/newsfirstlive-kannada/media/media_files/2025/09/05/shilpa-shetty-raj-kundra-2025-09-05-15-24-33.jpg)
ಬಹುಕೋಟಿ ವಂಚನೆ ಹಗರಣದಲ್ಲಿ (Multi-crore fraud case) ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹಾಗೂ ಪತಿ ರಾಜ್ ಕುಂದ್ರಾ (Shilpa Shetty and Raj Kundra) ವಿರುದ್ಧ ಮುಂಬೈ ಪೊಲೀಸರು ಲುಕ್ಔಟ್ ನೋಟಿಸ್ ಜಾರಿ ಮಾಡಿದ್ದಾರೆ.
ಏನಿದು ಪ್ರಕರಣ..?
ಸ್ಟಾರ್ ಸೆಲೆಬ್ರಿಟಿ ವಿರುದ್ಧ Best Deal TV Pvt Ltd ಹೂಡಿಕೆ ಒಪ್ಪಂಕ್ಕೆ ಸಂಬಂಧಿಸಿ ಉದ್ಯಮಿಯೊಬ್ಬರಿಗೆ 60 ಕೋಟಿ ರೂಪಾಯಿ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ. ಆರ್ಥಿಕ ಅಪರಾಧಗಳ ವಿಭಾಗದ ಮಾಹಿತಿ ಪ್ರಕಾರ, ತನಿಖಾಧಿಕಾರಿಗಳು ಮಿಸ್ಟರ್ ರಾಜ್ ಕುಂದ್ರಾ ಹಾಗೂ ಮಿಸಸ್ ಶಿಲ್ಪಾ ಶೆಟ್ಟಿ ಅವರ ಟ್ರಾವೆಲಿಂಗ್ ಹಿಸ್ಟ್ರಿಯ ಬಗ್ಗೆ ಮಾಹಿತಿ ಕೆದಕಿದ್ದಾರೆ. ಜೊತೆಗೆ ಸಂಸ್ಥೆಯ ಲೆಕ್ಕಪರಿಶೋಧನಾಧಿಕಾರಿಗಳನ್ನೂ ತನಿಖೆಗೆ ಕರೆದಿದ್ದಾರೆ.
ಉದ್ಯಮಿ ದೀಪಕ್ ಕೋಠಾರಿ ಅನ್ನೋರು ಶಿಲ್ಪಾ ಶೆಟ್ಟಿ ದಂಪತಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. 2015 ಮತ್ತು 2023 ರ ಅವಧಿಯಲ್ಲಿ ಸ್ಟಾರ್ ಜೋಡಿ ನನ್ನ ಬಳಿ 60 ಕೋಟಿ ರೂಪಾಯಿ ಹಣವನ್ನು ಪಡೆದುಕೊಂಡಿದೆ. ಉದ್ಯಮ ವಿಸ್ತರಿಸುವ ಸಂಬಂಧ ಹಣ ಪಡೆದಿದ್ದರು. ಆದರೆ ಅವರು, ನಾನು ನೀಡಿದ್ದ ಹಣವನ್ನು ವೈಯಕ್ತಿಕ ಬಳಕೆಗೆ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ:ಕಾಂತಾರ ಪ್ರೀಕ್ವೆಲ್ ರಿಲೀಸ್ಗೆ ಕೇವಲ 27 ದಿನಗಳು ಬಾಕಿ.. ಹೊಂಬಾಳೆ ಹೊಸ ಅಪ್ಡೇಟ್?
ದಂಪತಿ ಹಣವನ್ನು ಆರಂಭದಲ್ಲಿ ಸಾಲ ಎಂದು ಪಡೆದಿದ್ದರು. ನಂತರ ಹೂಡಿಕೆ ಎಂದು ಟ್ಯಾಕ್ಸ್ ಸೇವಿಂಗ್ಸ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಉದ್ಯಮಿ ಕೋಠಾರಿ ಪ್ರಕಾರ, ಶಿಲ್ಪಾ ಶೆಟ್ಟಿ ದಂಪತಿ ಪಡೆದಿದ್ದ ಹಣವನ್ನು ಶೇಕಡಾ 12 ರಷ್ಟು ಬಡ್ಡಿಯೊಂದಿಗೆ ನಿರ್ದಿಷ್ಟ ಅವಧಿಗೆ ಹಿಂತಿರುಗಿಸಬೇಕಾಗಿತ್ತು. 2016ರಲ್ಲಿ ಈ ಬಗ್ಗೆ ಆ ದಂಪತಿ ಲಿಖಿತ ಪತ್ರದ ಮೂಲಕ ಭರವಸೆ ಕೂಡ ನೀಡಿತ್ತು. ಆದರೆ ಹಣ ಪಡೆದು ವಾಪಸ್ ನೀಡಲೇ ಇಲ್ಲ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ:ರಾಜಮೌಳಿ ಬಿಗ್ ಪ್ಲಾನ್; ಮಹೇಶ್ ಬಾಬು ಸಿನಿಮಾ ಪ್ಯಾನ್ ಇಂಡಿಯಾವಲ್ಲ, ಪ್ಯಾನ್ ವರ್ಲ್ಡ್ ಮೂವಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ