Advertisment

ಟಾಲಿವುಡ್​ ಸ್ಟಾರ್​ ವಿಜಯ್ ದೇವರಕೊಂಡ ಕಾರು ಅಪಘಾತ.. ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಘಟನೆ

ಆಂಧ್ರಪ್ರದೇಶದ ಪುಟ್ಟಪರ್ತಿಯಿಂದ ಹೈದ್ರಾಬಾದ್​ಗೆ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಉಂಡವೆಲ್ಲಿ ಬಳಿಯ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ದೇವರಕೊಂಡ ಕಾರು ಸಂಚರಿಸುವಾಗ ಬೊಲೆರೊ ವಾಹನ ಬಂದು ಡಿಕ್ಕಿ ಹೊಡೆದಿದೆ.

author-image
Bhimappa
VIJAY_DEVARAKONDA
Advertisment

ಹೈದರಾಬಾದ್​: ಇತ್ತಿಚೇಗೆ ನಟಿ ರಶ್ಮಿಕಾ ಮಂದಣ್ಣ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಟಾಲಿವುಡ್​ ಸ್ಟಾರ್ ವಿಜಯ್ ದೇವರಕೊಂಡ ಕಾರು ಅಪಘಾತಕ್ಕೀಡಾಗಿದೆ. ಗದ್ವಾಲ್ ಜಿಲ್ಲೆ ಉಂಡವೆಲ್ಲಿ ಬಳಿಯ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಕಾರು ಆಕ್ಸಿಡೆಂಟ್ ಆಗಿದೆ.

Advertisment

ವಿಜಯ್ ದೇವರಕೊಂಡ ಅವರು ಆಂಧ್ರಪ್ರದೇಶದ ಪುಟ್ಟಪರ್ತಿಯಿಂದ ಹೈದ್ರಾಬಾದ್​ಗೆ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಉಂಡವೆಲ್ಲಿ ಬಳಿಯ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ದೇವರಕೊಂಡ ಕಾರು ಸಂಚರಿಸುವಾಗ ಬೊಲೆರೊ ವಾಹನ ಬಂದು ಡಿಕ್ಕಿ ಹೊಡೆದಿದೆ. ಸದ್ಯ ಸ್ಟಾರ್ ನಟ ವಿಜಯ್ ದೇವರಕೊಂಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

ಇದನ್ನೂ ಓದಿ: ರಶ್ಮಿಕಾ ಮಂದಣ್ಣ- ವಿಜಯ್ ದೇವರಕೊಂಡ ಎಂಗೇಜ್ಮೆಂಟ್.. ಮದುವೆ ಯಾವಾಗ..?

RASHMIKA

ವಿಜಯ್ ದೇವರಕೊಂಡ ಅವರು ಪುಟ್ಟಪರ್ತಿಗೆ ತೆರಳುತ್ತಿದ್ದಾಗ ವೇಗವಾಗಿ ತೆರಳುತ್ತಿದ್ದರು. ಈ ಸಂಬಂಧ ಟ್ರಾಫಿಕ್ ಪೊಲೀಸರು ದೇವರಕೊಂಡಗೆ ದಂಡ ವಿಧಿಸಿದ್ದರು. ಈಗ ಪುಟ್ಟಪರ್ತಿಯಿಂದ ವಾಪಸ್​ ಹೈದರಾಬಾದ್​ಗೆ ತೆರಳುವಾಗ ಅವರ ಕಾರು ಅಪಘಾತಕ್ಕೆ ಒಳಗಾಗಿದೆ. ಕಾರಿನ ಒಂದು ಬದಿ ಹಾನಿಯಾಗಿದೆ. ಇವರು ಇತ್ತೀಚೆಗಷ್ಟೇ ರಶ್ಮಿಕಾ ಜೊತೆ ದೇವರಕೊಂಡ ನಿಶ್ಚಿತಾರ್ಥ ಮಾಡಿಕೊಂಡಿದ್ದರು. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Car Accident Rashmika Mandanna, vijay devarakonda
Advertisment
Advertisment
Advertisment