/newsfirstlive-kannada/media/media_files/2025/08/25/what-happened-to-kgf-shetty-bhai-fame-dinesh-mangalore-2025-08-25-15-22-46.jpg)
ಪುನೀತ್ ರಾಜ್ಕುಮಾರ್ ಅಭಿನಯದ ರಣವಿಕ್ರಮ, ಯಶ್ ಅಭಿನಯದ ಕೆಜಿಎಫ್, ರಕ್ಷಿತ್ ಶೆಟ್ಟಿಯವರ ಉಳಿದವರು ಕಂಡಂತೆ, ಕಿರಿಕ್ ಪಾರ್ಟಿ, ಕೆಜಿಎಫ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದ ನಟ ದಿನೇಶ್ ಮಂಗಳೂರು ನಿಧನರಾಗಿದ್ದಾರೆ.
ಇದನ್ನೂ ಓದಿ: ಮಹಿಳೆಯರೇ ಗಮನಿಸಿ.. ಕಪಾಟಿನಲ್ಲಿಟ್ಟ ಸೀರೆಗಳು ಹಾಳಾಗಬಾರದಾ? ಸೇಫ್ ಆಗಿರಿಸಲು ಹೀಗೆ ಮಾಡಿ..
ಹಿರಿಯ ನಟ ಹಾಗೂ ಕಲಾ ನಿರ್ದೇಶಕ ದಿನೇಶ್ ಮಂಗಳೂರು ಅವರು 55 ವಯಸ್ಸಿಗೆ ಕೊನೆಯುಸಿರೆಳೆದಿದ್ದಾರೆ. ಕಲಾ ನಿರ್ದೇಶಕ ದಿನೇಶ್ ಮಂಗಳೂರು ಅವರು ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಇಂದು ಬೆಳಗ್ಗೆ ಕುಂದಾಪುರದಲ್ಲಿ ನಿಧನರಾಗಿದ್ದಾರೆ.
ದಿನೇಶ್ ಮಂಗಳೂರು ರಂಗಭೂಮಿ ಹಾಗೂ ಸಿನಿಮಾ ಎರಡು ಕ್ಷೇತ್ರದಲ್ಲೂ ಜನಪ್ರಿಯತೆ ಪಡೆದುಕೊಂಡಿದ್ದರು. ಆದ್ರೆ, ಸ್ಯಾಂಡಲ್ವುಡ್ನ ದೊಡ್ಡ ಬಜೆಟ್ ಸಿನಿಮಾವೊಂದರ ಭಾಗ-1ರ ಶೂಟಿಂಗ್ ಸಮಯದಲ್ಲಿ ದಿನೇಶ್ ಮಂಗಳೂರು ಪಾರ್ಶ್ವ ವಾಯುವಿಗೆ ಒಳಗಾಗಿದ್ದರು. ಈ ಸಂಬಂಧ ಅವರು ಕುಂದಾಪುರ ಕೋಟೇಶ್ವರದ ಸರ್ಜನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬಳಿಕ ಅಲ್ಲಿಂದ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದ ಮೇಲೆ ಕುಂದಾಪುರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಆದರೆ ಮತ್ತೆ ಕಳೆದ ವಾರ ತೀವ್ರ ಅಸ್ವಸ್ಥರಾಗಿದ್ದ ದಿನೇಶ್ ಮಂಗಳೂರು ಅವರನ್ನ ಸರ್ಜನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಇಂದು ಮುಂಜಾನೆ ಸರ್ಜನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸಿದೆ ನಿಧನ ಹೊಂದಿದ್ದಾರೆ. 1970 ಜನವರಿ 01 ರಂದು ಜನಿಸಿದ್ದರು. ಕೊಲ್ಲೂರಿನ ಸರ್ಕಾರಿ ಶಾಲೆಯಲ್ಲಿ ಇವರು ವಿದ್ಯಾಭ್ಯಾಸ ಮಾಡಿದ್ದರು. ನಂತರದ ಜೀವನದಲ್ಲಿ ಭಾರತಿ ಪೈ ಅವರನ್ನು ವಿವಾಹವಾಗಿದ್ದರು. ಈ ದಂಪತಿಗೆ ಸೂರ್ಯ ಸಿದ್ಧಾರ್ಥ್, ಸಾಜನ್ ಪೈ ಎನ್ನುವ ಇಬ್ಬರು ಗಂಡು ಮಕ್ಕಳಿದ್ದಾರೆ. ಸದ್ಯ ಪತ್ನಿ ಹಾಗೂ ಮಕ್ಕಳನ್ನು ದಿನೇಶ್ ಮಂಗಳೂರು ಅವರು ಅಗಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ