ಕನ್ನಡದ ಖ್ಯಾತ ಗಾಯಕ, ಸಂಗೀತ ನಿದೇರ್ಶಕ ರಘು ದೀಕ್ಷಿತ್ 2ನೇ ಇನ್ನಿಂಗ್​ ಆರಂಭಿಸ್ತಿದ್ದಾರೆ.. ಅಂದ್ರೆ, ರಘು ದೀಕ್ಷಿತ್​ ಎರಡನೇ ಮದುವೆಗೆ ಸಜ್ಜಾಗ್ತಿದ್ದಾರೆ. ಹುಡುಗಿ ಬೇರೆ ಯಾರು ಅಲ್ಲ, ಕನ್ನಡದ ಖ್ಯಾತ ಗಾಯಕಿ, ಗ್ರ್ಯಾಮಿ-ನಾಮನಿರ್ದೇಶಿತ ಗಾಯಕಿ ವಾರಿಜಶ್ರೀ ವೇಣುಗೋಪಾಲ್. ಇದೇ ತಿಂಗಳ 26ನೇ ತಾರೀಕು ರಘು ವಾರಿಜಾ ಜೋಡಿ ಜಯನಗರದ 1st ಬ್ಲಾಕ್​ನ ಶ್ರೀ ಸಾಯಿ ಕನ್ವೆನ್ಷನ್​ ಹಾಲ್​ನಲ್ಲಿ ಸಪ್ತಪದಿ ತುಳಿಯಲಿದ್ದಾರೆ..
ಈ ಬಗ್ಗೆ ಮಾತ್ನಾಡಿರೋ ರಘು ದೀಕ್ಷಿತ್​, ಇದನ್ನು ನಾನು ನಿರೀಕ್ಷೆ ಮಾಡಿರಲಿಲ್ಲ. ನನ್ನ ಬದುಕಿನ ಉಳಿದ ದಿನಗಳನ್ನು ಒಂಟಿಯಾಗಿಯೇ ಕಳೆಯಲು ನಿರ್ಧರಿಸಿದ್ದೆ. ಆದರೆ, ಆರಂಭದಲ್ಲಿ ನಮ್ಮಿಬ್ಬರ ನಡುವೆ ಇದ್ದ ಸ್ನೇಹ ಪ್ರೀತಿಯಾಗಿ ಬದಲಾಯಿತು. ವಾರಿಜಶ್ರೀ ಪೋಷಕರ ಆಶೀರ್ವಾದದಿಂದ ನಮ್ಮ ಬದುಕಿನ ಈ ಹೊಸ ಅಧ್ಯಾಯ ಆರಂಭ ಆಗುತ್ತಿದೆ" ಎಂದು ಹೇಳಿದ್ದಾರೆ.
ಇದನ್ನೂ ಓದಿ: ಇಬ್ಬರು ಯುವತಿಯರ ಜೊತೆ ಹಸೆಮಣೆ ಏರಿದ ಭೂಪ..!
ಅಂದ್ಹಾಗೆ ರಘು ದೀಕ್ಷಿತ್​ಗೆ ಇದು ಎರಡನೇ ಮದುವೆ. ರಘು ದೀಕ್ಷಿತ್​ ಕೊರಿಯೋಗ್ರಾಫರ್ ಹಾಗೂ ಡ್ಯಾನ್ಸರ್ ಆಗಿದ್ದ ಮಯೂರಿ ಉಪಾಧ್ಯರನ್ನು ಮದುವೆ ಆಗಿದ್ದರು. ಆದ್ರೆ, ವೈವಾಹಿಕ ಜೀವನದಲ್ಲಿ ಬಿರುಕು ಮೂಡಿ 2019ರಲ್ಲಿ ಇಬ್ಬರು ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದುಕೊಂಡ್ರು.
ಅಂದ್ಹಾಗೆ ವಾರಿಜಶ್ರೀ ಯಾರು? ಎಲ್ಲಿಯವರು ಅನ್ನೋ ಕುತೂಹಲ ಕೆಲವ್ರಿಗೆ ಇದ್ದೆ ಇದೆ.. ವಾರಿಜಶ್ರೀ ಮೂಲತಃ ಮೈಸೂರಿನವರು. ಸಂಗೀತ ಕುಟುಂಬದಲ್ಲಿ ಜನಿಸಿರುವ ವಾರಿಜಶ್ರೀ ಕೂಡ ಕೊಳಲುವಾದಕಿಯಾಗಿ, ಗಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ವಾರಿಜಶ್ರೀ ತಂದೆ ವೇಣುಗೋಪಾಲ್ ಹಾಗೂ ಟಿವಿ ರಮಾ ಇಬ್ಬರೂ ಕೂಡ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದವರೇ.
ಹೀಗಾಗಿ ವಾರಿಜಶ್ರೀ ಕೂಡ ಚಿಕ್ಕ ವಯಸ್ಸಿನಲ್ಲಿಯೇ ಸಂಗೀತ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ್ದರು. ಕರ್ನಾಟಕ ಸಂಗೀತ ಹಾಗೂ ಜಾಜ್ ಪ್ರಕಾರ ಸಂಗೀತ ಶೈಲಿಯಲ್ಲಿ ಗುರುತಿಸಿಕೊಂಡಿದ್ದಾರೆ. 2024ರಲ್ಲಿ ಸಂಗೀತ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿ ಗ್ರ್ಯಾಮಿಗೆ ನಾಮಿನೇಟ್ ಆಗಿದ್ದರು. ರಘು ದೀಕ್ಷಿತ್ ಜೊತೆ ವಾರಿಜಶ್ರೀ ವೇಣುಗೋಪಾಲ್ ಹಲವು ವೇದಿಕೆಗಳಲ್ಲಿ ಜೊತೆಯಾಗಿ ಕಾರ್ಯಕ್ರಮ ಕೊಟ್ಟಿದ್ದಾರೆ. ಟಗರು, ಡಾರ್ಲಿಂಗ್, ಆಚಾರ್ ಅಂಡ್ ಕೋ ಸೇರಿದಂತೆ ಹಲವು ಸಿನಿಮಾಗಳಿಗೆ ಹಾಡು ಹಾಡಿದ್ದಾರೆ. ಸಂಗೀತ ಸಂಜೆಗಳಲ್ಲಿ ಭಾಗಿಯಾಗಿದ್ದಾರೆ. ಇಬ್ಬರೂ ಮೈಸೂರಿನವರೇ ಆಗಿರೋದು ಇನ್ನೊಂದು ವಿಶೇಷ.
ಇದನ್ನೂ ಓದಿ:ನಾಳೆ ರಾತ್ರಿ ಹಾಸನಾಂಬೆ ದರ್ಶನ ಇರಲ್ಲ ಎಂದ ಜಿಲ್ಲಾಡಳಿತ : ನಿತ್ಯ 2-3 ಲಕ್ಷ ಭಕ್ತರಿಂದ ದೇವರ ದರ್ಶನ
ಅಂದ್ಹಾಗೆ ಇಬ್ಬರೂ ತುಂಬಾ ವರ್ಷಗಳ ಗೆಳೆಯರಾಗಿದ್ದು, ಹಲವು ವೇದಿಕೆಗಳಲ್ಲಿ ಒಟ್ಟಿಗೆ ಕಾರ್ಯಕ್ರಮ ನೀಡಿದ್ದಾರೆ. ಟಗರು, ಡಾರ್ಲಿಂಗ್, ಆಚಾರ್ ಅಂಡ್ ಕೋ ಸೇರಿದಂತೆ ಹಲವು ಸಿನಿಮಾಗಳಿಗೆ ಹಾಡು ಹಾಡಿದ್ದಾರೆ. ಸದ್ಯ ಇಬ್ಬರು ಬಾಳ ಪಯಣದಲ್ಲಿ ಜೊತೆಯಾಗ್ತಿದ್ದಾರೆ.. ರಘು ದೀಕ್ಷಿತ್‌ಗೆ ಈಗ 50 ವರ್ಷ ಹಾಗೇ ವಾರಿಜಶ್ರೀ ವೇಣುಗೋಪಾಲ್‌ಗೆ 34 ವರ್ಷ. ಇಬ್ಬರ ನಡುವೆ 16 ವರ್ಷಗಳ ವಯಸ್ಸಿನ ಅಂತರವಿದೆ. ಒಟ್ನಲ್ಲಿ, ರಘು ದೀಕ್ಷಿತ್​ ಜೀವನದ ಎರಡನೇ ಇನ್ನಿಂಗ್ಸ್​ ಆರಂಭಿಸಿದ್ದು, ಈ ಇಬ್ಬರ ವೈವಾಹಿಕ ಜೀವನಕ್ಕೆ ನಾವು ಕೂಡ ಶುಭಕೋರಣ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ