ಅಷ್ಟೇ ಇಂಪಾರ್ಟೆಂಟ್. ಫೀಲ್ಡ್​ನಲ್ಲಿ ಸ್ವಲ್ಪ ಯಾಮಾರಿದ್ರೂ, ಫಲಿತಾಂಶ ತಲೆಕೆಳಗಾಗುತ್ತದೆ. ಬಹುಶಃ ಟೀಮ್ ಇಂಡಿಯಾಕ್ಕೆ ಫೀಲ್ಡಿಂಗ್ ಮಹತ್ವ ಇನ್ನೂ ಗೊತ್ತಿಲ್ಲ ಅಂತ ಕಾಣುತ್ತದೆ. ಪ್ರಸಕ್ತ ಟಿ-20 ವಿಶ್ವಕಪ್​ನಲ್ಲಿ ಸೂರ್ಯಕುಮಾರ್ ಯಾದವ್ ಪಡೆ, ಫೀಲ್ಡ್​​ನಲ್ಲಿ ಪರದಾಟ ನಡೆಸಿದೆ. ಇದ್ರಿಂದ ಎಷ್ಟೊ ಪಂದ್ಯಗಳಲ್ಲಿ ಸಂಕಷ್ಟಕ್ಕೂ ಸಿಲುಕಿ, ಹಿನ್ನಡೆ ಕೂಡ ಅನುಭವಿಸಿದೆ.
ಡ್ರಾಪ್ ಮಾಡಿರೋ ಕ್ಯಾಚ್​​ಗಳೆಷ್ಟು?
ಮೆಗಾ ಟೂರ್ನಿಯಲ್ಲಿ ಟೀಮ್ ಇಂಡಿಯಾ ಫೀಲ್ಡಿಂಗ್​ನಲ್ಲಿ ಅತ್ಯಂತ ಕಳಪೆ ಅನ್ನೋದು ಪ್ರೂವ್ ಆಗಿದೆ. ಮಹತ್ವದ ಪಂದ್ಯಗಳಲ್ಲಿ ಕ್ಯಾಚ್​ಗಳನ್ನ ಕೈಚೆಲ್ಲುತ್ತಿರುವ ಟೀಮ್ ಇಂಡಿಯಾ ಆಟಗಾರರು, ಭಾರೀ ಬೆಲೆಯನ್ನೇ ಕಟ್ಟಿದ್ದಾರೆ. ಟಿ-20 ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾ 8 ಪಂದ್ಯಗಳಿಂದ ಸರಿ ಸುಮಾರು 13 ಕ್ಯಾಚ್​ಗಳನ್ನ ಕೈಚೆಲ್ಲಿದೆ. ಟೂರ್ನಿಯಲ್ಲಿ ಅತಿಹೆಚ್ಚು ಕ್ಯಾಚ್​ಗಳನ್ನ ಕೈಚೆಲ್ಲಿರೋದೇ ಟೀಮ್ ಇಂಡಿಯಾ.
ಪ್ರಸಕ್ತ ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾ, ಫೀಲ್ಡಿಂಗ್​ನಲ್ಲಿ ಟಾಪ್ 5 ಲಿಸ್ಟ್​ನಲ್ಲೂ ಕಾಣಿಸಿಕೊಂಡಿಲ್ಲ. ವಿಪರ್ಯಾಸ ಅಂದ್ರೆ ಸೂರ್ಯಕುಮಾರ್ ಯಾದವ್ ಪಡೆ, ಜಿಂಬಾಬ್ವೆ ತಂಡಕ್ಕಿಂತ ಕಳಪೆಯಾಗಿದೆ. 33 ಕ್ಯಾಚ್​ಗಳನ್ನ ತೆಗೆದುಕೊಂಡಿರುವ ಸ್ಕೈ ಪಡೆಯ ಕ್ಯಾಚಿಂಗ್ ಎಫಿಶಿಯೆನ್ಸಿ 71. ಇನ್ನು ಕ್ಯಾಚಿಂಗ್ ಎಫಿಶಿಯೆನ್ಸಿಯಲ್ಲಿ ಟೀಮ್ ಇಂಡಿಯಾ ಜಿಂಬಾಬ್ವೆ, ಪಾಕ್​​ಗಿಂತ ಕೆಳಗಿದೆ. 8ನೇ ಸ್ಥಾನಕ್ಕೆ ಟೀಮ್ ಇಂಡಿಯಾ ಕುಸಿದಿದೆ.
ಇದನ್ನೂ ಓದಿ:ನಟ ದಳಪತಿ ವಿಜಯ್ ಪತ್ನಿ ಸಂಗೀತಾರಿಂದ ಕೋರ್ಟ್ ಗೆ ಮತ್ತೊಂದು ಅರ್ಜಿ: ಗಂಡನ ಮನೆಯಿಂದ ಹೊರ ಹಾಕದಂತೆ ರಕ್ಷಣೆಗೆ ಮನವಿ
ಕ್ಯಾಚ್ ವಿನ್ ಮ್ಯಾಚಸ್ ಅಂತಾರೆ. ಇದು ನೂರಕ್ಕೆ ನೂರರಷ್ಟು ಸತ್ಯ. ಒಂದು ಕ್ಯಾಚ್ ಕೈಚೆಲ್ಲಿದ್ರೆ, ಪಂದ್ಯದ ದಿಕ್ಕೇ ಬದಲಾಗಿಬಿಡುತ್ತದೆ. ಹಾಗೇ ಒಂದೇ ಒಂದು ಜೀವದಾನ ಪಡೆದ ಬ್ಯಾಟರ್, ಇತಿಹಾಸವನ್ನೇ ಬರೆದುಬಿಡುತ್ತಾನೆ. ಯಾವ ತಂಡ ಹೈ ಕ್ವಾಲಿಟಿ ಫೀಲ್ಡಿಂಗ್​ನಲ್ಲಿ ಪರಿಣಾಮಕಾರಿ ಆಗಿರುವುದಿಲ್ಲವೋ, ಆ ತಂಡವನ್ನ ವೀಕ್ ಅಂತಾಲೇ ಪರಿಗಣಿಸಲಾಗುವುದು.
ಟಿ-20 ಕ್ರಿಕೆಟ್​ನಲ್ಲಿ ಒಂದೇ ಒಂದು ಕ್ಯಾಚ್ ಡ್ರಾಪ್ ಮಾಡಿದ್ರೆ 10 ರಿಂದ 15 ರನ್​ಗಳ ಇಂಪ್ಯಾಕ್ಟ್ ಆಗಲಿದೆ. ಅದ್ರಲ್ಲೂ ಬಿಗ್​ ಮ್ಯಾಚ್​ಗಳಲ್ಲಿ ಒಂದೇ ಒಂದು ಕ್ಯಾಚ್, ಸಿಕ್ಕಾಪಟ್ಟೆ COSTLY ಆಗ್ಬಿಡುತ್ತದೆ. ಅದ್ರಲ್ಲೂ ಬಿಗ್ ಮ್ಯಾಚ್​ಗಳಲ್ಲಿ ಈ 10 ರಿಂದ 15 ರನ್​​ಗಳ ಸ್ಮಾಲ್ ಮಾರ್ಜಿನ್ ಕೂಡ, ನಿರ್ಣಾಯಕವಾಗಿಬಿಡುತ್ತದೆ. ಟಿ-20 ಕ್ರಿಕೆಟ್​ನಲ್ಲಿ ಒಂದೊಂದು ರನ್ ಅತ್ಯಾಮೂಲ್ಯ ಅನ್ನೋದನ್ನ ಮರೆಯುವ ಹಾಗಿಲ್ಲ.
ಟೀಮ್ ಇಂಡಿಯಾ ಫೀಲ್ಡಿಂಗ್ ಬಗ್ಗೆ ಟೀಮ್ ಮ್ಯಾನೇಜ್ಮೆಂಟ್​ಗೆ, ಭಾರೀ ಕಳವ ಇದೆ. ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ಸಹ, ಟೀಮ್ ಇಂಡಿಯಾ ಫೀಲ್ಡಿಂಗ್ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಆಟಗಾರರು ಫೀಲ್ಡಿಂಗ್ ಸುಧಾರಿಸಲು ಸಾಕಷ್ಟು ಕಠಿಣ ಅಭ್ಯಾಸ ನಡೆಸ್ತಿದ್ದಾರೆ. ಮೈಂಡ್​ಸೆಟ್​ನತ್ತ ಫೋಕಸ್ ಮಾಡ್ತಿದ್ದಾರೆ ಅಂತಾನು ಹೇಳಿದ್ದಾರೆ. ಮ್ಯಾನೇಜ್ಮೆಂಟ್ ಲೆವೆಲ್​ನಲ್ಲಿ ಫೀಲ್ಡಿಂಗ್​ ಬಗ್ಗೆ ಪದೇ ಪದೇ ಚರ್ಚೆ ಆಗುತ್ತಲೇ ಇದೆ. ಫೈನಲ್​ಗೂ ಮುನ್ನ ಟೀಮ್ ಇಂಡಿಯಾ ತನ್ನ ಬಿಗ್ ವೀಕ್ನೆಸ್ ಸರಿ ಪಡಿಸಿಕೊಳ್ಳಬೇಕಿದೆ. ಫೈನಲ್​ನಲ್ಲಿ ಗ್ರೇಟ್ ಫೀಲ್ಡಿಂಗ್ ಸೈಡ್ ಅನ್ನೋದನ್ನ ಪ್ರೂವ್ ಮಾಡಬೇಕಿದೆ.
ಇದನ್ನೂ ಓದಿ: ಫೈನಲ್​ಗೂ ಮುನ್ನವೇ ಟೀಂ ಇಂಡಿಯಾಗೆ ಕ್ಲೀಯರ್ ಮೆಸೇಜ್ ಪಾಸ್ ಮಾಡಿದ ನ್ಯೂಜಿಲೆಂಡ್ ಕ್ಯಾಪ್ಟನ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us