Advertisment

ಟಿ20 ವಿಶ್ವಕಪ್ 2026 ಫೈನಲ್.. ಇವತ್ತು ಭಾರತ ಗೆದ್ದರೆ ಸಿಗುವ ಬಹುಮಾನ ಎಷ್ಟು..?

ಒಂದು ತಿಂಗಳ ಸುದೀರ್ಘ ರೋಮಾಂಚಕ ಪಂದ್ಯಗಳ ಬಳಿಕ ಇದೀಗ ಫೈನಲ್ ಕದನಕ್ಕೆ ಕಾಲ ಕೂಡಿಬಂದಿದೆ. ಇವತ್ತು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಹೈ-ವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗುತ್ತಿದ್ದು, ಟ್ರೋಫಿ ಎತ್ತಿಹಿಡಿಯಲು ಸಜ್ಜಾಗಿವೆ.

author-image
Ganesh Kerekuli
SURYAKUMAR_DUBE (1)
Advertisment

ಒಂದು ತಿಂಗಳ ಸುದೀರ್ಘ ರೋಮಾಂಚಕ ಪಂದ್ಯಗಳ ಬಳಿಕ ಇದೀಗ ಫೈನಲ್ ಕದನಕ್ಕೆ ಕಾಲ ಕೂಡಿಬಂದಿದೆ. ಇವತ್ತು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಹೈ-ವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗುತ್ತಿದ್ದು, ಟ್ರೋಫಿ ಎತ್ತಿಹಿಡಿಯಲು ಸಜ್ಜಾಗಿವೆ.

Advertisment

ಗ್ರೂಪ್ ಹಂತ, ಸೂಪರ್-8, ಹಾಗೂ ಸೆಮಿಫೈನಲ್‌ನ ಕಠಿಣ ಸವಾಲುಗಳನ್ನು ಮೀರಿ ಬಂದಿರುವ ಉಭಯ ತಂಡಗಳಿಗೆ ಈ ತಿಂಗಳ ಶ್ರಮಕ್ಕಾಗಿ ಭಾರಿ ಮೊತ್ತದ ಬಹುಮಾನವೂ ಕಾದಿದೆ. ಹಾಗಾದರೆ ಇಂದು ಟೀಮ್ ಇಂಡಿಯಾ ಫೈನಲ್ ಗೆದ್ದರೆ ಬಿಸಿಸಿಐ ಖಜಾನೆಗೆ ಸೇರುವ

ಹಣವೆಷ್ಟು? ಇಲ್ಲಿದೆ ಸಂಪೂರ್ಣ ವಿವರ.

ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) 2026ರ ಟಿ20 ವಿಶ್ವಕಪ್‌ಗಾಗಿ ಒಟ್ಟು 13.5 ಮಿಲಿಯನ್ ಅಮೆರಿಕನ್ ಡಾಲರ್ ಪ್ರೈಜ್ ಪೂಲ್ (Prize pool) ಅನ್ನು ನಿಗದಿಪಡಿಸಿದೆ. ಇದು ಭಾರತೀಯ ರೂಪಾಯಿ ಲೆಕ್ಕದಲ್ಲಿ ಬರೋಬ್ಬರಿ 120 ಕೋಟಿ ರೂ.ಗಳಿಗೂ ಅಧಿಕ. ಇದೇ 120 ಕೋಟಿ ರೂ. ಗಳಿಂದ ವಿಜೇತ, ರನ್ನರ್-ಅಪ್ ಮತ್ತು ಇತರ ತಂಡಗಳಿಗೆ ಹಣ ಹಂಚಿಕೆಯಾಗಲಿದೆ.

ಚಾಂಪಿಯನ್‌ಗೆ ಭರ್ಜರಿ ಬಹುಮಾನ

ಒಂದು ವೇಳೆ ಟೀಮ್ ಇಂಡಿಯಾ ಫೈನಲ್ ಪಂದ್ಯವನ್ನು ಗೆದ್ದು ಚಾಂಪಿಯನ್ ಆದರೆ, 3 ಮಿಲಿಯನ್ ಡಾಲರ್ ಬಹುಮಾನ ಪಡೆಯಲಿದೆ. ಇದು ಭಾರತೀಯ ಕರೆನ್ಸಿಯಲ್ಲಿ ಸುಮಾರು 27.48 ಕೋಟಿ ರೂಪಾಯಿಗಳಿಗೆ ಸಮನಾಗಿದೆ. ಫೈನಲ್‌ನಲ್ಲಿ ಸೋತರೂ ಯಾವುದೇ ತಂಡ ಬರಿಗೈಯಲ್ಲಿ ಹಿಂದಿರುಗುವುದಿಲ್ಲ. ರನ್ನರ್-ಅಪ್ (ಉಪವಿಜೇತ) ಸ್ಥಾನ ಪಡೆಯುವ ತಂಡಕ್ಕೆ 1.6 ಮಿಲಿಯನ್ ಡಾಲರ್, ಅಂದರೆ ಅಂದಾಜು 14.65 ಕೋಟಿ ರೂಪಾಯಿ ಬಹುಮಾನ ಸಿಗಲಿದೆ.

Advertisment

ಇದನ್ನೂ ಓದಿ: GBA ಚುನಾವಣೆಗೆ ವೇದಿಕೆ ಸಜ್ಜು: 369 ವಾರ್ಡ್‌ಗಳ ಮೀಸಲಾತಿ ಪಟ್ಟಿ ಪ್ರಕಟ.. ಬೆಂಗಳೂರಿನ ರಾಜಕೀಯದಲ್ಲಿ ಸಂಚಲನ

ಕೇವಲ ಫೈನಲ್ ತಲುಪಿದ ತಂಡಗಳಿಗಷ್ಟೇ ಅಲ್ಲ, ಟೂರ್ನಿಯಲ್ಲಿ ಭಾಗವಹಿಸಿದ ಇತರ ತಂಡಗಳಿಗೂ ಐಸಿಸಿ ಭರ್ಜರಿ ಪ್ರೈಜ್ ಮನಿ ನೀಡಲಿದೆ.  ಸೆಮಿಫೈನಲ್ ವರೆಗೂ ಬಂದು ಮುಗ್ಗರಿಸಿದ ಪ್ರತಿಯೊಂದು ತಂಡಕ್ಕೆ ಅಂದಾಜು 7.24 ಕೋಟಿ ರೂ. ಸಿಗಲಿದೆ. ಸೂಪರ್-8 ಪ್ರವೇಶಿಸಿ ಸೆಮಿಫೈನಲ್ ತಲುಪಲು ವಿಫಲವಾದ ಪ್ರತಿ ತಂಡಕ್ಕೆ ಅಂದಾಜು 3.48 ಕೋಟಿ ರೂ. ನೀಡಲಾಗುತ್ತದೆ.

ಗ್ರೂಪ್ ಹಂತದ ತಂಡಗಳಿಗೆ: ಟೂರ್ನಿಯ ಗ್ರೂಪ್ ಹಂತದಲ್ಲೇ ಎಲಿಮಿನೇಟ್ ಆಗಿ ಹೊರಬಿದ್ದ ಪ್ರತಿಯೊಂದು ತಂಡಕ್ಕೂ ಬಹುಮಾನದ ರೂಪದಲ್ಲಿ ಅಂದಾಜು 2.29 ಕೋಟಿ ರೂ. ಸಿಗಲಿದೆ.

Advertisment

ವಿಶೇಷವೆಂದರೆ, 2024ರ ಟಿ20 ವಿಶ್ವಕಪ್‌ಗೆ ಹೋಲಿಸಿದರೆ ಈ ಬಾರಿಯ (2026) ಬಹುಮಾನದ ಮೊತ್ತದಲ್ಲಿ ಐಸಿಸಿ ಶೇಕಡಾ 20ರಷ್ಟು ಭಾರೀ ಏರಿಕೆ ಮಾಡಿದೆ. ಒಟ್ಟಿನಲ್ಲಿ ವಿಶ್ವಕಪ್ ಕಿರೀಟ ಯಾರ ಮುಡಿಗೇರಲಿದೆ ಹಾಗೂ ಈ ಭಾರಿ ಮೊತ್ತವನ್ನು ಯಾರು ತಮ್ಮದಾಗಿಸಿಕೊಳ್ಳಲಿದ್ದಾರೆ ಎಂಬ ಕುತೂಹಲಕ್ಕೆ ಅಹಮದಾಬಾದ್ ಮೈದಾನ ಸಾಕ್ಷಿಯಾಗಲಿದೆ.

ಇದನ್ನೂ ಓದಿ: ಟಿ20 ವಿಶ್ವಕಪ್ ಫೈನಲ್: ವರುಣ್ ಚಕ್ರವರ್ತಿ ಔಟ್.. ಅಭ್ಯಾಸದ ವೇಳೆ ಸಿಕ್ತು ಬಿಗ್ ಹಿಂಟ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

IND vs NZ Surya kumar Yadav T20 WORLD CUP 2026 T20 World Cup 2026 final T20 world cup
Advertisment
Advertisment
Advertisment