/newsfirstlive-kannada/media/media_files/2025/10/17/sj-tweet-1-2025-10-17-11-34-39.jpg)
ಸಿಲಿಕಾನ್ ಸಿಟಿ ಬೆಂಗಳೂರಿಗೆ ಕಾರ್ಮೋಡ ಆವರಿಸಿದೆ.. ಪದೇ ಪದೇ ಟ್ರಾಫಿಕ್, ರಸ್ತೆ ಗುಂಡಿ, ಗಾರ್ಬೇಜ್ ಸಮಸ್ಯೆಗಳು ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿದೆ. ಇದೀಗ ಟ್ರಾಫಿಕ್ ಸಮಸ್ಯೆ ಬಗ್ಗೆ ಮಾಜಿ ಕ್ರಿಕೆಟರ್ ತಮ್ಮ ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
ಮಾಜಿ ಕ್ರಿಕೆಟರ್​ ಸುನಿಲ್ ಜೋಷಿ ಕೆಂಪೇಗೌಡ ಅಂತಾರಾಷ್ಟ್ರೀಯ ಏರ್​​ಪೋರ್ಟ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಕುರಿತಂತೆ ತಮ್ಮ ಟ್ವೀಟ್​ನಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಏರ್​ಪೋರ್ಟ್​ ರಸ್ತೆಯಲ್ಲಿ ಗೂಡ್ಸ್ ವಾಹನಕ್ಕೆ ಅನುಮತಿ ಬಗ್ಗೆ ಪ್ರಶ್ನೆಮಾಡಿದ ಅವರು, ಗೂಡ್ಸ್ ವಾಹನಗಳಿಗೆ ಬೆಳಗ್ಗೆ ಹೇಗೆ ಈ ರಸ್ತೆಯಲ್ಲಿ ಅನುಮತಿಸಲಾಗುತ್ತಿದೆ..? ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆವರೆಗಷ್ಟೇ ಅನುಮತಿ ಅಲ್ವೇ? ಇದನ್ನ ಹೊರತುಪಡಿಸಿ 6 ಗಂಟೆ ಬಳಿಕವೂ ಅನುಮತಿ ಯಾಕೆ..? ಎಂದು ಪ್ರಶ್ನಿಸಿದ್ದಾರೆ. ಈ ಕರಿತು ಟ್ವೀಟ್​ನಲ್ಲಿ ಸಿಎಂ ಹಾಗು ಡಿಸಿಎಂರನ್ನ ಟ್ಯಾಗ್​ ಮಾಡಿದ್ದಾರೆ.
ದಯವಿಟ್ಟು ಕ್ರಮ ಕೈಗೊಳ್ಳಿ..
ಇನ್ನೂ ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿರುವ ಸುನಿಲ್ ಜೋಷಿ, ಗೂಡ್ಸ್​ ಹಾಗು ಭಾರೀ ವಾಹನಗಳ ಸಂಚಾರದಿಂದಾಗಿ ಫಾಸ್ಟ್​ಲೈನ್​ಗಳನ್ನು ಬಂದ್ ಮಾಡ್ತಿವೆ. ಸಾಮಾನ್ಯ ಜನರು ಪ್ರಯಾಣಿಸಲು ಕಷ್ಟ ಪಡುತ್ತಿದ್ದಾರೆ. ದಯವಿಟ್ಟು ಕ್ರಮ ಕೈಗೊಳ್ಳಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ದಿನೇ ದಿನೇ ಮೂಲ ಸೌಕರ್ಯಗಳ ಕೊರತಿಯಿಂದಾಗಿ ರಾಜ್ಯ ರಾಜಧಾನಿ ಅಪಖ್ಯಾತಿಗೆ ಒಳಗಾಗುತ್ತಿದೆ. ಸಮಸ್ಯೆಗಳ ಸರಮಾಲೆಯನ್ನೇ ಹೊಂದಿರುವ ಈ ನರರಕ್ಕೆ ತುರ್ತು ಕಾಮಗಾರಿಗಳಿಗೆ ಚಾಲನೆ ನೀಡುವ ಮೂಲಕ ಸಮಸ್ಯೆಗಳಿಗೆ ಇತೀಶ್ರೀ ಹಾಡಬೇಕಿದೆ.
ಇದನ್ನೂ ಓದಿ:RSS ಕಾರ್ಯಕ್ರಮದಲ್ಲಿ ಪಾಲ್ಗೊಂಡ ನೌಕರರನ್ನ ಸಸ್ಪೆಂಡ್​​ ಮಾಡ್ತೀನಿ -ಪ್ರಿಯಾಂಕ್ ಖರ್ಗೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ