Advertisment

ಹೆಡ್ ಕೋಚ್​​ಗೆ ಹೊಸ ಗರ್ಲ್‌ಫ್ರೆಂಡ್‌ ಪರಿಚಯಿಸಿದ ಪಾಂಡ್ಯ.. ಗಂಭೀರ್ ರಿಯಾಕ್ಷನ್ ಹೇಗಿತ್ತು? VIDEO

ಟಿ20 ವಿಶ್ವಕಪ್‌ ಫೈನಲ್ ಪಂದ್ಯದ ಕಾವು ಜೋರಾಗಿರುವ ಬೆನ್ನಲ್ಲೇ, ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಕುತೂಹಲಕಾರಿ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

author-image
Ganesh Kerekuli
hardik pandya and mahika sharma
Advertisment

ಟಿ20 ವಿಶ್ವಕಪ್‌ ಫೈನಲ್ ಪಂದ್ಯದ ಕಾವು ಜೋರಾಗಿರುವ ಬೆನ್ನಲ್ಲೇ, ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಕುತೂಹಲಕಾರಿ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಹಾರ್ದಿಕ್, ತಮ್ಮ ಹೊಸ ಗರ್ಲ್‌ಫ್ರೆಂಡ್ ಮಾಹಿಕಾ ಶರ್ಮಾ (Mahika Sharma) ಅವರನ್ನು ಹೆಡ್ ಕೋಚ್ ಗೌತಮ್ ಗಂಭೀರ್‌ಗೆ ಪರಿಚಯಿಸುತ್ತಿರುವುದು ಸೆರೆಯಾಗಿದೆ.

Advertisment

ಅಹಮದಾಬಾದ್‌ನಲ್ಲಿ ನಡೆದಿದ್ದೇನು?

ಭಾನುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯಕ್ಕಾಗಿ ಶುಕ್ರವಾರವೇ (ಮಾ. 6) ಭಾರತ ತಂಡ ಗುಜರಾತ್‌ಗೆ ಆಗಮಿಸಿತ್ತು. ಹಲವು ಆಟಗಾರರು ಟೀಮ್ ಬಸ್‌ನಲ್ಲಿ ಹೋಟೆಲ್‌ಗೆ ತೆರಳಿದರೆ, ಜಸ್‌ಪ್ರೀತ್ ಬುಮ್ರಾ ಮತ್ತು ಅಕ್ಷರ್ ಪಟೇಲ್ ತಮ್ಮ ಕಾರುಗಳಲ್ಲಿ ತೆರಳಿದರು.

ಇದೇ ವೇಳೆ ಈ ವೈರಲ್ ವಿಡಿಯೋ ಸೆರೆಯಾಗಿದೆ. ವಿಡಿಯೋದಲ್ಲಿ, ಹಾರ್ದಿಕ್ ಪಾಂಡ್ಯ ತಮ್ಮ ಗರ್ಲ್‌ಫ್ರೆಂಡ್ ಮಾಹಿಕಾ ಶರ್ಮಾ ಅವರನ್ನು ಗೌತಮ್ ಗಂಭೀರ್‌ಗೆ ಭೇಟಿ ಮಾಡಿಸುತ್ತಿರುವುದನ್ನು ಕಾಣಬಹುದು. ಗಂಭೀರ್ ಕೂಡ ಮುಖದಲ್ಲಿ ಸಣ್ಣದೊಂದು ಮುಗುಳ್ನಗೆ ಬೀರುತ್ತಾ, ಅತ್ಯಂತ ಸಹಜವಾಗಿ ಮಾಹಿಕಾ ಅವರನ್ನು ಮಾತನಾಡಿಸಿದ್ದಾರೆ. ಗಂಭೀರ್ ಅವರ ಈ ಸಿಂಪಲ್ ರಿಯಾಕ್ಷನ್ ಕೂಡ ನೆಟ್ಟಿಗರ ಗಮನ ಸೆಳೆದಿದೆ.

ಸ್ಟ್ಯಾಂಡ್ಸ್‌ನಲ್ಲಿ ಕಾಣಿಸಿಕೊಂಡಿದ್ದ ಮಾಹಿಕಾ - ಅಗಸ್ತ್ಯ!

ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯುದ್ದಕ್ಕೂ ಮಾಹಿಕಾ ಶರ್ಮಾ ಅವರು ಹಾರ್ದಿಕ್ ಪಾಂಡ್ಯ ಜೊತೆ ಕಾಣಿಸಿಕೊಂಡಿದ್ದಾರೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದ ವೇಳೆ, ಮಾಹಿಕಾ ಸ್ಟ್ಯಾಂಡ್ಸ್‌ನಲ್ಲಿ ಕುಳಿತು ಹಾರ್ದಿಕ್‌ಗೆ ಚಿಯರ್ ಮಾಡಿದ್ದರು. ವಿಶೇಷವೆಂದರೆ ಅವರೊಂದಿಗೆ ಹಾರ್ದಿಕ್ ಪುತ್ರ ಅಗಸ್ತ್ಯ ಕೂಡ ಇದ್ದ.

Advertisment

ಇದನ್ನೂ ಓದಿ:ಟಿ20 ವಿಶ್ವಕಪ್ 2026 ಫೈನಲ್.. ಇವತ್ತು ಭಾರತ ಗೆದ್ದರೆ ಸಿಗುವ ಬಹುಮಾನ ಎಷ್ಟು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Mahika Sharma Hardik Pandya
Advertisment
Advertisment
Advertisment