/newsfirstlive-kannada/media/media_files/2025/10/03/rashmika-2025-10-03-23-27-15.jpg)
ಟಾಲಿವುಡ್ ಸ್ಟಾರ್ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅವರು ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ವಿಜಯ್ ದೇವರಕೊಂಡ ಅವರ ಮನೆಯಲ್ಲಿ ಎಂಗೇಜ್ಮೆಂಟ್​ ಸಮಾರಂಭ ಅದ್ಧೂರಿಯಾಗಿ ಮಾಡಲಾಗಿದ್ದು ಇದರಲ್ಲಿ ಎರಡು ಕಡೆಯ ಕುಟುಂಬದ ಹಿರಿಯರು, ಸಂಬಂಧಿಕರು ಮತ್ತು ಆಪ್ತ ಸ್ನೇಹಿತರ ಮಾತ್ರ ಭಾಗಿಯಾಗಿದ್ದರು ಎನ್ನಲಾಗಿದೆ.
ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ನಿಶ್ಚಿತಾರ್ಥ ಸಮಾರಂಭದಲ್ಲಿ ಕೇವಲ 2 ಕಡೆಯ ಕುಟುಂಬ ಸದಸ್ಯರು ಮತ್ತು ಕೆಲವು ಆಪ್ತರು ಮಾತ್ರ ಭಾಗವಹಿಸಿದ್ದರು. ಮುಂದಿನ ವರ್ಷ ಅಂದರೆ 2026ರ ಫೆಬ್ರವರಿಯಲ್ಲಿ ವಿವಾಹ ನಡೆಯಲಿದೆ. ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಗೀತ ಗೋವಿಂದಂ ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಅಂದಿನಿಂದ, ಅವರ ನಡುವೆ ಉತ್ತಮ ಸಂಬಂಧ ಬೆಳೆದಿದೆ. ಇದಾದ ಮೇಲೆ ಇಬ್ಬರ ಬಡುವೆ ಪ್ರೀತಿ ಹುಟ್ಟಿದೆ ಎನ್ನಲಾಗಿದೆ. ಆ ಮೇಲೆ ಡಿಯರ್ ಕಾಮ್ರೇಡ್ ಮೂವಿಯಲ್ಲಿ ಪರದೆಯನ್ನು ಹಂಚಿಕೊಂಡಿದ್ದರು.
ಇದನ್ನೂ ಓದಿ:ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ: ರಕ್ಷಿತ್ ಶೆಟ್ಟಿ ಅತ್ಯುತ್ತಮ ನಟ, ಅರ್ಚನಾ ಅತ್ಯುತ್ತಮ ನಟಿ
ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದು ಇಬ್ಬರ ಹಲವಾರು ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಸದ್ಯ ರಶ್ಮಿಕಾ ಮಂದಣ್ಣ ಬಾಲಿವುಡ್​ನಲ್ಲೂ ಫುಲ್ ಮಿಂಚುತ್ತಿದ್ದಾರೆ. ಇತ್ತೀಚೆಗೆ ವಿಜಯ್ ಕಿಂಗ್ಡಮ್ ಮೂವಿ ಮೂಲಕ ಮತ್ತೊಂದು ಹಿಟ್ ಗಳಿಸಿದ್ದಾರೆ. ರಶ್ಮಿಕಾ ಹಾಗೂ ದೇವರಕೊಂಡ ಇಬ್ಬರೂ ಸಾಲು ಸಾಲು ಸಿನಿಮಾಗಳಲ್ಲಿ ಫುಲ್ ಬ್ಯುಸಿ ಇದ್ದು ಇದರ ನಡುವೆ 2026ರ ಫೆಬ್ರುವರಿಯಲ್ಲಿ ವಿವಾಹ ಆಗುತ್ತಾರೆ ಎಂದು ಹೇಳಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ