/newsfirstlive-kannada/media/media_files/2025/08/21/yash-2-2025-08-21-09-36-00.jpg)
ಕೆಜಿಎಫ್ ಭಾಗ 2 ಆದ ಮೇಲೆ ರಾಕಿಂಗ್ ಸ್ಟಾರ್ ಯಶ್​ ಸಿನಿಮಾ ಟಾಕ್ಸಿಕ್ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷ್ಯನೇ. ಕೆಲವು ವರ್ಷಗಳ ಬಳಿಕ ಯಶ್ ಅವರು ಟಾಕ್ಸಿಕ್ ಪ್ರಾಜೆಕ್ಟ್​ ಕೈಗೆತ್ತಿಕೊಂಡಿದ್ದಾರೆ. ಮಲಯಾಳಂನ ನಿರ್ದೇಶಕಿ ಗೀತು ಮೋಹನ್ ದಾಸ್​ ಡೈರೆಕ್ಷನ್​​ನಲ್ಲಿ ಮೂವಿಯ ಶೂಟಿಂಗ್ ನಡೆಯುತ್ತಿದೆ. ಇದರ ನಡುವೆ ಟಾಕ್ಸಿಕ್ ಸಿನಿಮಾದ ಬಗ್ಗೆ ಹೊಸ ಅಪ್​ಡೇಟ್​ವೊಂದು ಹೊರ ಬಿದ್ದಿದೆ.
/filters:format(webp)/newsfirstlive-kannada/media/media_files/2025/08/21/nayanatara-2025-08-21-09-36-15.jpg)
ಟಾಕ್ಸಿಕ್ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್​ಗೆ ಹೀರೋಯಿನ್ ಯಾರು ಎನ್ನುವುದು ಕನ್​ಫರ್ಮ್ ಆಗಿ ಹೇಳೋಕೆ ಸಾಧ್ಯ ಇಲ್ಲ. ಈಗಾಗಲೇ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಬ್ಯೂಟಿ, ಕನ್ನಡತಿ ರುಕ್ಮಿಣಿ ವಸಂತ್ ಅವರು ಟಾಕ್ಸಿಕ್​ಗೆ ಎಂಟ್ರಿ ಕೊಟ್ಟಿದ್ದಾರೆ. ಆದರೂ ಈ ಮೂವಿಗೆ ಇವರೇ ನಿಜವಾದ ಹೀರೋಹಿನ್, ಯಾವ ಪಾತ್ರ ಮಾಡುತ್ತಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ.
ಟಾಕ್ಸಿಕ್ ಸಿನಿಮಾ 2026ರ ಮಾರ್ಚ್​ 19ಕ್ಕೆ ಬಿಡುಗಡೆ ಆಗಲಿದೆ. ಯಶ್​ ಅಭಿನಯದ 19ನೇ ಮೂವಿಯಲ್ಲಿ ಎಷ್ಟು ಹೀರೋಯಿನ್​ಗಳು ಅಭಿನಯಿಸುತ್ತಿದ್ದಾರೆ ಎಂದು ಗೊತ್ತಾದರೆ ಅಚ್ಚರಿ ಆಗೋದು ಪಕ್ಕಾ!.
ಯಶ್ ಅಭಿನಯದ ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾದಲ್ಲಿ ಒಬ್ಬರಲ್ಲ, ಇಬ್ಬರಲ್ಲ ಬರೋಬ್ಬರಿ 5 ಹೀರೋಯಿನ್​ಗಳು ನಟಿಸುತ್ತಿದ್ದಾರೆ. ಆದರೆ ಇದರಲ್ಲಿ ಯಶ್​ಗೆ ನಾಯಕಿಯಾಗಿ ಯಾರು ಹೆಜ್ಜೆ ಹಾಕಿದ್ದಾರೆ ಎನ್ನವುದು ಮಾತ್ರ ಕನ್​ಫರ್ಮ್ ಇಲ್ಲ. ಭಾರತ ಸಿನಿ ರಂಗದ ಐವರು ಹೀರೋಯಿನ್​ಗಳು ಟಾಕ್ಸಿಕ್​ ಸಿನಿಮಾದಲ್ಲಿ ಮುಖ್ಯವಾದ ಪಾತ್ರಗಳನ್ನು ಮಾಡುತ್ತಿದ್ದಾರೆ. ಐವರು ಹೀರೋಯಿನ್​ಗಳ ಪಾತ್ರವೇನು, ಇವರು ಯಾರು ಯಾರು ಎನ್ನುವುದು ಅಭಿಮಾನಿಗಳ ಕುತೂಹಲವಾಗಿದೆ. ಸದ್ಯ ಉತ್ತರ ಮಾತ್ರ ಇಲ್ಲಿದೆ.
ಇದನ್ನೂ ಓದಿ:ಜೀವ ತೆಗೆದುಕೊಳ್ಳುವುದಾಗಿ ಸ್ನೇಹಿತರಿಗೆ ಮೆಸೇಜ್ ಮಾಡಿದ್ದ ಯುವಕ.. ಹೊಳೆ ಮಧ್ಯೆ ಪತ್ತೆ
/filters:format(webp)/newsfirstlive-kannada/media/media_files/2025/08/21/huma-2025-08-21-09-36-25.jpg)
ಸ್ಯಾಂಡಲ್​ವುಡ್ ಬ್ಯೂಟಿ ರುಕ್ಮಿಣಿ ವಂಸತ್ ಟಾಕ್ಸಿಕ್​ನಲ್ಲಿ ನಿರ್ಣಾಯಕ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ಇದರ ಜೊತೆಗೆ ಲೇಡಿ ಸೂಪರ್ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ನಯನ ತಾರಾ ಕೂಡ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಇನ್ನು ತಾರಾ ಸುತಾರಿಯಾ, ಕಿಯಾರ ಅಡ್ವಾಣಿ ಹಾಗೂ ಹುಮಾ ಖುರೇಷಿ ಅವರೂ ಯಶ್ ಸಿನಿಮಾದಲ್ಲಿ ಹೆಜ್ಜೆ ಹಾಕುತ್ತಿದ್ದಾರೆ. 5 ಹೀರೋಯಿನ್​ಗಳ ಜೊತೆ ಯಶ್ ಸಿನಿಮಾ ಮಾಡುತ್ತಿದ್ದು ಕಥೆ, ಇನ್ನೊಂದು ಲೆವೆಲ್​ಗೆ ಇರಬಹುದು ಎಂದು ಅವರ ಫ್ಯಾನ್ಸ್​ ಖುಷಿಯಲ್ಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us