/newsfirstlive-kannada/media/media_files/2025/09/05/yogaraj-bhat-and-bhuvan-ponnanna-2025-09-05-19-27-11.jpg)
ಯೋಗರಾಜ್ ಭಟ್ ಅವರ ಮುಂದಿನ ಸಿನಿಮಾ ಬಗ್ಗೆ ಬಿಗ್ ಅಪ್ಡೇಟ್ಸ್ ಸಿಕ್ಕಿದೆ. ಭುವನ್ ಪೊನ್ನಣ್ಣಗೆ ಭಟ್ಟರು ಆ್ಯಕ್ಷನ್ ಕಟ್ ಹೇಳಲಿದ್ದು, ಆ ಮೂಲಕ ಪೊನ್ನಣ್ಣ ಮತ್ತೆ ಕಂಬ್ಯಾಕ್ ಮಾಡಲಿದ್ದಾರೆ.
ಚಿತ್ರದ ಹೆಸರು ಫೈನಲ್..!
ಇನ್ನು, ಚಿತ್ರದ ಹೆಸರು ಕೂಡ ಫೈನಲ್ ಆಗಿದೆ. ಭುವನ್ ಪೊನ್ನಣ್ಣ ನಟಿಸಲಿರುವ ಚಿತ್ರಕ್ಕೆ ಭಟ್ಟರು ‘ಹಲೋ 123’ ಎಂದು ಹೆಸರಿಟ್ಟಿದ್ದಾರೆ. ವಿಶೇಷ ಅಂದ್ರೆ ಬಟ್ಟರೇ ಬರೆದಿರುವ ಹಾಡಿನ ಸಾಲೇ ಸಿನಿಮಾದ ಟೈಟಲ್ ಆಗಿದೆ. ಪುನಿತ್ ರಾಜ್ಕುಮಾರ್ ನಟಿಸಿ 2012ರಲ್ಲಿ ತೆರೆ ಕಂಡಿದ್ದ ‘ಯಾರೇ ಕೂಗಾಡಲಿ’ ಚಿತ್ರಕ್ಕೆ ‘ಹಲೋ 123 ಮೈಕು ಟೆಸ್ಟಿಂಗ್’ ಎಂಬ ಹಾಡನ್ನು ಬರೆದಿದ್ದರು. ಇದೀಗ ‘ಹಲೋ 123’ ಎಂಬ ಸಾಲನ್ನೇ ಭಟ್ಟರು ತಮ್ಮ ಚಿತ್ರಕ್ಕೆ ಹೆಸರಿಟ್ಟಿದ್ದಾರೆ.
ಈ ಚಿತ್ರಕ್ಕೆ ವಿ.ಹರಿಕೃಷ್ಣ ಅವರ ಸಂಗೀತ ನಿರ್ದೇಶನ ಇರಲಿದೆ. ಅಕ್ಟೋಬರ್‌ನಲ್ಲಿ ಸಿನಿಮಾದ ಶೂಟಿಂಗ್ ಶುರುವಾಗಲಿದೆ. ಸಿನಿಮಾದ ಕಥೆ ರೆಡಿಯಿದ್ದು, ಉಳಿದ ಕೆಲಸದ ಭರದಿಂದ ಸಾಗಿದೆ. ಮಡಿಕೇರಿ, ಮೈಸೂರು, ಚಿತ್ರದುರ್ಗ, ಬೆಂಗಳೂರು ಸೇರಿ ಹಲವೆಡೆ ಶೂಟಿಂಗ್ ನಡೆಯಲಿದೆ. ಹೀರೋ ಆಗಿ ನಟಿಸಲಿರುವ ಭುವನ್ ಪೊನ್ನಣ್ಣ ಈ ಚಿತ್ರದಲ್ಲಿ ಗಾಯಕನ ಪಾತ್ರ ನಿರ್ವಹಿಸಲಿದ್ದಾರೆ.
ಇದನ್ನೂ ಓದಿ:ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ ವಿರುದ್ಧ ಲುಕ್ಔಟ್ ನೋಟಿಸ್; ಯಾವುದೇ ಕ್ಷಣದಲ್ಲೂ ಬಂಧನ ಸಾಧ್ಯತೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ