/newsfirstlive-kannada/media/media_files/2026/03/08/hardik-pandya-and-mahika-sharma-1-2026-03-08-11-44-29.jpg)
ಇವತ್ತು ಕ್ರಿಕೆಟ್ ಲೋಕದಲ್ಲಿ ಹೊಸ ಇತಿಹಾಸ ಸೃಷ್ಟಿಯಾಗೋದು ಖಚಿತ. ಒಂದೋ ಟೀಮ್ ಇಂಡಿಯಾ ಸತತ 2ನೇ ಬಾರಿ ಟಿ20 ವಿಶ್ವಕಪ್ ಗೆದ್ದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ, ಇಲ್ಲವೇ ನ್ಯೂಜಿಲೆಂಡ್ ಮೊದಲ ಬಾರಿಗೆ ಟ್ರೋಫಿಯನ್ನು ಮುಡಿಗೇರಿಸಿಕೊಳ್ಳಲಿದೆ.
ಗೆಲುವು ಯಾರದೇ ಆಗಿರಲಿ, ಇತಿಹಾಸದ ಪುಟದಲ್ಲಿ ಹೊಸ ಅಧ್ಯಾಯವಂತೂ ಸೇರ್ಪಡೆಯಾಗಲಿದೆ. ಈ ಹೈ-ವೋಲ್ಟೇಜ್ ಫೈನಲ್ ಕದನಕ್ಕೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನ ಪಿಚ್ (Pitch Report) ಹೇಗೆ ವರ್ತಿಸಲಿದೆ? ಎಂಬ ಕುರಿತು ಬಿಗ್ ಅಪ್ಡೇಟ್ ಒಂದು ಹೊರಬಿದ್ದಿದೆ.
ಕೆಂಪು-ಕಪ್ಪು ಮಣ್ಣಿನ ಕಾಂಬಿನೇಷನ್!
ಮಾಧ್ಯಮ ವರದಿಗಳ ಪ್ರಕಾರ, ಫೈನಲ್ ಪಂದ್ಯಕ್ಕಾಗಿ ಅಹಮದಾಬಾದ್ ಸ್ಟೇಡಿಯಂನ ಪಿಚ್ ಅನ್ನು ಕೆಂಪು ಮತ್ತು ಕಪ್ಪು ಮಣ್ಣಿನ (Red and Black soil) ಮಿಶ್ರಣದಿಂದ ಸಿದ್ಧಪಡಿಸಲಾಗಿದೆ. ಇದು ಬಹುತೇಕ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಸೆಮಿಫೈನಲ್ ಪಂದ್ಯದ ಪಿಚ್‌ನಂತೆಯೇ ವರ್ತಿಸುವ ಸಾಧ್ಯತೆಯಿದೆ. ಆ ಪಂದ್ಯದಲ್ಲಿ ಭಾರತ 253 ರನ್ ಸಿಡಿಸಿದರೆ, ಇಂಗ್ಲೆಂಡ್ 246 ರನ್ ಬಾರಿಸಿತ್ತು. ಅಂದರೆ ಫೈನಲ್ ಪಂದ್ಯದಲ್ಲೂ ರನ್ ಮಳೆ ಸುರಿಯುವುದು ಗ್ಯಾರಂಟಿ.
ಇದನ್ನೂ ಓದಿ: ಟಿ20 ವಿಶ್ವಕಪ್ 2026 ಫೈನಲ್.. ಇವತ್ತು ಭಾರತ ಗೆದ್ದರೆ ಸಿಗುವ ಬಹುಮಾನ ಎಷ್ಟು..?
ಬ್ಯಾಟರ್‌ಗಳಿಗೆ ಈ ಪಿಚ್ ಹೆಚ್ಚು ನೆರವಾಗಲಿದ್ದು, ಬೌಲರ್‌ಗಳಿಗೆ ಉತ್ತಮ ಬೌನ್ಸ್ ಸಿಗಲಿದೆ. ಹೀಗಾಗಿ, ಮೊದಲು ಬ್ಯಾಟಿಂಗ್ ಮಾಡುವ ತಂಡ 200ಕ್ಕೂ ಹೆಚ್ಚು ರನ್ ಗಳಿಸುವುದು ಇಲ್ಲಿ ಕಷ್ಟದ ಕೆಲಸವೇನಲ್ಲ ಎನ್ನಲಾಗುತ್ತಿದೆ.
ಭಾರತಕ್ಕೇ ಲಾಭ?
ಈ ವರದಿಯ ಪ್ರಕಾರ, ಹೆಡ್ ಕೋಚ್ ಗೌತಮ್ ಗಂಭೀರ್ ನೇತೃತ್ವದ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಲೀಗ್ ಹಂತದ ಪಂದ್ಯಗಳ ಪಿಚ್‌ಗಳ ಬಗ್ಗೆ ತೀವ್ರ ಅಸಮಾಧಾನ ಹೊಂದಿತ್ತು. ಹೀಗಾಗಿ, ಮ್ಯಾನೇಜ್ಮೆಂಟ್ ಪಿಚ್ ಕ್ಯುರೇಟರ್‌ಗಳ ಮುಂದೆ ತಮ್ಮ ಬೇಡಿಕೆಯನ್ನು ಇಟ್ಟಿತ್ತು. ಅಷ್ಟೇ ಅಲ್ಲ, ಫೈನಲ್ ಪಂದ್ಯದ ಪಿಚ್ ಸಿದ್ಧಪಡಿಸುವಾಗ ಭಾರತೀಯ ಮ್ಯಾನೇಜ್ಮೆಂಟ್ ತನ್ನ ಸಿಬ್ಬಂದಿಯನ್ನೂ ಕ್ಯುರೇಟರ್‌ಗಳ ಬಳಿ ನಿಗಾ ಇಡಲು ಕಳುಹಿಸಿತ್ತು ಎನ್ನಲಾಗಿದೆ. ಇದರರ್ಥ, ಭಾರತೀಯ ತಂಡದ ಬೇಡಿಕೆಗೆ ಅನುಗುಣವಾಗಿ, ಟೀಮ್ ಇಂಡಿಯಾಗೆ ಹೊಂದಿಕೆಯಾಗುವಂತೆ ಫೈನಲ್ ಪಿಚ್ ಅನ್ನು ಸಿದ್ಧಪಡಿಸಲಾಗಿದೆಯೇ ಎಂಬ ಪ್ರಶ್ನೆ ಮೂಡಿದೆ.
ಕೆಂಪು ಮಣ್ಣಿನ ಪ್ರಾಬಲ್ಯ
ಫೈನಲ್ ಪಿಚ್ ಅನ್ನು ಕೆಂಪು ಮತ್ತು ಕಪ್ಪು ಮಣ್ಣಿನ ಮಿಶ್ರಣದಿಂದ ತಯಾರಿಸಲಾಗಿದ್ದರೂ, ಇದರಲ್ಲಿ ಕೆಂಪು ಮಣ್ಣಿನ ಪ್ರಮಾಣವೇ ಅಧಿಕವಾಗಿರಲಿದೆ. ಇದರ ನೇರ ಲಾಭ ಬ್ಯಾಟರ್‌ಗಳಿಗೆ ಸಿಗಲಿದೆ. ಯಾವುದೇ ಒಂದು ತಂಡಕ್ಕೆ ಈ ಪಿಚ್‌ನಿಂದ ಸಂಪೂರ್ಣ ಲಾಭ ಸಿಗುತ್ತದೆ ಎಂದು ಹೇಳಲಾಗದಿದ್ದರೂ, ಎರಡನೇ ಸೆಮಿಫೈನಲ್‌ನಂತೆ ಫೈನಲ್ ಕದನವೂ ಹೈ-ಸ್ಕೋರಿಂಗ್ (High Scoring) ಪಂದ್ಯವಾಗಿ, ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us