/newsfirstlive-kannada/media/media_files/2025/08/21/mahesh_thimarodi-2025-08-21-07-22-12.jpg)
ಧರ್ಮಸ್ಥಳದಲ್ಲಿ ಶ*ವಗಳನ್ನ ಹೂತು ಹಾಕಿದ ಪ್ರಕರಣ ಈಗ ಮತ್ತಷ್ಟು ಕುತೂಹಲ ಕೆರಳಿಸಿದ್ದು, ಪ್ರಕರಣದಲ್ಲಿ ಮತ್ತೊಂದು ಹೊಸ ಟ್ವಿಸ್ಟ್ ಸಿಕ್ಕಿದೆ. ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧವೂ ಅಕ್ರಮವಾಗಿ ಶವ ಹೂತ ಆರೋಪ ಹೊರಿಸಲಾಗಿದೆ. ಏನಿದು ಪ್ರಕರಣ?.
ಧರ್ಮಸ್ಥಳ ಪ್ರಕರಣ ಇಡೀ ರಾಜ್ಯಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಒಂದೆಡೆ ನೂರಾರು ಶ*ವಗಳನ್ನು ಹೂತಿಡಲಾಗಿದೆ ಎಂಬ ಅನಾಮಿಕ ದೂರು ನೀಡಿದ ಬೆನ್ನಲ್ಲೇ ಎಸ್ಐಟಿ ತನಿಖೆ ತೀವ್ರಗೊಂಡಿದ್ರೆ, ಮತ್ತೊಂದೆಡೆ ಸೌಜನ್ಯ ಪರ ಹೋರಾಟಗಳು ಇನ್ನೂ ಕೂಡ ನಡೆಯುತ್ತಲೇ ಇದೆ. ಇದರಲ್ಲಿ ಗುರುತಿಸಿಕೊಂಡಿದ್ದ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧವೇ ಇದೀಗ ಅಕ್ರಮವಾಗಿ ಶವ ಹೂತಿರುವ ಆರೋಪ ಕೇಳಿ ಬಂದಿದೆ.
ಭಾಸ್ಕರ್ ನಾಯ್ಕ್ ಎಂಬುವರಿಂದ ಎಸ್ಐಟಿಗೆ ದೂರು
ಬೆಳ್ತಂಗಡಿಯಲ್ಲಿರೋ ಎಸ್ಐಟಿ ಮೇಲೆ ಭರವಸೆ ಹೆಚ್ಚಾಗ್ತಿದ್ದು, ಮಣ್ಣಲ್ಲಿ ಮರೆಯಾಗಿರುವ ಹಳೆ ಪ್ರಕರಣಗಳಿಗೆ ಮರು ಜೀವ ಬರತೊಡಗಿದೆ. ಭಾಸ್ಕರ್ ನಾಯ್ಕ್ ಎಂಬುವರು ಬೆಳ್ತಂಗಡಿಯ ಎಸ್ಐಟಿ ಕಚೇರಿಗೆ ತೆರಳಿ, 2018ರಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ ಬಾಲಕೃಷ್ಣ ಗೌಡ ಕೇಸ್ನಲ್ಲಿ ಮಹೇಶ್ ಶೆಟ್ಟಿ ತಿಮರೋಡಿಯ ಕೈವಾಡ ಇದೆ ಎಂದು ದೂರು ದಾಖಲಿಸಿದ್ದು, ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ.
ಏನಿದು ಬಾಲಕೃಷ್ಣ ಗೌಡ ಕೇಸ್?
- 2018ರಲ್ಲಿ ಸಂಶಯಾಸ್ಪದವಾಗಿ ಸಾವನ್ನಪ್ಪಿದ್ದ ಬಾಲಕೃಷ್ಣ ಗೌಡ
- ಆತನ ಮಗ ಸುರೇಂದ್ರ ನಡುವೆ ನಿರಂತರ ಜಗಳ ಆಗ್ತಾ ಇತ್ತು
- ತಿಮರೋಡಿ ಜೊತೆ ಮಾತುಕತೆ ನಡೆಸಿ ಅಂದಿದ್ದ ಬಾಲಕೃಷ್ಣ
- ಕಾರಣ ತಿಮರೋಡಿ ಜೊತೆ ಮಗ ಸುರೇಂದ್ರ ಗುರ್ತಿಸಿಕೊಂಡಿದ್ದ
- ಹೀಗಾಗಿ ಮಾತುಕತೆ ನಡೆಸಿ ಅಂದಿದ್ದ ಮೃತ ಬಾಲಕೃಷ್ಣ ಸ್ನೇಹಿತ
- ಇದಾದ ಬಳಿಕ ನಾಪತ್ತೆಯಾಗಿದ್ದ ಸೋಂಪಯಾನೆ ಬಾಲಕೃಷ್ಣ ಗೌಡ
- ಉಜರೆಯ ಬಿಲ್ಲರೋಡಿ ಸರ್ಕಾರಿ ಜಮೀನಿನಲ್ಲಿ ಸಿಕ್ಕ ಮೃತದೇಹ
- ಬಾಲಕೃಷ್ಣ ಸಾವಿನ ಬಗ್ಗೆ ರಾಜಕೀಯ ಒತ್ತಡಕ್ಕೆ ತನಿಖೆ ಆಗಿರಲ್ಲ
- ತಿಮರೋಡಿ ಅವರೇ ಕೊಲೆ ಮಾಡಿದ್ದಾರೆ ಅಂತಿರುವ ಸ್ಥಳೀಯರು
- ಜೆಸಿಬಿ ಮೂಲಕ ಮೃತದೇಹ ಹೂತಾಕಿದ್ದಾರೆ ಅಂತಿದ್ದಾರೆ ಜನ
- ತಿಮರೋಡಿ & ಜೊತೆಗಾರರ ವಿಚಾರಣೆ ನಡೆಸಿ ಅಂತ ದೂರು
ಇದನ್ನೂ ಓದಿ:ಧರ್ಮಸ್ಥಳದ ದೇವರಾಣೆಗೂ ನನ್ನ ಮಗಳು ಇದ್ದಳು, ಸತ್ಯ; ಸುಜಾತ್ ಭಟ್ ಹೇಳುವುದೇನು?
ಬೆಳ್ತಂಗಡಿ ಠಾಣೆಯಲ್ಲಿ ಮಹೇಶ್ ತಿಮರೋಡಿ ವಿಚಾರಣೆ
ಒಂದೆಡೆ ಎಸ್ಐಟಿಯಲ್ಲಿ ತಿಮರೋಡಿ ವಿರುದ್ಧ ದೂರು ದಾಖಲಾಗಿದ್ರೆ, ಮತ್ತೊಂದೆಡೆ, ಬೆಳ್ತಂಗಡಿಯ ಪೊಲೀಸ್ ಠಾಣೆಗೆ ಮಹೇಶ್ ತಿಮರೋಡಿ ಹಾಜರಾಗಿದ್ದು ಕುತೂಹಲ ಮೂಡಿಸಿತ್ತು. ಬೆಳ್ತಂಗಡಿ ಬೆನಕ ಆಸ್ಪತ್ರೆ ಎದುರು ಅಕ್ರಮ ಕೂಟ ಸೇರಿಸಿದ ಆರೋಪ ಮೇಲೆ ತಿಮರೋಡಿ, ಗಿರೀಶ್ ಮಟ್ಟಣನವರ್ ಸೇರಿ ಪ್ರಕರಣದ ಆರೋಪಿಗಳಿಗೆ ಬೆಳ್ತಂಗಡಿಯ ಪೊಲೀಸರು ನೋಟಿಸ್ ನೀಡಿದ್ದರು. ಒಂದ್ವೇಳೆ ವಿಚಾರಣೆಗೆ ಹಾಜಗರಾಗದಿದ್ದರೆ ಬಂಧನ ಮಾಡೋದಾಗಿ ಎಚ್ಚರಿಕೆ ನೀಡಿದ್ರು.
ಇದರ ಬೆನ್ನಲ್ಲೇ ಅಲರ್ಟ್ ಆದ ತಿಮರೋಡಿ, ಗಿರೀಶ್ ಮಟ್ಟಣನವರ್ ಜೊತೆ ಠಾಣೆಗೆ ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ. ಅದೇನೆ ಇರಲಿ, ಸೌಜನ್ಯ ಪ್ರಕರಣದಲ್ಲಿ ಮೈಲೇಜ್ ತೆಗೆದುಕೊಂಡು ಮುನ್ನಲೆಗೆ ಬಂದ ಮಹೇಶ್ ತಿಮರೋಡಿಗೆ ಇದೀಗ ಎಸ್ಐಟಿ ಟೆನ್ಷನ್ ಶುರುವಾಗಿದೆ. ಭಾಸ್ಕರ್ ನಾಯ್ಕ್ ನೀಡಿರುವ ದೂರು ಸ್ವೀಕರಿಸಿರೋ ಎಸ್ಐಟಿ ತನಿಖೆ ಮಾಡೋದಾಗಿ ಭರವಸೆ ನೀಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ