/newsfirstlive-kannada/media/media_files/2025/08/21/madya_pradesh_fb-2025-08-21-08-23-37.jpg)
ಭೋಪಾಲ್: ಫೇಸ್​ಬುಕ್​ನಲ್ಲಿ ಪರಿಚಯವಾಗಿದ್ದ ಅಪ್ರಾಪ್ತ ಬಾಲಕಿನ ಭೇಟಿ ಮಾಡಲು ಬಂದಿದ್ದ ವ್ಯಕ್ತಿಯ ಕೈಕಾಲು ಕಟ್ಟಿ ಬರೋಬ್ಬರಿ 13 ಗಂಟೆ ನಿರಂತರವಾಗಿ ಹೊಡೆದಿದ್ದಾರೆ ಎನ್ನಲಾಗಿದೆ. ಈ ಘಟನೆಯು ಮಧ್ಯಪ್ರದೇಶದ ಮೌಗಂಜ್‌ನ ಪಿಪ್ರಾಹಿ ಗ್ರಾಮದಲ್ಲಿ ನಡೆದಿದೆ.
ಛತ್ತೀಸ್‌ಗಢದ ಬೈಕುಂಠಪುರ ಮೂಲದ ವ್ಯಕ್ತಿ, 100 ಕಿಲೋ ಮೀಟರ್​ಗೂ ಅಧಿಕ ದೂರ ಪ್ರಯಾಣ ಮಾಡಿ, ಮಧ್ಯಪ್ರದೇಶದ ರೇವಾ ಜಿಲ್ಲೆಯ ಮೌಗಂಜ್‌ನ ಪಿಪ್ರಾಹಿ ಗ್ರಾಮಕ್ಕೆ ಬಂದಿದ್ದಾನೆ. ಫೇಸ್​​ಬುಕ್​ನಲ್ಲಿ ಪರಿಚಯವಾದ ಅಪ್ರಾಪ್ತ ಬಾಲಕಿನ ಭೇಟಿ ಮಾಡಲು ಈ ವೇಳೆ ಮುಂದಾಗಿದ್ದಾನೆ. ಆದರೆ ಪಿಪ್ರಾಹಿ ಗ್ರಾಮದಲ್ಲಿನ ಬಾಲಕಿಯ ಮನೆಗೆ ಬಂದಾಗ ಆಕೆಯ ಕುಟುಂಬಸ್ಥರು ವ್ಯಕ್ತಿಯ ಕೈ, ಕಾಲುಗಳನ್ನು ಹಗ್ಗಗಳಿಂದ ಕಟ್ಟಿ ಹಾಕಿದ್ದಾರೆ ಎನ್ನಲಾಗಿದೆ.
ರಾತ್ರಿ 9 ಗಂಟೆ ಸುಮಾರಿಗೆ ವ್ಯಕ್ತಿಯ ಕೈ, ಕಾಲುಗಳನ್ನು ಕಟ್ಟಿ ಹಾಕಿ, ಮರುದಿನ ಬೆಳಗ್ಗೆ 10 ಗಂಟೆವರೆಗೆ ನಿರಂತರವಾಗಿ ಬಾಲಕಿಯ ಕುಟುಂಬಸ್ಥರು ಅವನನ್ನ ಥಳಿಸಿದ್ದಾರೆ. ನಿರಂತರವಾಗಿ 13 ಗಂಟೆ ಹೊಡೆದಿದ್ದಾರೆ ಎನ್ನಲಾಗುತ್ತಿದೆ. ಮನಬಂದಂತೆ ವ್ಯಕ್ತಿಯನ್ನು ಥಳಿಸುತ್ತಿರುವಾಗ ಘಟನೆಯನ್ನು ಎಲ್ಲ ವಿಡಿಯೋ ಮಾಡಲಾಗಿದೆ. ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಹರಿ ಬಿಡಲಾಗಿದ್ದು ಸದ್ಯ ಎಲ್ಲೆಡೆ ಈ ವಿಡಿಯೋ ವೈರಲ್ ಆಗುತ್ತಿದೆ.
ಈ ಸಂಬಂಧ ಮಾತನಾಡಿದ ಅಲ್ಲಿನ ಪೊಲೀಸ್ ಆರ್​ಎಸ್​ ಪ್ರಜಾಪತಿ ಅವರು, ಫೇಸ್​ಬುಕ್​ನಲ್ಲಿ ಪರಿಚಯವಾಗಿದ್ದ ಹುಡುಗಿನ ಭೇಟಿಯಾಗಲು ಛತ್ತೀಸ್‌ಗಢದ ಬೈಕುಂಠಪುರ ಮೂಲದ ವ್ಯಕ್ತಿ ಬಂದಿದ್ದನು. ಅವನಿಗೆ ಹಗ್ಗ ಕಟ್ಟಿ ಹೊಡೆದಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಸಂಬಂಧ ಹನುಮಾನ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲು ಆಗಿಲ್ಲ. ಆದರೆ ಈ ಸಂಬಂಧ ಪರಿಶೀಲನೆ ನಡೆಸಿ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ