newsfirstkannada.com

ತ್ವಚೆ ನ್ಯಾಚುರಲ್​ ಆಗಿ ಪಳಪಳ ಹೊಳೆಯುತ್ತೆ.. ಆದ್ರೆ ಐಸ್‌ ಕ್ಯೂಬ್​ ಬಳಸುವಾಗ ಈ ತಪ್ಪು ಮಾಡಬೇಡಿ!

Share :

Published September 1, 2024 at 3:28pm

    ಈಸಿಯಾಗಿ ಸಿಗುವ ಐಸ್​ ಕ್ಯೂಬ್​ನಿಂದ ಆಗೋ ಪ್ರಯೋಜನ ಏನು?

    ಐಸ್​ ಕ್ಯೂಬ್​ನಿಂದ ನಿಮ್ಮ ತ್ವಚೆಯಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ?

    ಯಾವುದೇ ಕಾರಣಕ್ಕೂ ಕ್ಯೂಬ್​ ಬಳಸುವಾಗ ಈ ತಪ್ಪು ಮಾಡಬೇಡಿ

ಸಾಕಷ್ಟು ಜನ ತಮ್ಮ ತ್ವಚೆ ಬಗ್ಗೆ ಕಾಳಜಿ ವಹಿಸುತ್ತಲೇ ಇರುತ್ತಾರೆ. ಅದರಲ್ಲೂ ತ್ವಚೆಗೆ ಬೇಕಾಗಿರೋ ಸಾಕಷ್ಟು ಅಂಶಗಳ ಬಗ್ಗೆ ಅರಿತುಕೊಂಡು ಸಿಕ್ಕ ಸಿಕ್ಕ ಕ್ರೀಮ್​ಗಳನ್ನು ಮುಖಕ್ಕೆ ಹಚ್ಚಿಕೊಳ್ಳುತ್ತಾರೆ. ಆದರೆ ಹೀಗೆ ಮಾರುಕಟ್ಟೆಯಲ್ಲಿ ಸಿಗೋ ಕ್ರೀಮ್ ಹಚ್ಚಿಕೊಳ್ಳುವುದರಿಂದ ಕಾಲ ಕ್ರಮೇಣ ತ್ವಚೆ ಹಾಳಾಗುತ್ತಾ ಹೋಗಬಹುದು. ಆದರೆ ಇಷ್ಟು ಈಸಿಯಾಗಿ ಮನೆಯಲ್ಲಿ ಸಿಗುವ ಐಸ್​ ಕ್ಯೂಬ್​ನಿಂದ ತ್ವಚೆಯಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ ಅಂತ ತಿಳಿದುಕೊಳ್ಳಿ.

ಐಸ್‌ ಕ್ಯೂಬ್‌ನಿಂದ ಏನೆಲ್ಲಾ ಪ್ರಯೋಜನಗಳಿವೆ? ಆದರೆ ಎಚ್ಚರ! 

ಮೊದಲನೆಯದಾಗಿ ಮುಖದ ಮೇಲಿನ ಊತ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ. ಐಸ್​ ಕ್ಯೂಬ್ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ರಕ್ತನಾಳಗಳನ್ನು ಸಂಕುಚಿತಗೊಳಿಸುತ್ತದೆ. ಇದು ಮುಖದ ಮೇಲಿನ ಊತ ಮತ್ತು ಪಫಿನೆಸ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ದಿನಕ್ಕೆ ಒಂದು ಬಾರಿ ಐಸ್​​ ಕ್ಯೂಬ್​ನಿಂದ ಮುಖಕ್ಕೆ ರಬ್​ ಮಾಡಿಕೊಂಡರೇ ಉತ್ತಮ.

ಎರಡನೆಯದಾಗಿ ರಕ್ತ ಪರಿಚಲನೆ ಸುಧಾರಿಸುತ್ತದೆ. ಶೀತದ ಉಷ್ಣತೆಯು ರಕ್ತನಾಳಗಳು ಸಂಕುಚಿತಗೊಳ್ಳಲು ಕಾರಣವಾಗುತ್ತದೆ. ಮತ್ತು ನೀವು ಐಸ್ ಅನ್ನು ಹಚ್ಚಿದಾಗ ಅವು ಹಿಗ್ಗುತ್ತವೆ. ಜೊತೆಗೆ ರಕ್ತದ ಹರಿವನ್ನು ಸುಧಾರಿಸುತ್ತದೆ.

ಮೂರನೆಯದಾಗಿ ಮೂಖದ ಮೇಲಿನ ರಂಧ್ರಗಳನ್ನು ಬಿಗಿಗೊಳಿಸುತ್ತದೆ (open pores). ನಿಮ್ಮ ಕೆನ್ನೆಯ ಮೇಲೆ ಅತಿಯಾಗಿ ರಂಧ್ರಗಳು ಇದ್ದರೆ, ಐಸ್​ ಕ್ಯೂಬ್​ನಿಂದ ಮಸಾಜ್​ ಮಾಡಿಕೊಳ್ಳಿ. ಅದು ನಿಧನಗತಿಯಲ್ಲಿ ರಂಧ್ರಗಳನ್ನು ಕುಗ್ಗಿಸಲು ಸಹಾಯ ಮಾಡುತ್ತದೆ. ಚರ್ಮವು ಮೃದುವಾಗಲು ಶುರು ಮಾಡುತ್ತದೆ.

ಇದನ್ನೂ ಓದಿ: ಐವರು ಟ್ರೈನಿ ಪೊಲೀಸ್​ ಸಬ್​​ ಇನ್​ಸ್ಪೆಕ್ಟರ್​​ಗಳು ಅರೆಸ್ಟ್​​; ಕಾರಣ ಕೇಳಿದ್ರೆ ಬೆಚ್ಚಿ ಬೀಳ್ತೀರಾ!

ಬಹಳ ಮುಖ್ಯವಾಗಿ ಸಾಕಷ್ಟು ವಯಸ್ಕರಲ್ಲಿ ಅಥವಾ ತಾರುಣ್ಯಕ್ಕೆ ಬರುವ ಯುವಕ, ಯುವತಿಯರಲ್ಲಿ ಮೊಡವೆಗಳು ಕಾಣಿಸಿಕೊಳ್ಳುವುದು ಸರ್ವೇ ಸಾಮಾನ್ಯ. ಹೀಗಾಗಿ ಆ ಮೊಡವೆಗೆ ಮುಟ್ಟದೇ ಹಾಗೇ ಬಿಟ್ಟರೇ ನಿಧನವಾಗಿ ಅದು ಕಡಿಮೆಯಾಗುತ್ತಾ ಬರುತ್ತದೆ. ಇಲ್ಲವಾದರೆ ಮೊಡವೆಗೆ ದಕ್ಕೆ ಮಾಡಿದರೇ ಕಲೆ ಹಾಗೇ ಉಳಿದುಕೊಂಡು ಬಿಡುತ್ತದೆ.

ಐಸ್​ ಕ್ಯೂಬ್​ ಅಪ್ಲೈ ಮಾಡಿಕೊಳ್ಳುವುದರಿಂದ ಬ್ಯಾಕ್ಟೀರಿಯಾವನ್ನು ಕೊಲ್ಲುವ ಮೂಲಕ ಮೊಡವೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೇ ಮುಖದ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ. ನೀವು ಐಸ್​ ಕ್ಯೂಬ್​ ಹಚ್ಚಿಕೊಂಡಾಗ ಒತ್ತಡವನ್ನು ಕಡಿಮೆ ಜೊತೆಗೆ ಹೆಚ್ಚು ಶಾಂತಿಯನ್ನು ಉತ್ತೇಜಿಸುತ್ತದೆ.

ಬಹಳ ಮುಖ್ಯವಾಗಿ ಸುಕ್ಕುಗಳ ನೋಟವನ್ನು ಕಡಿಮೆ ಮಾಡುತ್ತದೆ. ಐಸ್ ಚರ್ಮವನ್ನು ಬಿಗಿಗೊಳಿಸುವ ಮೂಲಕ ಸುಕ್ಕುಗಳ ನೋಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅತಿಯಾದ ಬಿಸಿಲಿನಿಂದ ಮುಖದಲ್ಲಿ ಸನ್‌ಬರ್ನ್ ಶುರುವಾದರೇ ಐಸ್​ ಕ್ಯೂಬ್​ನಿಂದ​ 2 ರಿಂದ 3 ನಿಮಿಷಗಳ ಕಾಲ ಮಾಡಿಕೊಂಡಾಗ ಚರ್ಮ ಕೂಲ್​ ಆಗುತ್ತೆ.

ಸಾಕಷ್ಟು ನಟಿಯರು ಮೇಕಪ್, ಸ್ಕಿನ್ ಕೇರ್ ಮಾಡಿಕೊಳ್ಳುವ ಮುನ್ನ ಇದೇ ಐಸ್​ ಕ್ಯೂಬ್​ ಬಾತ್​ ಅಥವಾ ಐಸ್​ ಕ್ಯೂಬ್ ಅಪ್ಲೈ ಮಾಡಿಕೊಳ್ಳುತ್ತಾರೆ. ಇದರಿಂದ ತಕ್ಷಣವೇ ಮುಖದಲ್ಲಿ ಗ್ಲೋ ಕಾಣಿಸೋಕೆ ಶುರು ಆಗುತ್ತೆ. ಹೀಗಾಗಿ ಯಾವುದಾದರೂ ಸಮಾರಂಭಕ್ಕೆ ಹೋಗಬೇಕಾದರೇ ಸಾಕಷ್ಟು ಜನ ಗ್ಲೋ ಆಗಲು ಇದೇ ಟ್ರಿಕ್​ ಯೂಸ್​ ಮಾಡ್ತಾರೆ.

ಇದನ್ನೂ ಓದಿ: ಟ್ರೆಂಡ್ ಆಗ್ತಿದೆ ಹೆಣ್ಮಕ್ಕಳ ಸೋಲೋ ಟ್ರಿಪ್; ಯುವತಿಯರು ಇದನ್ನು ಪಾಲಿಸಿದರೆ ಜರ್ನಿ ಇನ್ನಷ್ಟು ಈಸಿ!

ಇನ್ನು ಮುಖದಲ್ಲಿ ಅತಿಯಾದ ಮೊಡವೆಗಳು ಇದ್ದದ್ದೇ ಆದರೆ ಐಸ್​​ ಕ್ಯೂಬ್​ ಅನ್ನು ಒಂದು ಸ್ವಚ್ಛವಾದ ಬಟ್ಟೆಯಲ್ಲಿ ರಬ್​ ಮಾಡಿಕೊಂಡರೆ ಇನ್ನೂ ಉತ್ತಮ. ಕೇವಲ ನೀರಿನಿಂದ ಮಾತ್ರವಲ್ಲದೇ ಹಾಲಿನಿಂದ, ಅಲೋವೆರಾ ಜೆಲ್​ನಿಂದ, ರೋಸ್ ವಾಟರ್, ಗ್ರೀನ್​ ಟೀ ಮೂಲಕ ಐಸ್​​ ಕ್ಯೂಬ್ ತಯಾರಿ ಮಾಡಿಕೊಳ್ಳಬಹುದು.  ​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ತ್ವಚೆ ನ್ಯಾಚುರಲ್​ ಆಗಿ ಪಳಪಳ ಹೊಳೆಯುತ್ತೆ.. ಆದ್ರೆ ಐಸ್‌ ಕ್ಯೂಬ್​ ಬಳಸುವಾಗ ಈ ತಪ್ಪು ಮಾಡಬೇಡಿ!

https://newsfirstlive.com/wp-content/uploads/2024/09/ice-cubes4.jpg

Load More