/newsfirstlive-kannada/media/post_attachments/wp-content/uploads/2023/06/Nagendra.jpg)
ಏರ್​ ಶೋ ಆಗಿರಲಿ, ಬೆಂಗಳೂರಲ್ಲಿ ಟ್ರಾಫಿಕ್​ ಸಮಸ್ಯೆ ಆಗಿರಲಿ, ರೆಸ್ಕ್ಯೂ ಆಪರೇಷನ್​​ ನಡೀತಿರಲಿ ಅಲ್ಲಿ ಸಿವಿಲ್ ಡಿಫೆನ್ಸ್​ ನಾಗೇಂದ್ರನ ಹಾಜರಿ ಇರುತ್ತಿತ್ತು. ಸಿವಿಲ್ ಡಿಫೆನ್ಸ್​ ತನ್ನ ಜೀವ ಅಂದುಕೊಂಡು ಎಲ್ಲರಿಗೂ ಸಹಾಯ ಮಾಡಿಕೊಂಡಿದ್ದಾತ ಇಂದು ಬೆಳಗ್ಗೆ ಕೂತಿದ್ದ ಜಾಗದಲ್ಲಿಯೇ ಕುಸಿದು ಬಿದ್ದಿದ್ದಾನೆ. ನಂತರ ಆಸ್ಪತ್ರೆಗೆ ಸಾಗಿಸೋ ಮಾರ್ಗ ಮಧ್ಯದಲ್ಲಿಯೇ ಕೊನೆಯುಸಿರೆಳೆದಿದ್ದಾನೆ.
ಬೆಂಗಳೂರಿನಲ್ಲಿ ಮಳೆ ಬರೋ ಮುನ್ಸೂಚನೆ ಸಿಕ್ಕಿದಾಗಲೆಲ್ಲ ಮಾಧ್ಯಮ ಪ್ರತಿನಿಧಿಗಳಿಗೆ ನಾಗೇಂದ್ರನ ಮೆಸೇಜ್​ ಫಸ್ಟ್​​ ಬರ್ತಾ ಇತ್ತು. ಮಳೆ ಬಂದ ಮೇಲೆ ಎಲ್ಲಾ ಮಾಧ್ಯಮಗಳಲ್ಲೂ ಫೋಟೋ ವಿಡಿಯೋ ಸಮೇತ ಸುದ್ದಿ ಬರುತ್ತಾ ಇತ್ತು. ಅದಕ್ಕೆಲ್ಲ ಕಾರಣಕರ್ತನೇ ಈ ನಾಗೇಂದ್ರ.
/newsfirstlive-kannada/media/post_attachments/wp-content/uploads/2023/06/Nagendra-1.jpg)
ಬೆಂಗಳೂರಲ್ಲಿ ಮಳೆ ಬಂದಾಗ ಎಲ್ಲೇ ಸಮಸ್ಯೆ ಆದರೂ ಕೂಡ ಎಲ್ಲರಿಗಿಂತ ಮೊದಲು ರೀಚ್ ಆಗ್ತಾಯಿದ್ದದ್ದೇ ಈ ನಾಗೇಂದ್ರ. ಸಿವಿಲ್ ಡಿಫೆನ್ಸ್​​​ ಜಾಕೆಟ್ ಹಾಕ್ಕೊಂಡು ಹೊರಟು ನಿಂತರೆ, ಅಲ್ಲಿ ಸಮಸ್ಯೆಗೆ ಸಿಲುಕಿದವರನ್ನ ರಕ್ಷಣೆ ಮಾಡೋ ಕೆಲಸಕ್ಕೆ ಮೊದಲು ಮುಂದಾಗುತ್ತಿದ್ದ. ಜೊತೆ ಜೊತೆಗೆ ಒಂದು ವಿಡಿಯೋ ಮಾಡಿ ಅದನ್ನ ಮಾಧ್ಯಮದ ಸ್ನೇಹಿತರಿಗೆ ಶೇರ್​ ಮಾಡುತ್ತಿದ್ದ.
ಮೂಕ ಪ್ರಾಣಿಗಳ ಮೇಲೆ ಅದೇನೋ ಈತನಿಗೆ ಕರುಣೆ. ಬೆಂಗಳೂರಿನಲ್ಲಿ ಎಲ್ಲಾದ್ರೂ ಮೂಕ ಪ್ರಾಣಿಗಳು ಸಮಸ್ಯೆಯಲ್ಲಿದ್ದರೆ, ಅಪಘಾತವಾಗಿ ರಸ್ತೆ ಬದಿಯಲ್ಲಿ ಬಿದ್ದಿದ್ದರೆ, ಆ ವಿಚಾರ ಹೇಗೋ ಈತನಿಗೆ ಮುಟ್ಟುತ್ತಿತ್ತು. ಈತ ತಕ್ಷಣ ಅಲ್ಲಿಗೆ ಹೋಗಿ
ಗಾಯಗೊಂಡಿರೋ ಮೂಕ ಪ್ರಾಣಿಗಳನ್ನ ಎತ್ಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುತ್ತಿದ್ದ. ಒಂದು ವೇಳೆ ಅಪಘಾತದಲ್ಲಿ ಮೃತಪಟ್ಟಿದ್ದರೆ ಅದನ್ನ ಮಣ್ಣು ಮಾಡುತ್ತಿದ್ದ. ಇಂತಹ ಒಳ್ಳೆ ಮನಸ್ಸಿರೋ ಅಪರೂಪದ ಗುಣವಿದ್ದ ವ್ಯಕ್ತಿ ನಾಗೇಂದ್ರ ಇನ್ನಿಲ್ಲ. ಸಿವಿಲ್ ಡಿಫೆನ್ಸ್​​ ನಾಗೇಂದ್ರನ ಅಕಾಲಿಕ ನಿಧನಕ್ಕೆ ಮಾಧ್ಯಮ ಪ್ರತಿನಿಧಿಗಳು ಸಂತಾಪ ಸೂಚಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us