/newsfirstlive-kannada/media/post_attachments/wp-content/uploads/2024/09/copper-Utensils.jpg)
ಸಾಮಾನ್ಯವಾಗಿ ಸ್ಟೀಲ್ ಪಾತ್ರೆಗಳ ಮೇಲಿನ ಜಿಡ್ಡು ಸಲಿಸಾಗಿ ಹೋಗುತ್ತೆ. ಆದರೆ ಅದೇ ತರ ಹಿತ್ತಾಳೆ ಪಾತ್ರೆಗಳ ಮೇಲಿರೋ ಜಿಡ್ಡು ತಿಕ್ಕಿ ತೊಳೆದರು ಅಷ್ಟಾಗಿ ಹೋಗಲ್ಲ. ಆದರೆ ಸಾಕಷ್ಟು ಮಹಿಳೆಯರು ತಾಮ್ರದ ಪಾತ್ರೆಗಳು, ಬಾಟಲಿಗಳು ಮತ್ತು ಹಿತ್ತಾಳೆ ಪಾತ್ರೆಗಳನ್ನು ತ್ವರಿತವಾಗಿ ಸ್ವಚ್ಛಗೊಳಿಸುವುದು ದೊಡ್ಡ ತಲೆನೋವಾಗಿ ಪರಿಣಮಿಸುತ್ತದೆ. ಜೊತೆಗೆ ದೇವರ ಮುಂದೆ ಇಡುವ ಹಿತ್ತಾಳೆಯ ಪಾತ್ರೆ ಮೇಲಿನ ಜಿಡ್ಡನ್ನು ಹೇಗೆ ತೆಗೆದು ಹಾಕುವುದು ಅಂತ ಯೋಚನೆ ಮಾಡುತ್ತಲೇ ಇರುತ್ತಾರೆ. ಅಂಥವರಿಗಾಗಿ ಕೆಲವು ಸುಲಭವಾದ ಟ್ರಿಕ್ಸ್ ಇಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ:ಮಕ್ಕಳು ಬೆಳ್ಳಗೆ ಹುಟ್ಟಲು ಬಿಳಿ ನಾಯಿಯ ತಲೆ ಬರುಡೆ ತಿನ್ನುತ್ತಾರೆ ಇವರು! ಏನ್ ವಿಚಿತ್ರ ಗುರೂ
ಉಪ್ಪು ಹಾಗೂ ನಿಂಬೆಯನ್ನು ಅಡುಗೆ ಪಾತ್ರೆಗಳನ್ನು ಪಾಲಿಶ್ ಮಾಡಲು ಬಳಸುವ ವಸ್ತುಗಳು. ಆದರೆ ಈ ವಸ್ತುಗಳನ್ನು ಹಿತ್ತಾಳೆ ಅಥವಾ ತಾಮ್ರದ ಪಾತ್ರೆಗಳಲ್ಲಿಯೂ ಬಳಸಬಹುದು. ನಿಂಬೆಯಲ್ಲಿರುವ ಅಂಶವು ಅಡುಗೆ ಪಾತ್ರೆಗಳ ಮೇಲಿರುವ ಕಲೆಗಳನ್ನು ಮತ್ತು ಕಪ್ಪು ಬಣ್ಣವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಆದ್ದರಿಂದ ಹಿತ್ತಾಳೆಯ ಪಾತ್ರೆಯನ್ನು ಸ್ವಚ್ಛಗೊಳಿಸಲು ಮೊದಲು ನಿಂಬೆಯನ್ನು ಎರಡು ತುಂಡುಗಳಾಗಿ ಕತ್ತರಿಸಬೇಕು.
ನಂತರ ಅದರ ಮೇಲೆ ಸ್ವಲ್ಪ ಕಲ್ಲು ಉಪ್ಪನ್ನು ಸಿಂಪಡಿಸಿ. ಬಳಿಕ ನಿಂಬೆ ರಸವನ್ನು ಬಳಸಿ, ಹಿತ್ತಾಳೆ ಅಥವಾ ತಾಮ್ರದ ಪಾತ್ರೆಗಳನ್ನು ನಿಧಾನವಾಗಿ ಉಜ್ಜಿಕೊಳ್ಳಿ. ಹಿತ್ತಾಳೆಯ ಪಾತ್ರೆಗಳನ್ನು ಸ್ಕ್ರಬ್ ಮಾಡಿದ ನಂತರ ಪಾತ್ರೆಗಳನ್ನು ನೀರಿನಿಂದ ಚೆನ್ನಾಗಿ ತೊಳೆಯಿರಿ. ಆಗ ಹಿತ್ತಾಳೆ ಪಾತ್ರೆಯ ಮೇಲಿ ಜಿಡ್ಡನ್ನು ಆರಾಮವಾಗಿ ಹೊಗಲಾಡಿಸಬಹುದು.
ಹಿತ್ತಾಳೆ ಪಾತ್ರೆಗಳನ್ನ ಹಿಟ್ಟಿನಿಂದಲೂ ಪಳ ಪಳ ಎನಿಸಬಹುದು!
ಹಿತ್ತಾಳೆ ಪಾತ್ರೆಗಳನ್ನು ಸ್ವಚ್ಛಗೊಳಿಸಲು ಹಿಟ್ಟನ್ನು ಸಹ ಬಳಸಬಹುದು. ವಿನೆಗರ್ನ ಆಮ್ಲೀಯತೆಯು ಹಿಟ್ಟಿನ ಸೌಮ್ಯತೆಯಿಂದ ಸಮತೋಲನಗೊಳ್ಳುತ್ತದೆ. ಮೊದಲು ಒಂದು ಬೌಲಿನಲ್ಲಿ ಬಿಳಿ ವಿನೆಗರ್ ಮತ್ತು ಹಿಟ್ಟಿನ ಸಮಾನ ಭಾಗಗಳನ್ನು ಮಿಶ್ರಣ ಮಾಡಿ. ಹಿತ್ತಾಳೆಯ ಪಾತ್ರೆಗಳ ಮೇಲೆ ಇದನ್ನು ಹಚ್ಚಿ, ಉಜ್ಜುತ್ತಾ ಹೋಗಿ. ಸುಮಾರು 15 ರಿಂದ 20 ನಿಮಿಷಗಳ ಕಾಲ ಆ ಪಾತ್ರೆಗಳನ್ನು ಹಾಗೆಯೇ ಪಕ್ಕಕ್ಕೆ ಇರಿಸಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ಪಾತ್ರೆಗಳನ್ನು ತೊಳೆಯಿರಿ. ನಂತರ ಸ್ವಚ್ಛವಾದ ಒಣ ಬಟ್ಟೆಯಿಂದ ಒರೆಸಿ. ಇದು ಹೊಸದರಂತೆ ಕಾಣುತ್ತದೆ.
ಹುಣಿಸೆ ರಸ ಹಾಕಿ ಚೆನ್ನಾಗಿ ತಿಕ್ಕಿದ ಮೇಲೆ ಫಲಿತಾಂಶ ಪಕ್ಕಾ
ಮೊದಲು ಒಂದು ಬೌಲ್ನಲ್ಲಿ ಉಪ್ಪು, ಬಿಳಿ ವಿನೆಗರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ ಹಿತ್ತಾಳೆ, ತಾಮ್ರದ ವಸ್ತು ಮೇಲೆ ಹಾಕಿ ಬಳಿಕ ಚೆನ್ನಾಗಿ ಉಜ್ಜಿ. ಕ್ಷಣಾರ್ಧದಲ್ಲೇ ಕಲೆ ಮಂಗ ಮಾಯವಾಗುತ್ತದೆ. ಇನ್ನೊಂದು, ಹುಣಿಸೆ ಹಣ್ಣನ್ನು (Tamarind fruit) ನೀರಿನಲ್ಲಿ ನೆನೆಯಿಡಿ. ಬಳಿಕ ನೀರಿನಲ್ಲಿ ನೆನೆದ ಹುಣಿಸೆ ಹಣ್ಣನ್ನು ಚೆನ್ನಾಗಿ ಹಿಂಡಿ ಅದರಲ್ಲಿನ ರಸವನ್ನು ಹೊರ ತೆಗೆಯಿಸಿ. ಇದಾದ ನಂತರ ಜಿಡ್ಡು ಇದ್ದ ಪಾತ್ರೆಯ ಮೇಲೆ ಮೊದಲು ಸಣ್ಣ ಉಪ್ಪು ಬಳಿಕ ಹುಣಿಸೆ ಹಣ್ಣಿನ ರಸವನ್ನು ಹಾಕಿ ಚೆನ್ನಾಗಿ ತಿಕ್ಕಿ.
ಟೊಮೆಟೊ ಕೆಚಪ್ ಕೂಡ ಬಳಸಬಹುದು
ಒಂದು ದೊಡ್ಡ ಪಾತ್ರೆಯಲ್ಲಿ ಬಿಸಿ ನೀರಿನಲ್ಲಿ ಒಂದು ಚಮಚ ಡಿಟರ್ಜೆಂಟ್ ಹಾಕಿ. ಮತ್ತೊಂದು ಚಮಚ ಅರಿಶಿನ ಹಾಕಿ. ಜೊತೆಗೆ ವಿನೆಗರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಆ ನೀರು ಚೆನ್ನಾಗಿ ಕುದಿಯುತ್ತಿದ್ದಾಗ ಹಿತ್ತಾಳೆ ಪಾತ್ರೆಗಳನ್ನು ಹಾಕಿ. ಬಳಿಕ ನೀರು ತಣ್ಣಗಾದ ಮೇಲೆ ಸ್ವಚ್ಛವಾದ ನೀರಿನಲ್ಲಿ ತೊಳೆಯಬೇಕು.
ಇದನ್ನೂ ಓದಿ: 12 ವರ್ಷದಿಂದ ಈತನ ನಿದ್ರೆ ದಿನಕ್ಕೆ ಕೇವಲ 30 ನಿಮಿಷ.. ನೀ ಮಾಯೆಯೊಳಗೊ ನಿದ್ದೆ ಮಾಯೆ ನಿನ್ನೊಳಗೊ..!
ಹಿತ್ತಾಳೆಯ ವಸ್ತುಗಳನ್ನು ಸ್ವಚ್ಛಗೊಳಿಸಲು ಸ್ವಲ್ಪ ಟೊಮೆಟೊ ಕೆಚಪ್ ಕೂಡ ಬಳಸಬಹುದು. ಹತ್ತಿ ಬಟ್ಟೆಯ ಮೇಲೆ ಕೆಚಪ್ ಹಚ್ಚಿಕೊಂಡು ಹಿತ್ತಾಳೆ ವಸ್ತುಗಳನ್ನು 15 ನಿಮಿಷಗಳ ಕಾಲ ಉಜ್ಜಿ. ನಂತರ ನೀರಿನಿಂದ ತೊಳೆಯಿರಿ. ಆಲಿವ್ ಎಣ್ಣೆ ಮತ್ತು ವಿನೆಗರ್ ಸಮಾನ ಪ್ರಮಾಣದಲ್ಲಿ ಸ್ಪ್ರೇ ಬಾಟಲಿಯಲ್ಲಿ ಮಿಶ್ರಣ ಮಾಡಬೇಕು. ಈ ದ್ರಾವಣವನ್ನು ಹಳೆ ಹಿತ್ತಾಳೆಯ ವಸ್ತುಗಳ ಮೇಲೆ ಸಿಂಪಡಿಸಬೇಕು ಮತ್ತು ಉತ್ತಮವಾದ ಬಟ್ಟೆಯಿಂದ ಉಜ್ಜಬೇಕು. ಆಗ ಹಿತ್ತಾಳೆ ಮೇಲಿನ ಕಲೆ ಮಾಯವಾಗುತ್ತದೆ. ಇನ್ನು ಈ ಮೇಲಿನ ಅಂಶಗಳಲ್ಲಿ ಯಾವುದಾದರು ಒಂದು ಟ್ರಿಕ್ಸ್ ಅನ್ನು ಮಾಡಿದರೇ ನಿಮ್ಮ ಮನೆಯಲ್ಲಿರೋ ಹಿತ್ತಾಳೆ ಪಾತ್ರೆಗಳು ಹೊಸದರಂತೆ ಹೊಳೆಯುತ್ತವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ