/newsfirstlive-kannada/media/media_files/2025/10/17/ctr-marige-2025-10-17-12-44-51.jpg)
ಚಿತ್ರದುರ್ಗ: ಚಿತ್ರದುರ್ಗ ನಗರದ ಎಂ.ಕೆ ಪ್ಯಾಲೆಸ್​ ಹಾಲ್​ನಲ್ಲಿ ಇಬ್ಬರು ವಧುಗಳ ಜೊತೆ ಒಬ್ಬ ವರ ಸಪ್ತಪದಿ ತುಳಿದಿದ್ದಾನೆ. ವಸೀಂ ಶೇಕ್ ಎಂಬ ಯುವಕ ಶೈಪಾ ಶೇಕ್ ಹಾಗು ಜನ್ನತ್ ಮುಖಂದರ್ ಎಂಬ ಯುವತಿಯರ ಜೊತೆ ಹಸೆಮಣೆಯೇರಿದ್ದಾನೆ.
ಈ ವಿಶಿಷ್ಟ ಮದುವೆಯು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಕುಟುಂಬದ ಸಮ್ಮುಖದಲ್ಲೇ ಈ ಮದುವೆಯಾಗಿರುವುದು ವಿಶೇಷವಾಗಿದೆ. ಸದ್ಯ ಯುವತಿಯರ ಜೊತೆ ಕ್ಯಾಮೆರಾಗೆ ಪೋಸ್ ಕೊಟ್ಟು, ವಧುಗಳನ್ನು ಕೈ ಹಿಡಿದು ವರ ಅಪ್ಪಿಕೊಂಡ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ಒಂದು ಸಂಸಾರವನ್ನೇ ನಿಭಾಯಿಸಲಾಗದ ಈ ಕಾಲದಲ್ಲಿ, ಇಬ್ಬರು ಯುವತಿಯರನ್ನು ಮದುವೆಯಾಗಿರುವ ಈ ಭೂಪನ ಧೈರ್ಯ ಮೆಚ್ಚಲೇಬೇಕು ಅಂತಿದ್ದಾರೆ ಜನ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us