/newsfirstlive-kannada/media/media_files/2025/11/13/vijaya-devarakonda-1-2025-11-13-09-14-22.jpg)
‘ದಿ ಗರ್ಲ್ ಫ್ರೆಂಡ್’ (The Girlfriend) ಸಿನಿಮಾ ಸಕ್ಸಸ್ ಕಾರ್ಯಕ್ರಮದಲ್ಲಿ ವಿಜಯ್ ದೇವರಕೊಂಡ, ರಶ್ಮಿಕಾ ಕೈಗೆ ಮುತ್ತು ಕೊಡುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ್ದಾರೆ.
ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮವು ಈ ಅನಿರೀಕ್ಷಿತ ದೃಶ್ಯವೊಂದಕ್ಕೆ ಸಾಕ್ಷಿ ಆಯಿತು. ವಿಜಯ್ ದೇವರಕೊಂಡ ಸಾರ್ವಜನಿಕವಾಗಿ ರಶ್ಮಿಕಾರ ಕೈಗೆ ಮುತ್ತಿಟ್ಟರು. ಈ ದೃಶ್ಯವನ್ನು ನೋಡಿದ ಪ್ರೇಕ್ಷಕರು ಚಪ್ಪಾಳೆ ತಟ್ಟಿ ಸಭಾಂಗಣವನ್ನು ನಡುಗಿಸಿದರು. ಆ ಸಮಯದಲ್ಲಿ, ರಶ್ಮಿಕಾ ನಾಚಿಕೆಯಿಂದ ಕೆಂಪಾಗಿದ್ದರು, ಇದು ಅಭಿಮಾನಿಗಳನ್ನು ಇನ್ನಷ್ಟು ಪ್ರಭಾವಿಸಿತು. ವಿಜಯ್ ಮುತ್ತಿಟ್ಟ ವೀಡಿಯೋಗೆ ಅಭಿಮಾನಿಗಳಿಂದ ಶುಭಾಶಯ ಮಹಾಪೂರವೇ ಹರಿದು ಬರ್ತಿದೆ.
ಇತ್ತೀಚೆಗಷ್ಟೇ ಈ ಜೋಡಿ ಎಂಗೇಜ್ ಆಗಿದೆ. ಮುಂದಿನ ವರ್ಷದ ಆರಂಭದಲ್ಲೇ ಇಬ್ಬರೂ ಹಸೆಮಣೆ ಏರಲಿದ್ದಾರೆ ಅನ್ನೋ ಮಾತುಗಳು ಕೇಳಿ ಬರ್ತಿತ್ತು. ಇದರ ಬೆನ್ನಲ್ಲೇ ಎಂಗೇಜ್ಮೆಂಟ್ ಬಳಿಕ ಸಾರ್ವಜನಿಕವಾಗಿ ಇದೇ ಮೊದಲು ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: ಸ್ನೇಹದ ವಿಚಾರಕ್ಕೆ ಫಸ್ಟ್ ಟೈಮ್ ಎಮೋಷನಲ್ ಆದ ಗಿಲ್ಲಿ, ಕಾವ್ಯ..! VIDEO
Vijay Devarakonda kissing Rashmika Mandanna’s hand — the cutest moment on the internet today! 🥰💫#VijayDevarakonda#RashmikaMandanna#CutestPair#VijayRashmika#TheGirlFriend#girlfriend#rashmikapic.twitter.com/qq5fE1Ppwv
— 𝐕𝐢𝐠𝐧𝐞𝐬𝐡 🚩 (@vignesh__9) November 12, 2025
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us