Advertisment

ರಶ್ಮಿಕಾರ ಹೃದಯಗೆದ್ದ ಅವಳಿ ಮಕ್ಕಳು, ದೇವರಕೊಂಡಗೆ ಭಾವನಾತ್ಮಕ ಸಂದೇಶ ಕಳುಹಿಸಿದ ಮತ್ತೊಬ್ಬ ಪುಟಾಣಿ..!

ಬಹಳ ವರ್ಷಗಳಿಂದ ಪ್ರೀತಿಸುತ್ತಿದ್ದ ಟಾಲಿವುಡ್‌ನ ‘ರೌಡಿ ಬಾಯ್’ ವಿಜಯ್ ದೇವರಕೊಂಡ ಮತ್ತು ‘ನ್ಯಾಷನಲ್ ಕ್ರಶ್’ ರಶ್ಮಿಕಾ ಮಂದಣ್ಣ ಇತ್ತೀಚೆಗಷ್ಟೇ ರಾಜಸ್ಥಾನದ ಉದಯಪುರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

author-image
Ganesh Kerekuli
rashmika mandanna (29)
Advertisment

ಬಹಳ ವರ್ಷಗಳಿಂದ ಪ್ರೀತಿಸುತ್ತಿದ್ದ ಟಾಲಿವುಡ್‌ನ ‘ರೌಡಿ ಬಾಯ್’ ವಿಜಯ್ ದೇವರಕೊಂಡ ಮತ್ತು ‘ನ್ಯಾಷನಲ್ ಕ್ರಶ್’ ರಶ್ಮಿಕಾ ಮಂದಣ್ಣ ಇತ್ತೀಚೆಗಷ್ಟೇ ರಾಜಸ್ಥಾನದ ಉದಯಪುರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ನಡೆದ ಈ ವಿವಾಹ ಮಹೋತ್ಸವದ ಬಳಿಕ, ಮಾರ್ಚ್ 4ರಂದು ಹೈದರಾಬಾದ್‌ನಲ್ಲಿ ಚಿತ್ರರಂಗದ ಗಣ್ಯರಿಗಾಗಿ ಅದ್ಧೂರಿ ಆರತಕ್ಷತೆ (Reception) ಕೂಡ ಏರ್ಪಡಿಸಲಾಗಿತ್ತು.

Advertisment

ಮದುವೆಯ ಈ ಸಂಭ್ರಮದ ನಡುವೆ, ಪುಟ್ಟ ಅಭಿಮಾನಿಯೊಬ್ಬಳು ವಿಜಯ್ ಅವರನ್ನು ಕೇಳಿದ ಮುದ್ದಾದ ಪ್ರಶ್ನೆ ಹಾಗೂ ಅದಕ್ಕೆ ನಟ ನೀಡಿದ ಉತ್ತರ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

‘ನಾನು ನಿಮ್ಮ ಫ್ಯಾನ್ ಅಲ್ವಾ? ನಮಗೇನು?’

ಮದುವೆಗೆ ಕೇವಲ ಆಪ್ತರಿಗಷ್ಟೇ ಆಹ್ವಾನವಿದ್ದ ಕಾರಣ, ಅಭಿಮಾನಿಗಳಿಗೆ ನಿರಾಸೆಯಾಗಿತ್ತು. ಇದೇ ವಿಚಾರವಾಗಿ ಪುಟ್ಟ ಬಾಲಕಿಯೊಬ್ಬಳು ವಿಡಿಯೋ ಮೂಲಕ, ‘ನಾನು ನಿಮ್ಮ ಅಭಿಮಾನಿ ಅಲ್ವಾ? ನಮಗೇನು? ನನ್ನನ್ನ ಯಾಕೆ ಮದುವೆಗೆ ಕರಿಲಿಲ್ಲ?’ ಎಂದು ಅತ್ಯಂತ ಕ್ಯೂಟ್ ಆಗಿ ಪ್ರಶ್ನಿಸಿ ಬೇಸರ ವ್ಯಕ್ತಪಡಿಸಿದ್ದಳು. ಈ ಮುದ್ದಾದ ವಿಡಿಯೋ ಆನ್‌ಲೈನ್‌ನಲ್ಲಿ ಹರಿದಾಡುತ್ತಲೇ ಖುದ್ದು ವಿಜಯ್ ದೇವರಕೊಂಡ ಅವರ ಗಮನಕ್ಕೆ ಬಂದಿದೆ.

ಊಟಕ್ಕೆ ಬರುವಂತೆ ಆಹ್ವಾನಿಸಿದ ವಿಜಯ್

ಈ ಕ್ಯೂಟ್ ವಿಡಿಯೋಗೆ ಕಾಮೆಂಟ್ ಮಾಡಿರುವ ವಿಜಯ್ ದೇವರಕೊಂಡ, ಪುಟ್ಟ ಅಭಿಮಾನಿಯ ಹೃದಯ ಗೆದ್ದಿದ್ದಾರೆ. ‘ಬುಜ್ಜಿ ತಾಯಿ.. ನಿನ್ನನ್ನು ಮನೆಗೆ ಊಟಕ್ಕೆ ಕರೆಯುತ್ತೇನೆ.. ನಿನಗೆ ಇಷ್ಟವಾದ ಊಟ ಹಾಗೂ ಸಿಹಿತಿಂಡಿ (Sweets) ಯಾವುದು ಅಂತ ಹೇಳು, ಎಲ್ಲವನ್ನೂ ಮನೆಯಲ್ಲೇ ಮಾಡಿಸಿ ಒಟ್ಟಿಗೆ ಕುಳಿತು ಚೆನ್ನಾಗಿ ತಿನ್ನೋಣ’ ಎಂದು ವಿಜಯ್ ತೆಲುಗಿನಲ್ಲಿ ಅತ್ಯಂತ ಪ್ರೀತಿಯಿಂದ ಪ್ರತಿಕ್ರಿಯಿಸಿದ್ದಾರೆ. ನಟನ ಈ ಸಿಂಪಲ್ ಹಾಗೂ ಪ್ರೀತಿಯ ರಿಪ್ಲೈಗೆ ನೆಟ್ಟಿಗರು ಫಿದಾ ಆಗಿದ್ದಾರೆ.

Advertisment

rashmika mandanna (28)

ಇದನ್ನೂ ಓದಿ:ಟೀಂ ಇಂಡಿಯಾ ಗೆಲ್ಲಬೇಕು ಅಂದ್ರೆ ಇಬ್ಬರು ಸ್ಟಾರ್​​ಗಳನ್ನ ಡ್ರಾಪ್ ಮಾಡಿ -ಸುನೀಲ್ ಗವಾಸ್ಕರ್ ಆಗ್ರಹ

ಅದೇ ರೀತಿ ಚೈತ್ರಾ, ತಾರ ಎಂಬ ಅವಳಿ ಮಕ್ಕಳಿಗೂ ರಶ್ಮಿಕಾ ಮಂದಣ್ಣ ರಿಪ್ಲೈ ಮಾಡಿದ್ದಾರೆ. ನಾವು ನಿಮ್ಮಿಬ್ಬರು ಭೇಟಿ ಮಾಡಲು ಎಕ್ಸೈಟ್ ಆಗಿದ್ದೇವೆ ಎಂದು ರಿಪ್ಲೈ ಮಾಡಿದ್ದೇವೆ. ಅದನ್ನು ರಶ್ಮಿಕಾ ಮಂದಣ್ಣ ನಿನ್ನೆ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ಇದೀಗ ರಶ್ಮಿಕಾ ಅವರ ಪೋಷ್ಟ್ ಅನ್ನು ಅವಳಿ ಮಕ್ಕಳು ಶೇರ್ ಮಾಡಿ ಧನ್ಯವಾದ ತಿಳಿಸಿದ್ದಾರೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

rashmika mandanna vijay deverakonda
Advertisment
Advertisment
Advertisment