ಜೀವ ತೆಗೆದುಕೊಳ್ಳುವುದಾಗಿ ಸ್ನೇಹಿತರಿಗೆ ಮೆಸೇಜ್ ಮಾಡಿದ್ದ ಯುವಕ.. ಹೊಳೆ ಮಧ್ಯೆ ಪತ್ತೆ

ಎಲ್ಲಾ ಸುಳಿವು ಆಧರಿಸಿ ಹುಡುಕಾಟ ನಡೆಸಿದ್ರೂ ಯುವಕನ ಯಾವುದೇ ಸುಳಿವು ಪತ್ತೆಯಾಗಿರಲಿಲ್ಲ. ಇದೀಗ ವಿದ್ಯುತ್ ಉತ್ಪಾದನಾ ಘಟಕದಿಂದ ಅರ್ಧ ಕಿಲೋಮೀಟರ್ ದೂರದಲ್ಲಿ ಮೃತದೇಹ ಪತ್ತೆ ಆಗಿದೆ.

author-image
Bhimappa
MDK_YOUTH
Advertisment

ಕೊಡಗು: ನಾಪತ್ತೆ ಆಗಿದ್ದ ಯುವಕನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯುತ್ ಉತ್ಪಾದನಾ ಘಟಕದಿಂದ ಅರ್ಧ ಕಿಲೋಮೀಟರ್ ದೂರದಲ್ಲಿ ಹೊಳೆಯ ಮಧ್ಯೆ ಮರದ ಬುಡದಲ್ಲಿ ಯುವಕ ಶವವಾಗಿ ಪತ್ತೆ ಆಗಿದ್ದಾನೆ. 

ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಬೀದಳ್ಳಿ ಗ್ರಾಮದದಲ್ಲಿ ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆಯಾಗಿದ್ದಾನೆ. ದೊಡ್ಡ ಹಣಕೋಡು ಗ್ರಾಮದ 25 ವರ್ಷದ ಚಿದಾನಂದ ಎಂಬ ಯುವಕ, ಕಳೆದ ಭಾನುವಾರ ರಾತ್ರಿ, ತಾನು ಕೆಲಸ ಮಾಡುತಿದ್ದ ಸ್ಥಳದಲ್ಲಿಯೇ ನೀರಿಗೆ ಧುಮುಕಿದ್ದ ಬಗ್ಗೆ ಸಿಸಿಟಿವಿಯಲ್ಲಿ ಸುಳಿವು ಸಿಕ್ಕಿತ್ತು. ಅಲ್ಲದೆ ತಾನು ಜೀವ ತೆಗೆದುಕೊಳ್ಳುವುದಾಗಿ ತನ್ನ ಸ್ನೇಹಿತರಿಗೆ ಮೊದಲೇ ಮೆಸೇಜ್ ಮಾಡಿದ್ದನು.

ಇದನ್ನೂ ಓದಿ: Facebook ಪರಿಚಯ.. ಬಾಲಕಿಯ ಭೇಟಿಗೆ ಬಂದಿದ್ದ ವ್ಯಕ್ತಿನ ಕಟ್ಟಿ ಸತತ 13 ಗಂಟೆ ಹೊಡೆದರು!

MDK_YOUTH_1

ಎಲ್ಲಾ ಸುಳಿವು ಆಧರಿಸಿ ಹುಡುಕಾಟ ನಡೆಸಿದ್ರೂ ಯುವಕನ ಯಾವುದೇ ಸುಳಿವು ಪತ್ತೆಯಾಗಿರಲಿಲ್ಲ. ಇದೀಗ ವಿದ್ಯುತ್ ಉತ್ಪಾದನಾ ಘಟಕದಿಂದ ಅರ್ಧ ಕಿಲೋಮೀಟರ್ ದೂರದಲ್ಲಿ ಹೊಳೆಯ ಮಧ್ಯೆ ಮರದ ಬುಡಕ್ಕೆ ಸಿಕ್ಕಿಕೊಂಡ ಆತನ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Facebook Kodagu
Advertisment