/newsfirstlive-kannada/media/media_files/2026/03/04/rashmika-mandanna-21-2026-03-04-11-03-11.jpg)
ನವದಂಪತಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಇಂದು (ಮಾರ್ಚ್ 4) ಹೈದರಾಬಾದ್‌ನಲ್ಲಿ ಅದ್ಧೂರಿ ಆರತಕ್ಷತೆ (Reception) ಹಮ್ಮಿಕೊಂಡಿದ್ದಾರೆ. ಬೆನ್ನಲ್ಲೇ ರಿಸೆಪ್ಷನ್‌ಗೂ ಒಂದು ದಿನ ಮುನ್ನ ಈ ಜೋಡಿ ಅಭಿಮಾನಿಗಳನ್ನು ಭೇಟಿಯಾಗಿ, ಅವರಿಗೆ ವಿಶೇಷ ಭೋಜನ ಏರ್ಪಡಿಸಿದ್ದರು. ಈ ಸಂಭ್ರಮಾಚರಣೆಯ ಕ್ಯೂಟ್ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ವೈರಲ್ ವಿಡಿಯೋದಲ್ಲಿ ಏನಿದೆ?
ಅಭಿಮಾನಿಗಳ ಭೇಟಿ (Fan meet) ವೇಳೆ ವಿಜಯ್ ಮತ್ತು ರಶ್ಮಿಕಾ ಅವರನ್ನು ಗುಲಾಬಿ ದಳಗಳನ್ನು ಎರಚುವ ಮೂಲಕ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಅಭಿಮಾನಿಗಳೊಂದಿಗೆ ಕೈಕುಲುಕಿದ ರಶ್ಮಿಕಾ, ಅಭಿಮಾನಿಯೊಬ್ಬರ ಟಿ-ಶರ್ಟ್ ಮೇಲೆ ಆಟೋಗ್ರಾಫ್ ಹಾಕಿದರು. ಈ ನವಜೋಡಿ ಸ್ವತಃ ತಮ್ಮ ಕೈಯಾರೆ ಅಭಿಮಾನಿಗಳಿಗೆ ಊಟ ಬಡಿಸಿದರು. ಅಷ್ಟೇ ಅಲ್ಲದೆ, ರಶ್ಮಿಕಾ ಅವರು ವಿಜಯ್‌ಗೆ ತಮ್ಮ ಕೈಯಾರೆ ಊಟ ತಿನ್ನಿಸಿದ ವಿಡಿಯೋ ಗಮನ ಸೆಳೆಯುತ್ತಿದೆ. ತಮ್ಮ ಪ್ರೀತಿಯ ಸಂಕೇತವಾಗಿ ಅಭಿಮಾನಿಗಳು ಪ್ರೀತಿಯಿಂದ ಕರೆದ 'ವಿರೋಷ್' (Virosh) ಹೆಸರನ್ನೇ ಈ ಜೋಡಿ ತಮ್ಮ ಮದುವೆಗೆ ಡೆಡಿಕೇಟ್ ಮಾಡಿದ್ದಾರೆ.
ಮದುವೆ ಹಾಗೂ ಪ್ರೀ ವೆಡ್ಡಿಂಗ್ ಸಂಭ್ರಮ
ಫೆಬ್ರವರಿ 26 ರಂದು ಈ ಜೋಡಿ ಹಸೆಮಣೆ ಏರಿತ್ತು. ಬೆಳಗ್ಗೆ ವಿಜಯ್ ಅವರ ಸಂಸ್ಕೃತಿಯಂತೆ ತೆಲುಗು ಶೈಲಿಯಲ್ಲಿ ಹಾಗೂ ಸಂಜೆ ರಶ್ಮಿಕಾ ಅವರ ಪರಂಪರೆಯಂತೆ ಕೊಡವ ಶೈಲಿಯಲ್ಲಿ ವಿವಾಹ ಜರುಗಿತು. ಫೆಬ್ರವರಿ 23 ರಿಂದಲೇ ಪ್ರೀ-ವೆಡ್ಡಿಂಗ್ ಶಾಸ್ತ್ರಗಳು ಶುರುವಾಗಿದ್ದವು. ಅತಿಥಿಗಳಿಗಾಗಿ ಜಪಾನೀಸ್ ಡಿನ್ನರ್, ಪೂಲ್ ವಾಲಿಬಾಲ್, ಮತ್ತು ಫೆಬ್ರವರಿ 23 ಹಾಗೂ 24 ರಂದು 'ವಿರೋಷ್ ಪ್ರೀಮಿಯರ್ ಲೀಗ್' (VPL) ಹೆಸರಿನಲ್ಲಿ ಕ್ರಿಕೆಟ್ ಮ್ಯಾಚ್ ಆಡಲಾಗಿತ್ತು. ಫೆ. 24 ರಂದು ರೆಸಾರ್ಟ್‌ನಲ್ಲಿ ಸಂಗೀತ್, ಫೆ. 25 ರಂದು ಅರಿಶಿನ ಶಾಸ್ತ್ರ ಮತ್ತು ಮೆಹಂದಿ ಕಾರ್ಯಕ್ರಮಗಳು ನಡೆದಿದ್ದವು.
ಇದನ್ನೂ ಓದಿ:ಅಮೆರಿಕಾ ದಾಳಿಯಿಂದ ಇರಾನ್ ನಲ್ಲಿ 787 ಮಂದಿ ಸಾವು: ದಿನೇ ದಿನೇ ಸಾವಿನ ಸಂಖ್ಯೆ ಏರಿಕೆ
ಈ ವಿವಾಹ ಮಹೋತ್ಸವದಲ್ಲಿ ಖ್ಯಾತ ನಿರ್ದೇಶಕರಾದ ಸಂದೀಪ್ ರೆಡ್ಡಿ ವಂಗ, ತರುಣ್ ಭಾಸ್ಕರ್, ರಾಹುಲ್ ರವೀಂದ್ರನ್, ನಟಿಯರಾದ ಈಶಾ ರೆಬ್ಬಾ, ಆಶಿಕಾ ರಂಗನಾಥ್, ಕಲ್ಯಾಣಿ ಪ್ರಿಯದರ್ಶನ್, ಸ್ಟೈಲಿಸ್ಟ್ ಶ್ರಾವ್ಯ ವರ್ಮಾ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.
ರಿಸೆಪ್ಷನ್‌ಗೆ ಮೋದಿಗೂ ಆಹ್ವಾನ
ಇಂದು ನಡೆಯಲಿರುವ ಆರತಕ್ಷತೆ ಕಾರ್ಯಕ್ರಮಕ್ಕೆ ತೆಲುಗು, ಹಿಂದಿ, ತಮಿಳು, ಮಲಯಾಳಂ ಮತ್ತು ಕನ್ನಡ ಚಿತ್ರರಂಗದ ಗಣ್ಯರು ಹಾಗೂ ರಾಜಕೀಯ ನಾಯಕರನ್ನು ಆಹ್ವಾನಿಸಲಾಗಿದೆ. ಆದರೆ ಭದ್ರತಾ ಕಾರಣಗಳಿಂದಾಗಿ ಕಾರ್ಯಕ್ರಮಕ್ಕೆ ಕೇವಲ 'ಆಹ್ವಾನಿತರಿಗಷ್ಟೇ ಪ್ರವೇಶ' ಎಂದು ಜೋಡಿಯ ತಂಡ ಸ್ಪಷ್ಟಪಡಿಸಿದೆ. ಈ ಬಗ್ಗೆ ಮಾತನಾಡಿರುವ ವಿಜಯ್ ಹಾಗೂ ರಶ್ಮಿಕಾ, "ನಿಮ್ಮ ಸುರಕ್ಷತೆ ಮತ್ತು ಸಂತೋಷ ನಮಗೆ ಎಲ್ಲಕ್ಕಿಂತ ಮಿಗಿಲಾದದ್ದು. ನಿಮ್ಮ ಆಶೀರ್ವಾದಕ್ಕೆ ನಾವು ಆಭಾರಿ. ಈ ಸಂಭ್ರಮವನ್ನು ಸುರಕ್ಷಿತವಾಗಿಡಲು ದಯವಿಟ್ಟು ಸಹಕರಿಸಿ" ಎಂದು ಮನವಿ ಮಾಡಿದ್ದಾರೆ. ವಿಶೇಷವೆಂದರೆ, ಇಂದಿನ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಆಹ್ವಾನ ನೀಡಲಾಗಿದೆ.
ಇದನ್ನೂ ಓದಿ:ಅಡುಗೆ ವಿಚಾರಕ್ಕೆ ಅತ್ತೆ-ಸೊಸೆ ಜಗಳ; ಬೆಂಗಳೂರಲ್ಲಿ ಮಾಜಿ ಐಟಿ ಉದ್ಯೋಗಿ ದುರಂತ ಅಂತ್ಯ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us