ಕಡಿಮೆ ಅವಧಿ ನಿದ್ರೆ ಮಾಡಲು ಟ್ರೈನಿಂಗ್ ಸೆಂಟರ್ ತೆರೆದಿದ್ದಾರೆ
ಯುವಕರಿಗೆ ಕಡಿಮೆ ಅವಧಿಯ ನಿದ್ರೆ, ಬದುಕುವ ಕಲೆ ಹೇಳ್ತಿದ್ದಾರೆ
ಇವರ ಫಿಟ್ನೆಸ್ ರಸಹ್ಯ ಏನು? ಇಲ್ಲಿ ಕಾಫಿ ಕೂಡ ವರ್ಕೌಟ್ ಆಗಿದೆ
ಒಬ್ಬ ವ್ಯಕ್ತಿ ಸಂಪೂರ್ಣ ಫಿಟ್ ಆಗಿರುವ ಆತನಿಗೆ ಎಷ್ಟು ಗಂಟೆಗಳ ನಿದ್ರೆ ಅಗತ್ಯ ಇದೆ ಎಂದು ಕೇಳಿದರೆ 6 ರಿಂದ 8 ಗಂಟೆಗಳು ಎಂಬ ಉತ್ತರ ಬರಬಹುದು. ಇನ್ನೂ ಕೆಲವರು 2 ಗಂಟೆಗಳ ನಿದ್ರೆ ಮಾತ್ರ ಸಾಕು ಅನ್ನೋರು ಇದ್ದರೂ ಇರಬಹುದು! ಆದರೆ ಜಪಾನ್ನ ವ್ಯಕ್ತಿಯೊಬ್ಬರು (Japanese man) ಕಳೆದ 12 ವರ್ಷಗಳಿಂದ ಪ್ರತಿದಿನ 30 ನಿಮಿಷ ಮಾತ್ರ ಮಲಗುತ್ತಾರೆ. ಈ ವಿಚಾರ ಕೇಳಿ ನಿಮಗೆ ಅಚ್ಚರಿ ಆಗಬಹುದು, ಆದರೂ ಸತ್ಯ!
ಹೆಸರು ಡೈಸುಕೆ ಹೋರಿ (Daisuke Hori). ವಯಸ್ಸು 40. ವೃತ್ತಿಯಲ್ಲಿ ಉದ್ಯಮಿ.. ಆರೋಗ್ಯ ಹೆಂಗಂದ್ರೆ ಫಿಟ್ ಅಂಡ್ ಫೈನ್. ಇವರು ದಿನಕ್ಕೆ 30 ನಿಮಿಷ ಮಾತ್ರ ಮಲಗುತ್ತಾರೆ. ಇಷ್ಟು ಕಡಿಮೆ ಅವಧಿಗೆ ನಿದ್ರೆಯಲ್ಲಿ ತೃಪ್ತಿಪಟ್ಟುಕೊಳ್ಳುವ ಇವರು ಕ್ರಿಯಾಶೀಲರಾಗಿರೋದು ಹೇಗೆ ಅನ್ನೋದು ಜನರ ಅಚ್ಚರಿ ಪ್ರಶ್ನೆ.
ಇದನ್ನೂ ಓದಿ:16 ಬಾರಿ ಮೂಳೆ ಮುರಿತ, 8 ಸಲ ಸರ್ಜರಿ.. ಆದರೂ ಛಲ ಬಿಡಲಿಲ್ಲ; IAS ಅಧಿಕಾರಿಯಾದ ಯಶೋಗಾಥೆ..!
ಅವರು ಹೇಳುವ ಪ್ರಕಾರ.. ತಾವು ಕಡಿಮೆ ಅವಧಿ ನಿದ್ದೆ ಮಾಡಲು ತರಬೇತಿ ನೀಡಿದ್ದಾರೆ. ಅದು ಬೇರೆ ಯಾರಿಗೂ ಅಲ್ಲ. ತಮ್ಮ ಮನಸ್ಸು ಹಾಗೂ ದೇಹಕ್ಕೆ ಟ್ರೈನಿಂಗ್ ನೀಡಿದ್ದಾರಂತೆ. ದೈನಂದಿನ ಜೀವನದಲ್ಲಿ ಕೆಲಸಗಳನ್ನು ಹೆಚ್ಚು ಮಾಡುವ ಉದ್ದೇಶದಿಂದ ಮನಸ್ಸು ಹಾಗೂ ದೇಹವನ್ನು ಇದಕ್ಕಾಗಿ ಹುರಿಗೊಳಿಸಿದ್ದಾರೆ.
ಫಿಟ್ನೆಸ್ ರಹಸ್ಯ ಏನು?
ಸೌತ್ ಚೀನಾ ಮಾರ್ನಿಂಗ್ ( South China Morning Post) ವರದಿ ಪ್ರಕಾರ.. ಇವರು 12 ವರ್ಷಗಳ ಹಿಂದಿನಿಂದ ಕೇವಲ 30 ನಿಮಿಷ ಮಾತ್ರ ನಿದ್ರೆ ಮಾಡುವ ಅಭ್ಯಾಸ ರೂಢಿಸಿಕೊಂಡರು. 2016ರಲ್ಲಿ ಇವರು ಜಪಾನ್ ಶಾರ್ಟ್ ಸ್ಲೀಪರ್ಸ್ ಟ್ರೈನಿಂಗ್ ಅಸೋಸಿಯೇಷನ್ ಆರಂಭಿಸಿದರು. ಇಲ್ಲಿ ಅವರು ಯುವಕರಿಗೆ ನಿದ್ರೆಗೆ ಸಂಬಂಧಿಸಿದ ತರಗತಿಗಳನ್ನು ಮಾಡುತ್ತಾರೆ. ಇನ್ನು ಜಪಾನ್ನ ಯೊಮಿಯುರಿ ಟಿವಿ (Yomiuri TV) ಹೊರಿ ಕುರಿತ ಕಾರ್ಯಕ್ರಮಗಳನ್ನು ಮಾಡಿ ಬಿತ್ತರಿಸಿದೆ. ಸುಮಾರು ಮೂರು ದಿನಗಳ ಕಾಲ ಇವರ ದೈನಂದಿನ ಚಟುವಟಿಕೆಗಳನ್ನು ಜಗತ್ತಿಗೆ ಪ್ರಸ್ತುತಪಡಿಸಿದೆ. ಈ ಸಮಯದಲ್ಲಿ ಅವರು ಪ್ರತಿದಿನ 25 ಅಥವಾ 30 ನಿಮಿಷಗಳ ಕಾಲ ಮಾತ್ರ ಮಲಗುತ್ತಿದ್ದರು.
ಇದನ್ನೂ ಓದಿ:ಮಗಳು IAS ಆಗುವ ಕನಸು ಕಂಡಿದ್ದ ಅಪ್ಪ-ಅಮ್ಮ; ಕನಸು ನನಸು ಆದಾಗ ಸಂಭ್ರಮಿಸಲು ಅವರೇ ಇರಲಿಲ್ಲ
ಕಾಫಿ ಜೊತೆಗಾರ..!
ಸ್ಲೀಪರ್ಸ್ ಟ್ರೈನಿಂಗ್ ಅಸೋಸಿಯೇಷನಲ್ಲಿ ಹೊರಿ ಇದುವರೆಗೆ ಅವರು 2100 ಯುವಕರಿಗೆ ಕಡಿಮೆ ನಿದ್ರೆಯೊಂದಿಗೆ ಬದುಕುವ ತಂತ್ರಗಳನ್ನು ಕಲಿಸಿದ್ದಾರೆ. ದೈನಂದಿನ ಜೀವನದಲ್ಲಿ ಕ್ರೀಡೆ ಆಡುವ ಅಭ್ಯಾಸ ಮಾಡಿಕೊಂಡರೆ ಕಡಿಮೆ ನಿದ್ದೆ ಮಾಡುವುದು ಕಷ್ಟದ ಕೆಲಸ ಅಲ್ಲ. ಅಂತಹ ಜೀವನಶೈಲಿ ಅಳವಡಿಸಿಕೊಳ್ಳಲು ಕಾಫಿ ತುಂಬಾ ಸಹಾಯಕವಾಗಿದೆ ಎನ್ನುತ್ತಾರೆ ಅವರು. ಅಲ್ಲದೇ ಆಹಾರ ಸೇವನೆಗೆ ಒಂದು ಗಂಟೆ ಮೊದಲು ಕಾಫಿ ಕುಡಿಯುತ್ತಾರೆ. ಇದರಿಂದ ನಿದ್ರೆ ಮತ್ತು ಆಯಾಸವನ್ನು ಎದುರಿಸುವ ಅನಿವಾರ್ಯತೆ ಬೀಳಲ್ಲ ಅನ್ನೋದು ಅವರ ವಾದ!.
ಇದನ್ನೂ ಓದಿ:ಊಟ ಮಾಡೋವಾಗ ಪದೇ ಪದೇ ನೀರು ಕುಡಿತಾ ಇದ್ದೀರಾ? ನಿಮಗಿದೆ ಅಪಾಯ! ಕೂಡಲೇ ಎಚ್ಚರ ವಹಿಸಿ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ