ಗ್ರಾಮೀಣಾಭಿವೃದ್ಧಿ ಇಲಾಖೆಯ ಕೆಲವು ಸಿಬ್ಬಂದಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಈ ಬಗ್ಗೆ ವರದಿ ಕೇಳಿದ್ದು, ಅಂಥವರನ್ನು ಅಮಾನತು ಮಾಡಲಾಗುವುದು ಎಂದು ಸಚಿವ ಪ್ರಿಯಾಂಕ್​ ಖರ್ಗೆ ಹೇಳಿದ್ದಾರೆ. ನಿನ್ನೆ ವಿಧಾನಸೌಧದಲ್ಲಿ ಮಾತನ್ನಾಡಿರುವ ಅವರು, ಸರ್ಕಾರಿ ನೌಕರರು ಅವರ ಕೆಲಸ ಮಾಡ್ತಿದ್ದಾರೆ ಅಂದುಕೊಂಡಿದ್ದೇವೆ. ಈಗ ಗೊತ್ತಾಗಿದೆ ಅವರು, ನಮಗಿಂತ ಹೆಚ್ಚಿನ ರಾಜಕೀಯ ಮಾಡ್ತಿದ್ದಾರೆ. ನೀವು ರೂಲ್ಸ್ ಫಾಲೋ ಮಾಡಬೇಕು. RSS ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ನನ್ನ ಇಲಾಖೆಯಲ್ಲೂ ಕೆಲವು ಪಿಡಿಓಗಳು ಭಾಗಿಯಾಗಿದ್ದಾರೆ. ಅವರನ್ನು ಸಸ್ಪೆಂಡ್ ಮಾಡ್ತೇನೆ ಎಂದಿದ್ದಾರೆ. ಪ್ರಿಯಾಂಕ್ ಖರ್ಗೆ ಏನು ಹೇಳಿದ್ದಾರೆ ಅನ್ನೋದ್ರ ವಿವರ ಮೇಲಿನ ಲಿಂಕ್​​ನಲ್ಲಿದೆ.
ಇದನ್ನೂ ಓದಿ: RSSಗೆ ಅಂಕುಶ.. ಸರ್ಕಾರಕ್ಕೆ ಡೆಡ್​ಲೈನ್ ಕೊಟ್ಟ ಕೇಸರಿ ಪಡೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ