newsfirstkannada.com

ಊಟ ಮಾಡೋವಾಗ ಪದೇ ಪದೇ ನೀರು ಕುಡಿತಾ ಇದ್ದೀರಾ? ನಿಮಗಿದೆ ಅಪಾಯ! ಕೂಡಲೇ ಎಚ್ಚರ ವಹಿಸಿ!

Share :

Published September 2, 2024 at 3:56pm

    ಜಾಸ್ತಿ ನೀರು ಕುಡಿಯುವುದರಿಂದ ಏನೆಲ್ಲಾ ಪರಿಣಾಮ ಬೀರುತ್ತೆ?

    ಒಂದು ತುತ್ತಿಗೂ ನೀರು ಕುಡಿತಾ ಇದ್ರೆ ನಿಮ್ಮ ದೇಹಕ್ಕೆ ಏನಾಗುತ್ತೆ?

    ಊಟ ಮಾಡಿದ ತಕ್ಷಣ ನೀರು ಕುಡಿಯಲೇ ಬಾರದು ನೆನಪಿರಲಿ

ಸಾಮಾನ್ಯವಾಗಿ ಜನರು ಊಟ ಮಾಡುತ್ತಾ ನೀರು ಕುಡಿಯುತ್ತಾ ಇರುತ್ತಾರೆ. ಅದರಲ್ಲೂ ಚಿಕ್ಕ ಮಕ್ಕಳು ಒಂದು ತುತ್ತು ತಿಂದರೆ, ಮತ್ತೊಂದು ಕಡೆ ನೀರು ಕುಡಿಯುತ್ತಾರೆ. ಆದರೆ ಹೀಗೆ ಮಾಡಿದರೇ ಆರೋಗ್ಯದ ಮೇಲೆ ಏನೆಲ್ಲಾ ಪರಿಣಾಮ ಬೀರಲಿದೆ ಎಂದು ಮೊದಲು ತಿಳಿದುಕೊಳ್ಳಿ.

ಇದನ್ನೂ ಓದಿ: ತ್ವಚೆ ನ್ಯಾಚುರಲ್​ ಆಗಿ ಪಳಪಳ ಹೊಳೆಯುತ್ತೆ.. ಆದ್ರೆ ಐಸ್‌ ಕ್ಯೂಬ್​ ಬಳಸುವಾಗ ಈ ತಪ್ಪು ಮಾಡಬೇಡಿ!

ಮನುಷ್ಯನ ದೇಹಕ್ಕೆ ನೀರು ತುಂಬಾನೇ ಮುಖ್ಯ. ಆದರೆ ಅದೇ ನೀರನ್ನು ಅತಿಯಾಗಿ ಕುಡಿಯುವುದರಿಂದ ಅಷ್ಟೇ ದೇಹಕ್ಕೆ ಪರಿಣಾಮ ಕೂಡ ಬೀರುತ್ತದೆ. ಮಾನವನ ದೇಹಕ್ಕೆ ಮತ್ತು ಆರೋಗ್ಯ ವೃದ್ಧಿಗೆ ಪ್ರಮುಖವಾಗಿ ಬೇಕಾಗಿರುವುದು ನೀರು ನೀರಿಲ್ಲದೇ ಮನುಷ್ಯ ಬದುಕಲಾರ. ಆದರೆ ಈ ನೀರನ್ನು ಯಾವ ರೀತಿ ಕುಡಿಬೇಕು ಮತ್ತು ಯಾವಾಗ ಕುಡಿಯಬಾರದು ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯವಾಗುತ್ತದೆ.

ಊಟ ಮಾಡುವಾಗ ಮಧ್ಯೆ ಮಧ್ಯೆ ನೀರು ಕುಡಿಯಬಾರದು. ಒಂದು ಊಟದ ಮುಂಚೆ ಅಥವಾ ಊಟವದ ಬಳಿಕ ನೀರು ಕುಡಿದರೇ ಉತ್ತಮ ಅಂತ ಸಾಕಷ್ಟು ವೈದ್ಯರು ಹೇಳುತ್ತಾರೆ. ಆದರೆ ಹೀಗೆ ತುತ್ತು ಊಟಕ್ಕೂ ನೀರು ಕೂಡಿದರೇ ಆರೋಗ್ಯದ ಮೇಲೆ ಭಾರೀ ಪರಿಣಾಮ ಬೀರಬಹುದು ನೆನಪಿರಲಿ.

ಆಯುರ್ವೇದದ ಪ್ರಕಾರ, ದೇಹವು ತನ್ನದೇ ಆದ ಕೆಲಸ ಮಾಡುವ ವಿಧಾನವನ್ನು ಹೊಂದಿದೆ. ನೀವು ಆಹಾರವನ್ನು ಸೇವಿಸಿದಾಗ, ದೇಹವು ಆಹಾರವನ್ನು ಜೀರ್ಣಿಸಿಕೊಳ್ಳಲು ಬೆಂಕಿಯನ್ನು ಉತ್ಪಾದಿಸುತ್ತದೆ. ಇದನ್ನು ಗ್ಯಾಸ್ಟ್ರಿಕ್ ಫೈರ್ ಎಂದು ಕರೆಯಲಾಗುತ್ತದೆ. ಇದು ಆಹಾರದ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

ಗ್ಯಾಸ್ಟ್ರಿಕ್ ಫೈರ್‌ನ ಶಕ್ತಿಯ ಸಹಾಯದಿಂದ ಆಹಾರವು ಬೇಗನೆ ಜೀರ್ಣವಾಗುತ್ತದೆ. ದೇಹವು ಆಹಾರದಿಂದ ಸಂಪೂರ್ಣ ಪೋಷಣೆಯನ್ನು ಪಡೆಯುತ್ತದೆ. ಆದರೆ ಆಹಾರ ತಿನ್ನುವಾಗ ನೀರು ಕುಡಿದರೆ ಈ ಅಗ್ನಿ ಅಥವಾ ಶಕ್ತಿ ಕುಗ್ಗಿ ಹೋಗುತ್ತದೆ. ಊಟದ ಮಧ್ಯೆ ನೀರು ಕುಡಿದರೆ ಜೀರ್ಣಕಾರಿ ಸಮಸ್ಯೆಗಳು ಹೆಚ್ಚಾಗುತ್ತವೆ. ಅಜೀರ್ಣ, ಗ್ಯಾಸ್ಟ್ರಿಕ್, ಹೊಟ್ಟೆಯುಬ್ಬರದಂತಹ ಸಮಸ್ಯೆಗಳಿಂದ ಬಳಲುವ ಸಾಧ್ಯತೆ ಇದೆ. ಹೀಗಾಗಿ ಊಟ ಮಾಡುವಾಗ ಆದಷ್ಟು ನೀರು ಕುಡಿಯುವುದನ್ನು ಅವೈಡ್ ಮಾಡಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಊಟ ಮಾಡೋವಾಗ ಪದೇ ಪದೇ ನೀರು ಕುಡಿತಾ ಇದ್ದೀರಾ? ನಿಮಗಿದೆ ಅಪಾಯ! ಕೂಡಲೇ ಎಚ್ಚರ ವಹಿಸಿ!

https://newsfirstlive.com/wp-content/uploads/2024/09/water2.jpg

Load More