಗೊತ್ತಾದರೆ ಬೆಳಗ್ಗೆ ಚಹಾಗಿಂತ ಈ ಬ್ಲ್ಯಾಕ್​ ಟೀನೇ ನಿಮ್ಮ ಆಯ್ಕೆ .

author-image
Bhimappa
BLACK_TEA
Advertisment

ಬೆಳಗ್ಗೆ ಎದ್ದರೇ ಮೊದಲು ನಾವು ಕುಡಿಯುವುದೇ ಚಹಾ. ಹಾಲು, ಸಕ್ಕರೆ ಬರೆಸಿದ ಚಹಾ ಕುಡಿಯುವುದು ಕೆಲವೊಮ್ಮೆ ನಮ್ಮ ಆರೋಗ್ಯಕ್ಕೆ ಹಾನಿಯಾಗಬಹುದು. ಆದರೆ ಈ ಚಹಾಗಿಂತ ಹೆಚ್ಚು ಆರೋಗ್ಯಕರವಾದ ಚಹಾ ಎಂದರೆ ಅದು ಬ್ಲ್ಯಾಕ್​ ಟೀ. ಹೌದು ಇದು ಆರೋಗ್ಯಕ್ಕೆ ಹೇಗೆಲ್ಲ ಉಪಯೋಗವಾಗುತ್ತದೆ ಎನ್ನುವುದು ನಿಮಗೆ ಗೊತ್ತಾದರೆ ಬೆಳಗ್ಗೆ ಚಹಾಗಿಂತ ಈ ಬ್ಲ್ಯಾಕ್​ ಟೀನೇ ನಿಮ್ಮ ಆಯ್ಕೆ ಆಗಿರುತ್ತದೆ. 

ಬ್ಲ್ಯಾಕ್​ ಟೀ ಹಲವಾರು ಆರೋಗ್ಯ ಪ್ರಯೋಜನಾಗಳನ್ನು ಹೊಂದಿದೆ. ಇದು ಸಮೃದ್ಧ ಉತ್ಕರ್ಷಣ ನಿರೋಧಕ (Rich Antioxidant) ಅಂಶ ಮತ್ತು ಇತರ ಪ್ರಯೋಜನಕಾರಿ ಸಂಯುಕ್ತಗಳಿಂದ ಕೂಡಿದೆ. ಬ್ಲ್ಯಾಕ್​ ಟೀ ಕುಡಿಯುವುದರಿಂದ ಹೃದಯದ ಆರೋಗ್ಯ ಸುಧಾರಿಸುತ್ತದೆ. ಮೆದುಳಿನ ಕಾರ್ಯ ಹೆಚ್ಚಿಸುತ್ತದೆ. ಜೀರ್ಣಕ್ರಿಯೆಗೆ ಸಹಾಯ ಮಾಡುವುದರ ಜೊತೆಗೆ ಕೆಲವು ಕ್ಯಾನ್ಸರ್‌ಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ:ಚಿಯಾ ಬೀಜಗಳಲ್ಲಿ ಆರೋಗ್ಯ ರಹಸ್ಯ ಒಂದಾ, ಎರಡಾ.. ಈ ಸೀಡ್ಸ್​​ ಇಂದ ಏನೆಲ್ಲ ಉಪಯೋಗವಿದೆ?

BLACK_TEA_NEW

ಹೃದಯದ ಆರೋಗ್ಯ: ಬ್ಲ್ಯಾಕ್ ಟೀ ಕುಡಿಯುವುದರಿಂದ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಬಹುದು. ಇದು ಹೃದಯ ರೋಗಗಳ ಅಪಾಯವನ್ನು ಶೇ.50 ರಷ್ಟು ಕಡಿಮೆ ಮಾಡುತ್ತದೆ.

ಮಧುಮೇಹ ನಿಯಂತ್ರಣ: ಇನ್ಸುಲಿನ್ ಸಂವೇದನಾಶೀಲತೆಯನ್ನು ಈ ಬ್ಲ್ಯಾಕ್ ಟೀ ಹೆಚ್ಚಿಸುತ್ತದೆ. ನಮ್ಮ ದೇಹದಲ್ಲಿನ ರಕ್ತದಲ್ಲಿ ಇರುವ ಸಕ್ಕರೆಯ ಮಟ್ಟವನ್ನು ಬ್ಯಾಲೆನ್ಸ್ ಮಾಡುತ್ತದೆ.

ಮೆದುಳಿನ ಕಾರ್ಯಕ್ಕೆ ಒಳ್ಳೆಯದು: ಕೆಫಿನ್ (Caffeine) ಮತ್ತು ಎಲ್​-ಥೈನಿನ್ (L-theanine) ಈ ಎರಡು ನಮ್ಮಲ್ಲಿನ ಅರಿವು ಹಾಗೂ ಜಾಗರೂಕತೆಯನ್ನು ಹೆಚ್ಚು ಮಾಡುತ್ತವೆ. ​

ಜೀರ್ಣಕ್ರಿಯೆಗೆ ಉತ್ತಮ: ಬ್ಲ್ಯಾಕ್ ಟೀ ಅಲ್ಲಿ ಟ್ಯಾನಿನ್ಸ್ (Tannins) ಎಂಬ ರಾಸಾಯನಿಕವಿದೆ. ಇದು ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಮಲಬದ್ಧತೆಯನ್ನು ಹೋಗಲಾಡಿಸುತ್ತದೆ.

ರೋಗನಿರೋಧಕ ಶಕ್ತಿ ಹೆಚ್ಚಿಸುತ್ತೆ: ಬ್ಲ್ಯಾಕ್ ಚಹಾದಲ್ಲಿನ ಉತ್ಕರ್ಷಣ ನಿರೋಧಕಗಳು (Antioxidants) ಮತ್ತು ಆಂಟಿಮೈಕ್ರೊಬಿಯಲ್ (Antimicrobial) ಗುಣಲಕ್ಷಣಗಳು ರೋಗ ನಿರೋಧಕ ಶಕ್ತಿಯನ್ನು ಬಲಗೊಳಿಸುತ್ತವೆ. ದೇಹವನ್ನು ಇತರೆ ಸೋಂಕುಗಳಿಂದ ಕಾಪಾಡುತ್ತವೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Black Tea
Advertisment