ಕನ್ನಡದ ಖ್ಯಾತ ನಟ ರಮೇಶ್ ಅರವಿಂದ್ ನಿನ್ನೆ ಹುಟ್ಟುಹಬ್ಬ ಆಚರಿಸಿಕೊಂಡರು. ರಮೇಶ್ ಅರವಿಂದ್ ಅವರ ಹುಟ್ಟುಹಬ್ಬದ ಪ್ರಯುಕ್ತ ‘ದೈಜಿ’ ಸಿನಿಮಾದ ಟೀಸರ್ ಲಾಂಚ್ ಮಾಡಲಾಯಿತು. ಶಿವಾಜಿ ಸುರತ್ಕಲ್ ಬಳಿಕ ನಿರ್ದೇಶಕ ಆಕಾಶ್ ಶ್ರೀವತ್ಸಾ ಹಾಗೂ ರಮೇಶ್ ಅರವಿಂದ್ ಜೋಡಿಯಲ್ಲಿ ಮೋಡಿ ಮಾಡಲು ಬರುತ್ತಿರುವ ಮತ್ತೊಂದು ಸಿನಿಮಾ ಇದಾಗಿದೆ.
ಇನ್ನು ದೈಜಿ ಸಿನಿಮಾದಲ್ಲಿ ನಟ ರಮೇಶ್ ಅರವಿಂದ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಟೀಸರ್ ಮೂಲಕ ದೈಜಿ ಎಲ್ಲಾರ ಗಮನ ಸೆಳೆದಿದೆ. ದೈಜಿ ಟೀಸರ್ ಲಾಂಚ್ ಕಾರ್ಯಕ್ರಮದಲ್ಲಿ ನಟ ದಿಗಂತ್ ಅವರು ರಮೇಶ್ ಅರವಿಂದ್ ಅವರನ್ನ ಹಾಡಿ ಹೊಗಳಿದರು.
ರಮೇಶ್ ಅರವಿಂದ್ಗೆ ವಯಸ್ಸೇ ಆಗಲ್ವಾ?
ದೈಜಿ ಟೀಸರ್ ಲಾಂಚ್ ಕಾರ್ಯಕ್ರಮದಲ್ಲಿ ನಟ ದಿಗಂತ್ ಅವರು ರಮೇಶ್ ಅರವಿಂದ್ ಅವರಿಗೆ ವಯಸ್ಸೇ ಆಗಲ್ವಾ ಅಂತ ಹೇಳಿದರು. ಈ ವೇಳೆ ಕಾರ್ಯಕ್ರಮದಲ್ಲಿ ಎಲ್ಲರು ನಗೆಯ ಕಡಲಲ್ಲಿ ತೇಲಿದರು. ನಾನು ಊರಿಗೆ ಹೋಗಿದ್ದೆ. ಆಗ ನಾನು ರಮೇಶ್ ಅರವಿಂದ್ ಅವರ ಜೊತೆ ಸಿನಿಮಾ ಮಾಡ್ತೀನಿ ಅಂತ ಹೇಳಿದೆ. ಅದಿಕ್ಕೆ ಅಲ್ಲಿದ್ದ ಹೆಣ್ಮಕ್ಕಳು ರಮೇಶ್ ಅರವಿಂದ್ ಅವರಿಗೆ ವಯಸ್ಸೇ ಆಗಲ್ವಾ ಅಂತ ಕೇಳಿದ್ರು. ಆಗ ನಾನು ರಮೇಶ್ ಅರವಿಂದ್ ಅವರು ಹೈಕೋರ್ಟ್ನಿಂದ ವಯಸ್ಸಿಗೆ ಸ್ಟೇ ಆರ್ಡರ್ ತಂದಿದ್ದಾರೆ ಎಂದು ಹೇಳಿದೆ ಅನ್ನೋ ಮೂಲಕ ತಮಾಷೆ ಮಾಡಿದರು.
ಇದನ್ನು ಓದಿ:ಸಂಕಷ್ಟಗಳಿಗೆ ಸಿಲುಕಿದ್ದ ನನಗೆ ಬಿಗ್ಬಾಸ್ ತೆಲುಗು ಸುವರ್ಣಾವಕಾಶ -ಸಂಜನಾ ಗಲ್ರಾನಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ