Advertisment

ಚಿಯಾ ಬೀಜಗಳಲ್ಲಿ ಆರೋಗ್ಯ ರಹಸ್ಯ ಒಂದಾ, ಎರಡಾ.. ಈ ಸೀಡ್ಸ್​​ ಇಂದ ಏನೆಲ್ಲ ಉಪಯೋಗವಿದೆ?

ಚಿಯಾ ಸೀಡ್ಸ್​ ಸಣ್ಣದಾಗಿ ಅಂಡಾಕಾರದಲ್ಲಿ ಕಪ್ಪು ಹಾಗೂ ಬೂದು ಬಣ್ಣದಿಂದ ಇರುತ್ತವೆ. ಇವು ಪೌಷ್ಟಿಕಾಂಶ ಭರಿತವಾಗಿದ್ದು, ಫೈಬರ್, ಪ್ರೋಟೀನ್ ಮತ್ತು ಒಮೆಗಾ-3 ಕೊಬ್ಬಿನಾಮ್ಲಗಳಿಂದ ಸಮೃದ್ಧವಾಗಿವೆ.

author-image
Bhimappa
chia_seeds
Advertisment

ಇತ್ತೀಚೆಗೆ ಕೆಲವ ಜನರು ತಮ್ಮ ಆಹಾರಕ್ರಮದಲ್ಲಿ ಚಿಯಾ ಬೀಜಗಳನ್ನು ಉಪಯೋಗಿಸುತ್ತಿದ್ದಾರೆ. ಏಕೆಂದರೆ ಈ ಚಿಯಾ ಬೀಜಗಳಿಂದ ನಮ್ಮ ಆರೋಗ್ಯಕ್ಕೆ ಬೇಕಾದ ಅಂಶಗಳು ಗೊತ್ತಾದರೆ ನೀವು ಕೂಡ ಬಳಕೆ ಮಾಡಲು ಶುರು ಮಾಡುತ್ತೀರಿ. ಚಿಯಾ ಸೀಡ್ಸ್​ ಸಣ್ಣದಾಗಿ ಅಂಡಾಕಾರದಲ್ಲಿ ಕಪ್ಪು ಹಾಗೂ ಬೂದು ಬಣ್ಣದಿಂದ ಇರುತ್ತವೆ. ಇವು ಪೌಷ್ಟಿಕಾಂಶ ಭರಿತವಾಗಿದ್ದು, ಫೈಬರ್, ಪ್ರೋಟೀನ್ ಮತ್ತು ಒಮೆಗಾ-3 ಕೊಬ್ಬಿನಾಮ್ಲಗಳಿಂದ ಸಮೃದ್ಧವಾಗಿವೆ. 

Advertisment

ಡಯೆಟ್ ಹಾಗೂ ತೂಕ ಇಳಿಸುವವರ ಆಹಾರದಲ್ಲಿ ಮೊದಲ ಸ್ಥಾನ ಪಡೆದಿರುತ್ತದೆ ಈ ಚಿಯಾ ಬೀಜಗಳು. ಕೇವಲ ದೇಹದ ಭಾರ ಕಡಿಮೆ ಮಾಡುವುದಲ್ಲ, ರಕ್ತದಲ್ಲಿ ಸಕ್ಕರೆ ಪ್ರಮಾಣ ಕಡಿಮೆ ಮಾಡುತ್ತದೆ. ಹೃದಯ ತೊಂದರೆ ಹೋಗಲಾಡಿಸುತ್ತದೆ. ಮೂಳೆಗಳನ್ನ ಸ್ಟ್ರಾಂಗ್ ಮಾಡುತ್ತದೆ. ಒಮೆಗಾ-3 ಕೊಬ್ಬಿನಾಮ್ಲಗಳು, ಫೈಬರ್ ಹೃದಯದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತವೆ. 

ಚಿಯಾ ಸೀಡ್ಸ್​ನಲ್ಲಿನ ಉಪಯೋಗ

ಸೌಂದರ್ಯವರ್ಧಕಗಳಲ್ಲಿ ಚಿಯಾ ಬೀಜಗಳನ್ನು ಬಳಸಲಾಗುತ್ತದೆ. ಇದು ಚರ್ಮ ಹಾಗೂ ಕೂದಲಿನ ಆರೋಗ್ಯಕ್ಕೆ ಉತ್ತಮವಾಗಿದೆ ಎನ್ನಲಾಗಿದೆ. ಚರ್ಮದ ಉರಿಯೂತದಿಂದ ಉಪಶಮನ ನೀಡುತ್ತವೆ. ಸೂರ್ಯನ ಶಾಖದಿಂದ ಚರ್ಮಕ್ಕೆ ಆಗುವ ಹಾನಿಯನ್ನು ತಪ್ಪಿಸಲು ಚರ್ಮದ ತಡೆಗೋಡೆಗಳನ್ನ ಬಲಪಡಿಸುತ್ತವೆ. ಮೊಡವೆಗಳನ್ನು ದೂರ ಮಾಡುತ್ತವೆ. 

ಇದನ್ನೂ ಓದಿ: ಯಾಕೆ ಎಂದು ಪ್ರಶ್ನೆ ಮಾಡೋ ಪತ್ರಿಕೋದ್ಯಮ ಮೈ ಮರೆಯುತ್ತಿದೆ, ಇದು ಅಪಾಯ; KV ಪ್ರಭಾಕರ್

Advertisment

chia_seed

ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಚಿಯಾ ಬೀಜಗಳು ಸಹಾಯ ಮಾಡುತ್ತವೆ. ವಿಶೇಷವಾಗಿ ಮಧುಮೇಹ ಇರುವವರಿಗೆ ಇದು ಪ್ರಯೋಜನಕಾರಿ ಆಗಿದೆ. ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುತ್ತದೆ. 

ಚಿಯಾ ಬೀಜಗಳಲ್ಲಿರುವ ನಾರಿನ ಅಂಶವೂ ರಕ್ತದಲ್ಲಿನ ಕೊಲೆಸ್ಟ್ರಾಲ್ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. ಹೃದಯದಲ್ಲಿ ಉರಿಯೂತ ಇದ್ದರೇ ಅದನ್ನು ಕಡಿಮೆ ಮಾಡುತ್ತದೆ.     

ಮೂಳೆ ಖನಿಜ ಸಾಂದ್ರತೆಯನ್ನು ಕಾಪಾಡಿಕೊಳ್ಳಲು ಈ ಚಿಯಾ ಬೀಜಗಳು ಉಪಯೋಗಕಾರಿ. ಕ್ಯಾಲ್ಸಿಯಂ, ಮೆಗ್ನಿಷೀಯಂ ಹಾಗೂ ರಂಜಕದಂತಹ ಪೋಷಕಾಂಶಗಳು ಚಿಯಾದಲ್ಲಿ ಅಧಿಕವಾಗಿರುವುದರಿಂದ ಮೂಳೆಗಳನ್ನು ಬಲಪಡಿಸುತ್ತವೆ. 

Advertisment

ನೀವು ಅನಾರೋಗ್ಯದಿಂದ ಬಳಲುತ್ತಿದರೇ ಚಿಯಾ ಬೀಜಗಳನ್ನು ತೆಗೆದುಕೊಳ್ಳಬೇಕು ಎಂದರೆ ಯಾವುದಕ್ಕೂ ಒಮ್ಮೆ ಡಾಕ್ಟರ್​ ಸಲಹೆ ಪಡೆಯಿರಿ. ವೈದ್ಯರು ಹೇಳಿದಂತೆ ತೆಗೆದುಕೊಂಡರೇ, ನಿಮ್ಮ ಆರೋಗ್ಯ ಬೇಗ ಸುಧಾರಣೆ ಆಗುತ್ತದೆ. ಯಾವುದೇ ಅಪಾಯ ಕೂಡ ಇರುವುದಿಲ್ಲ.   
  
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

kajal on eyes, health benefits Health Tips
Advertisment
Advertisment
Advertisment