Advertisment

GBA ಚುನಾವಣೆಗೆ ವೇದಿಕೆ ಸಜ್ಜು: 369 ವಾರ್ಡ್‌ಗಳ ಮೀಸಲಾತಿ ಪಟ್ಟಿ ಪ್ರಕಟ.. ಬೆಂಗಳೂರಿನ ರಾಜಕೀಯದಲ್ಲಿ ಸಂಚಲನ

ಒಟ್ಟು 369 ವಾರ್ಡ್‌ಗಳಿಗೆ ಮೀಸಲಾತಿ ಪ್ರಕಟವಾಗಿದ್ದು, ಇದರಲ್ಲಿ ಮಹಿಳೆಯರಿಗೆ ಬರೋಬ್ಬರಿ 176 ವಾರ್ಡ್‌ಗಳನ್ನು ಮೀಸಲಿಡಲಾಗಿದೆ. ಮೀಸಲಾತಿ ಪಟ್ಟಿ ಪ್ರಕಟವಾಗುತ್ತಿದ್ದಂತೆ ಬೆಂಗಳೂರಿನ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿದ್ದು, ಟಿಕೆಟ್ ಆಕಾಂಕ್ಷಿಗಳ ಲೆಕ್ಕಾಚಾರಗಳು ಶುರುವಾಗಿವೆ.

author-image
Ganesh Kerekuli
GBA ELECTIONS (1)
Advertisment

ಬೆಂಗಳೂರು: ರಾಜಧಾನಿ ಜನರ ಬಹು ನಿರೀಕ್ಷಿತ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಚುನಾವಣೆಗೆ ವೇದಿಕೆ ಸಜ್ಜಾಗಿದ್ದು, ನಗರಾಭಿವೃದ್ಧಿ ಇಲಾಖೆಯು ಐದು ನಗರ ಪಾಲಿಕೆಗಳ ವ್ಯಾಪ್ತಿಯ ವಾರ್ಡ್‌ಗಳ ಮೀಸಲಾತಿ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ.
ಒಟ್ಟು 369 ವಾರ್ಡ್‌ಗಳಿಗೆ ಮೀಸಲಾತಿ ಪ್ರಕಟವಾಗಿದ್ದು, ಇದರಲ್ಲಿ ಮಹಿಳೆಯರಿಗೆ ಬರೋಬ್ಬರಿ 176 ವಾರ್ಡ್‌ಗಳನ್ನು ಮೀಸಲಿಡಲಾಗಿದೆ. ಮೀಸಲಾತಿ ಪಟ್ಟಿ ಪ್ರಕಟವಾಗುತ್ತಿದ್ದಂತೆ ಬೆಂಗಳೂರಿನ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿದ್ದು, ಟಿಕೆಟ್ ಆಕಾಂಕ್ಷಿಗಳ ಲೆಕ್ಕಾಚಾರಗಳು ಶುರುವಾಗಿವೆ.

Advertisment

ಒಟ್ಟು ವಾರ್ಡ್‌ಗಳ ಸಂಖ್ಯೆ: 369

  • ಮಹಿಳೆಯರಿಗೆ ಮೀಸಲು: 176 ವಾರ್ಡ್‌ಗಳು
  • ಸಾಮಾನ್ಯ ವರ್ಗ (General): 192 ವಾರ್ಡ್‌ಗಳು
  • ಹಿಂದುಳಿದ ವರ್ಗ 'ಎ' (BCA): 97 ವಾರ್ಡ್‌ಗಳು
  • ಪರಿಶಿಷ್ಟ ಜಾತಿ (SC): 43 ವಾರ್ಡ್‌ಗಳು
  • ಹಿಂದುಳಿದ ವರ್ಗ 'ಬಿ' (BCB): 24 ವಾರ್ಡ್‌ಗಳು
  • ಪರಿಶಿಷ್ಟ ಪಂಗಡ (ST): 7 ವಾರ್ಡ್‌ಗಳು
  • ಜಿಬಿಎ ವ್ಯಾಪ್ತಿಯ 5 ನಗರ ಪಾಲಿಕೆಗಳ ವಾರ್ಡ್‌ವಾರು ಮೀಸಲಾತಿ ವಿವರ:

1. ಬೆಂಗಳೂರು ನಗರ ಪಾಲಿಕೆ (ಒಟ್ಟು ವಾರ್ಡ್‌ಗಳು: 72)

  • ಸಾಮಾನ್ಯ ವರ್ಗ: 40
  • ಮಹಿಳೆಯರಿಗೆ: 34
  • BCA ವರ್ಗ: 19
  • SC ವರ್ಗ: 7
  • BCB ವರ್ಗ: 5
  • ST ವರ್ಗ: 1

2. ಬೆಂಗಳೂರು ಉತ್ತರ ನಗರ ಪಾಲಿಕೆ (ಒಟ್ಟು ವಾರ್ಡ್‌ಗಳು: 72)

  • ಸಾಮಾನ್ಯ ವರ್ಗ: 37
  • ಮಹಿಳೆಯರಿಗೆ: 34
  • BCA ವರ್ಗ: 19
  • SC ವರ್ಗ: 9
  • BCB ವರ್ಗ: 5
  • ST ವರ್ಗ: 2
Advertisment

3. ಬೆಂಗಳೂರು ಪಶ್ಚಿಮ ನಗರ ಪಾಲಿಕೆ (ಒಟ್ಟು ವಾರ್ಡ್‌ಗಳು: 112)

  • ಸಾಮಾನ್ಯ ವರ್ಗ: 64
  • ಮಹಿಳೆಯರಿಗೆ: 55
  • BCA ವರ್ಗ: 30
  • SC ವರ್ಗ: 9
  • BCB ವರ್ಗ: 7
  • ST ವರ್ಗ: 2

4. ಬೆಂಗಳೂರು ಪೂರ್ವ ನಗರ ಪಾಲಿಕೆ (ಒಟ್ಟು ವಾರ್ಡ್‌ಗಳು: 50)

  • ಸಾಮಾನ್ಯ ವರ್ಗ: 25
  • ಮಹಿಳೆಯರಿಗೆ: 23
  • BCA ವರ್ಗ: 14
  • SC ವರ್ಗ: 7
  • BCB ವರ್ಗ: 3
  • ST ವರ್ಗ: 1

5. ಬೆಂಗಳೂರು ಕೇಂದ್ರ ನಗರ ಪಾಲಿಕೆ (ಒಟ್ಟು ವಾರ್ಡ್‌ಗಳು: 63)

  • ಸಾಮಾನ್ಯ ವರ್ಗ: 32
  • ಮಹಿಳೆಯರಿಗೆ: 30
  • BCA ವರ್ಗ: 15
  • SC ವರ್ಗ: 11
  • BCB ವರ್ಗ: 4
  • ST ವರ್ಗ: 1
Advertisment

ಚುನಾವಣಾ ಕಣಕ್ಕೆ ರಂಗು

ಬಹಳ ದಿನಗಳಿಂದ ನನೆಗುದಿಗೆ ಬಿದ್ದಿದ್ದ ಬಿಬಿಎಂಪಿ/ಜಿಬಿಎ ಚುನಾವಣೆಗೆ ಈಗ ಅಧಿಕೃತವಾಗಿ ಮುಹೂರ್ತ ಫಿಕ್ಸ್ ಆದಂತಾಗಿದೆ. ವಾರ್ಡ್‌ವಾರು ಮೀಸಲಾತಿ ಪಟ್ಟಿ ಬಿಡುಗಡೆಯಾಗಿರುವುದರಿಂದ ಸ್ಥಳೀಯ ನಾಯಕರು, ಮಾಜಿ ಕಾರ್ಪೊರೇಟರ್‌ಗಳು ಹಾಗೂ ಹೊಸ ಆಕಾಂಕ್ಷಿಗಳು ತಮ್ಮ ತಮ್ಮ ವಾರ್ಡ್‌ಗಳಲ್ಲಿ ಪ್ರಚಾರ ಕಾರ್ಯವನ್ನು ಚುರುಕುಗೊಳಿಸಲು ಸಿದ್ಧತೆ ನಡೆಸಿದ್ದಾರೆ. ಶೀಘ್ರದಲ್ಲೇ ರಾಜ್ಯ ಚುನಾವಣಾ ಆಯೋಗವು ದಿನಾಂಕವನ್ನು ಘೋಷಿಸುವ ಸಾಧ್ಯತೆಯಿದೆ.

ಇದನ್ನೂ ಓದಿ: ವಿಶ್ವಕಪ್ ಟೂರ್ನಿಯಲ್ಲೇ ಅತೀ ಹೆಚ್ಚು ಬಾರಿ ‘ಈ ತಪ್ಪು’ ಮಾಡಿದೆ ಟೀಂ ಇಂಡಿಯಾ.. ಇವತ್ತು ಹಾಗೆ ಮಾಡಂಗಿಲ್ಲ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Greater Bengaluru Authority GBA Bengaluru News Bengaluru
Advertisment
Advertisment
Advertisment