Advertisment

ಟೀಂ ಇಂಡಿಯಾ ಗೆಲ್ಲಬೇಕು ಅಂದ್ರೆ ಇಬ್ಬರು ಸ್ಟಾರ್​​ಗಳನ್ನ ಡ್ರಾಪ್ ಮಾಡಿ -ಸುನೀಲ್ ಗವಾಸ್ಕರ್ ಆಗ್ರಹ

ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಬಹುನಿರೀಕ್ಷಿತ ಟಿ20 ವಿಶ್ವಕಪ್ 2026ರ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಕಣಕ್ಕಿಳಿಯಲು ಟೀಮ್ ಇಂಡಿಯಾ ಸಜ್ಜಾಗಿದೆ. ಪ್ಲೇಯಿಂಗ್ 11 ಆಯ್ಕೆ ವಿಚಾರದಲ್ಲಿ ನಾಯಕ ಮತ್ತು ಟೀಮ್ ಮ್ಯಾನೇಜ್ಮೆಂಟ್ ಎದುರು ಕೆಲವು ಗೊಂದಲಗಳು ಇನ್ನೂ ಬಗೆಹರಿದಿಲ್ಲ.

author-image
Ganesh Kerekuli
sunil gavaskar
Advertisment

ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಬಹುನಿರೀಕ್ಷಿತ ಟಿ20 ವಿಶ್ವಕಪ್ 2026ರ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಕಣಕ್ಕಿಳಿಯಲು ಟೀಮ್ ಇಂಡಿಯಾ ಸಜ್ಜಾಗಿದೆ. ಪ್ಲೇಯಿಂಗ್ 11 ಆಯ್ಕೆ ವಿಚಾರದಲ್ಲಿ ನಾಯಕ ಮತ್ತು ಟೀಮ್ ಮ್ಯಾನೇಜ್ಮೆಂಟ್ ಎದುರು ಕೆಲವು ಗೊಂದಲಗಳು ಇನ್ನೂ ಬಗೆಹರಿದಿಲ್ಲ.

Advertisment

ಇದರ ಬೆನ್ನಲ್ಲೇ ಭಾರತದ ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್ ಅವರು ಗೌತಮ್ ಗಂಭೀರ್ ನೇತೃತ್ವದ ಟೀಮ್ ಮ್ಯಾನೇಜ್ಮೆಂಟ್‌ಗೆ ಮಹತ್ವದ ಸಲಹೆ ನೀಡಿದ್ದು, ಫೈನಲ್ ಪಂದ್ಯದ ಅಂತಿಮ 11ರ ಬಳಗದಿಂದ ಇಬ್ಬರು ಸ್ಟಾರ್ ಆಟಗಾರರನ್ನು ಕೈಬಿಡುವಂತೆ ಆಗ್ರಹಿಸಿದ್ದಾರೆ.

ಅಭಿಷೇಕ್ ಶರ್ಮಾ ಔಟ್, ರಿಂಕು ಸಿಂಗ್ ಇನ್?

ಟೂರ್ನಿಯಲ್ಲಿ ಓಪನರ್ ಅಭಿಷೇಕ್ ಶರ್ಮಾ ಅವರ ಕಳಪೆ ಫಾರ್ಮ್ ತಂಡದ ಅತಿದೊಡ್ಡ ಆತಂಕವಾಗಿದೆ. ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಗಳಿಸಿದ 55 ರನ್ ಹೊರತುಪಡಿಸಿದರೆ, ಅವರು ಈ ಟೂರ್ನಿಯಲ್ಲಿ ಗಳಿಸಿದ್ದು ಕೇವಲ 80 ರನ್ ಮಾತ್ರ. ಅಮೆರಿಕ ವಿರುದ್ಧದ ಮೊದಲ ಪಂದ್ಯಕ್ಕೂ ಮುನ್ನ ಅನಾರೋಗ್ಯಕ್ಕೀಡಾಗಿದ್ದ ಅವರು 2 ಕೆಜಿ ತೂಕ ಕಳೆದುಕೊಂಡಿದ್ದರು. ಇದು ಅವರ ಆಟದ ಮೇಲೂ ತೀವ್ರ ಪರಿಣಾಮ ಬೀರಿದಂತಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಫೈನಲ್ ಪಂದ್ಯದಿಂದ ಹೊರಗಿಡಬೇಕು ಎಂದು ಗವಾಸ್ಕರ್ ಹೇಳಿದ್ದಾರೆ.

ಇದನ್ನೂ ಓದಿ: ವಿಶ್ವಕಪ್ ಫೈನಲ್​ ಪಂದ್ಯದ ಪಿಚ್ ರಿಪೋರ್ಟ್ ಬಹಿರಂಗ..! ಯಾವ ತಂಡಕ್ಕೆ ಹೆಚ್ಚು ಲಾಭ ಇದೆ..?

Advertisment

ಇದೊಂದು ಅತ್ಯಂತ ಕಠಿಣ ನಿರ್ಧಾರ. ಅಭಿಷೇಕ್ ಶರ್ಮಾ ಐಸಿಸಿ ಟಿ20 ಶ್ರೇಯಾಂಕದಲ್ಲಿ ನಂಬರ್ 1 ಬ್ಯಾಟರ್ ಹೌದು, ಆದರೆ ಅವರು ತಮ್ಮ ತಪ್ಪುಗಳಿಂದ ಪಾಠ ಕಲಿಯುತ್ತಿಲ್ಲ. ಬೌಲರ್‌ಗಳು ಪದೇ ಪದೇ ಅವರ ಕೈಗೆ ಜಾಗ ನೀಡದೆ ಕಟ್ಟಿಹಾಕುತ್ತಿದ್ದಾರೆ ಮತ್ತು ಅವರು ಒಂದೇ ರೀತಿಯಲ್ಲಿ ಔಟ್ ಆಗುತ್ತಿದ್ದಾರೆ. ಅವರು ಇನ್ನೂ ತಮ್ಮ ಆಟವನ್ನು ಬದಲಿಸಿಕೊಂಡಿಲ್ಲ ಎಂಬುದು ನನ್ನ ಕಳವಳ ವ್ಯಕ್ತಪಡಿಸಿದ್ದಾರೆ. 

ಸಂಜು-ಇಶಾನ್ ಓಪನಿಂಗ್

ಅಭಿಷೇಕ್ ಬದಲಿಗೆ ಸಂಜು ಸ್ಯಾಮ್ಸನ್ ಜೊತೆ ಇಶಾನ್ ಕಿಶನ್ ಇನ್ನಿಂಗ್ಸ್ ಆರಂಭಿಸಬೇಕು ಹಾಗೂ ಫಿನಿಶರ್ ಆಗಿ ರಿಂಕು ಸಿಂಗ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಬೇಕು ಎಂಬುದು ಗವಾಸ್ಕರ್ ಸಲಹೆಯಾಗಿದೆ. ರಿಂಕು ಸಿಂಗ್ ಬಳಿ ಅಂತಹ ನಂಬಿಕೆಯಿದೆ. ಅವರ ದೇಹದ ಮೇಲಿರುವ ಗಾಡ್ಸ್ ಪ್ಲಾನ್ (God's plan) ಟ್ಯಾಟೂವನ್ನು ನೀವೆಲ್ಲರೂ ನೋಡಿರಬಹುದು. ಅವರಂತಹ ಆಟಗಾರರಿಗೆ ಕೆಲವೊಮ್ಮೆ ಅದೃಷ್ಟವೂ ಒಲಿಯುತ್ತದೆ, ಅದು ತಂಡಕ್ಕೆ ನೆರವಾಗಲಿದೆ ಎಂದಿದ್ದಾರೆ ಗವಾಸ್ಕರ್.

ಗವಾಸ್ಕರ್ ಸೂಚಿಸಿದ ಮತ್ತೊಂದು ಪ್ರಮುಖ ಬದಲಾವಣೆಯೆಂದರೆ, ಸ್ಪಿನ್ನರ್ ವರುಣ್ ಚಕ್ರವರ್ತಿ ಬದಲಿಗೆ ಕುಲದೀಪ್ ಯಾದವ್ ಅವರನ್ನು ಕಣಕ್ಕಿಳಿಸುವುದು. ವರುಣ್ ಚಕ್ರವರ್ತಿ ಅವರ ಆತ್ಮವಿಶ್ವಾಸ ಸದ್ಯ ಕುಸಿದಿರುವಂತೆ ಕಾಣುತ್ತಿದೆ. ಸೂಪರ್-8 ಹಂತದಿಂದ ಬಲಿಷ್ಠ ತಂಡಗಳನ್ನು ಎದುರಿಸಿದಾಗಲೆಲ್ಲಾ ಅವರು ಪರದಾಡಿದ್ದಾರೆ ಮತ್ತು ಹೆಚ್ಚು ರನ್ ಬಿಟ್ಟುಕೊಟ್ಟಿದ್ದಾರೆ. ಅಹಮದಾಬಾದ್‌ನಂತಹ ದೊಡ್ಡ ಬೌಂಡರಿಗಳಿರುವ ಮೈದಾನದಲ್ಲಿ ಕುಲದೀಪ್ ಯಾದವ್ ಅತ್ಯುತ್ತಮ ಆಯ್ಕೆಯಾಗಲಿದ್ದಾರೆ. ಏಕೆಂದರೆ ಅವರು ಎಷ್ಟೇ ಫ್ಲಾಟ್ ಪಿಚ್ (Flat Pitch) ಇದ್ದರೂ ಚೆಂಡನ್ನು ಟರ್ನ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಗವಾಸ್ಕರ್ ವಿವರಿಸಿದ್ದಾರೆ.

Advertisment

ಇದನ್ನೂ ಓದಿ: IAS ಅಧಿಕಾರಿಗಳ ವೃತ್ತಿಜೀವನ: ತರಬೇತಿ ಮುಗಿದ ಬಳಿಕ ಸಿಗುವ ಮೊದಲ ಪೋಸ್ಟಿಂಗ್ ಯಾವುದು? ಪ್ರಮೋಷನ್ ಹೇಗಿರುತ್ತೆ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

India vs New Zealand final India vs NewZealand T20 WORLD CUP 2026 T20 World Cup 2026 final
Advertisment
Advertisment
Advertisment