ಪೇಪರ್ ಸೋರಿಕೆ ಮಾಡಿ ಮನೆ ನಿರ್ಮಾಣ ಮಾಡಿದ್ದ ಕಿರಾತಕ
ತರಬೇತಿ ಕೇಂದ್ರದಿಂದಲೇ ಐವರನ್ನು ಅರೆಸ್ಟ್ ಮಾಡಿದ SOG
ಪರೀಕ್ಷೆ ನಡೆದಿದ್ದ ಶಾಲೆಯ ಆಯೋಜಕ ಕೂಡ ಅರೆಸ್ಟ್ ಆದ್ರು
ಜೈಪುರ: ತರಬೇತಿ ಪಡೆಯುತ್ತಿದ್ದ 5 ಜನ ಸಬ್- ಇನ್ಸ್ಪೆಕ್ಟರ್ಸ್ ಅನ್ನು ರಾಜಸ್ಥಾನದ ಸ್ಪೆಷಲ್ ಆಪರೇಷನ್ಸ್ ಗ್ರೂಪ್ (ಎಸ್ಒಜಿ) ಅರೆಸ್ಟ್ ಮಾಡಿದೆ. 2021ರ ರಾಜಸ್ಥಾನ ಸಬ್- ಇನ್ಸ್ಪೆಕ್ಟರ್ ನೇಮಕಾತಿ ಪರೀಕ್ಷೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ 5 ಜನರನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ನಮ್ಮ ಮೆಟ್ರೋದಿಂದ ಭರ್ಜರಿ ಗುಡ್ನ್ಯೂಸ್.. ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ
ಪರೀಕ್ಷೆಯ ಪೇಪರ್ ಲೀಕ್ ಮಾಡಿದ ಆರೋಪದ ಮೇಲೆ ಟ್ರೈನಿ ಸಬ್ ಇನ್ಸ್‌ಪೆಕ್ಟರ್‌ಗಳಾದ ಮನೀಶಾ ಸಿಹಾಗ್, ಅಂಕಿತಾ ಗೋದಾರಾ ಹಾಗೂ ಪ್ರಭಾ ಬಿಷ್ಣೋಯ್ನನ್ನ ರಾಜಸ್ಥಾನ ಪೊಲೀಸ್ ಅಕಾಡೆಮಿ ಮತ್ತು ಜೋಧ್‌ಪುರದ ಮಂಡೋರ್ ತರಬೇತಿ ಕೇಂದ್ರದಿಂದ ಬಂಧಿಸಲಾಗಿದೆ. ರಾಜಸ್ಥಾನದ ಸ್ಪೆಷಲ್ ಆಪರೇಷನ್ಸ್ ಗ್ರೂಪ್ ಅಧಿಕಾರಿಗಳು ಬಂಧಿಸಿರುವ ಐವರಲ್ಲಿ ಮೂವರು ಪುರುಷರು, ಇಬ್ಬರು ಮಹಿಳೆಯರು ಸೇರಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: Avani Lekhara: ಚಿನ್ನದ ಪದಕ ಗೆದ್ದು ದಾಖಲೆ ಬರೆದ ಪ್ಯಾರಾ ಒಲಿಂಪಿಯನ್.. ಯಾರು ಈ ಅವನಿ ಲೇಖರ?
ರಾಜಸ್ಥಾನದ ಹಲವು ಪ್ರದೇಶಗಳಾದ ಜೈಪುರ್, ಅಜ್ಮೀರ್, ಬೀವಾರ್ ಮತ್ತು ಕಿಶಂಗರ್ ಸೇರಿ ವಿವಿಧೆಡೆ ಎಸ್ಒಜಿ ದಾಳಿ ಮಾಡಿ ಟ್ರೈನಿ ಇನ್ಸ್ಪೆಕ್ಟರ್ಸ್ ಅನ್ನು ಬಂಧಿಸಿದೆ. ಜೈಪುರ್ ಒಂದರಲ್ಲೇ 13 ಸಬ್- ಇನ್ಸ್ಪೆಕ್ಟರ್ಸ್ ಅನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಅಲ್ಲದೇ ಪರೀಕ್ಷೆ ನಡೆದ ಶಾಲೆಯ ಆಯೋಜಕರಾಗಿದ್ದ ದಿನೇಶ್ ಸಿಂಗ್ ಚೌಹಾಣ್ ಸೇರಿದಂತೆ ಪ್ರಕರಣ ಸಂಬಂಧ ಹಲವರನ್ನು ಅರೆಸ್ಟ್ ಮಾಡಲಾಗಿದೆ ಎಂದು ಎಸ್ಒಜಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇನ್ನು ಕಳೆದ ತಿಂಗಳು ಚುರು ಜಿಲ್ಲೆಯಲ್ಲಿ ಈ ಪೇಪರ್ ಲೀಕ್ಗೆ ಸಂಬಂಧಿಸಿದ ಆರೋಪಿಯೊಬ್ಬನು ಅಕ್ರಮವಾಗಿ ನಿರ್ಮಾಣ ಮಾಡಿದ್ದ ಮನೆಯನ್ನು ಸರ್ಕಾರ ನೆಲಸಮ ಮಾಡಿತ್ತು ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ