newsfirstkannada.com

ಜೈಲಿನಲ್ಲಿ ಮಾವಿನ ಹಣ್ಣು ತಿಂದು ಶುಗರ್‌ ಲೆವೆಲ್ ಏರಿಸಿಕೊಂಡ ಕೇಜ್ರಿವಾಲ್; ಬೇಲ್‌ಗೆ ಮಾಸ್ಟರ್ ಪ್ಲಾನ್‌?

Share :

Published April 18, 2024 at 3:43pm

Update April 18, 2024 at 3:39pm

    ಸಿಎಂ ಕೇಜ್ರಿವಾಲ್ ಅವರು ಜೈಲಿನಲ್ಲಿ ಮಾವಿನ ಹಣ್ಣು ತಿಂದಿದ್ದಾರೆ ಎಂದ ED

    ರಕ್ತದ ಸಕ್ಕರೆ ಅಂಶ ಏರಿಕೆಯಾದ್ರೆ ಜಾಮೀನು ಪಡೆಯಲು ಮಾಸ್ಟರ್ ಪ್ಲಾನ್

    ಅರವಿಂದ್ ಕೇಜ್ರಿವಾಲ್ ಅವರ ಡೈಯಟ್ ಚಾರ್ಟ್‌ ಮೇಲೆ ಈಗ ಅನುಮಾನ

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಜೈಲು ಪಾಲಾಗಿರುವ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಸಂಕಷ್ಟ ತಪ್ಪಿಲ್ಲ. ಶುಗರ್ ಲೆವಲ್‌ನಲ್ಲಿ ಭಾರೀ ವ್ಯತ್ಯಾಸ ಆಗುತ್ತಿದೆ. ಹೆಲ್ತ್ ಚೆಕಪ್ ಮಾಡಿಸಬೇಕು ಎಂದು ದೆಹಲಿ ರೋಸ್ ಅವೆನ್ಯೂ ಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಅರ್ಜಿ ವಿಚಾರಣೆ ವೇಳೆ (ED) ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಗಂಭೀರ ಆರೋಪ ಮಾಡಿದ್ದಾರೆ.

ಕೇಜ್ರಿವಾಲ್ ಅವರ ಆರೋಗ್ಯದ ಕುರಿತು ರೋಸ್ ಅವೆನ್ಯೂ ಕೋರ್ಟ್‌ಗೆ ಇ.ಡಿ ಪರ ವಕೀಲರು ಮಾಹಿತಿ ನೀಡಿದ್ದಾರೆ. ಕೇಜ್ರಿವಾಲ್ ಅವರು ಜೈಲಿನಲ್ಲಿ ಮಾವಿನ ಹಣ್ಣು ತಿಂದು ರಕ್ತದ ಸಕ್ಕರೆ ಅಂಶ ಏರಿಸಿಕೊಂಡಿದ್ದಾರೆ. ರಕ್ತದ ಸಕ್ಕರೆ ಅಂಶ ಏರಿಕೆಯಾದ್ರೆ ಅದರ ಆಧಾರದ ಮೇಲೆ ಜಾಮೀನು ಪಡೆಯಲು ತಂತ್ರ ರೂಪಿಸಿದ್ದಾರೆ ಎಂದಿದ್ದಾರೆ.

ಜೈಲಿನಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರು ಉದ್ದೇಶಪೂರ್ವಕವಾಗಿ ಮಾವಿನ ಹಣ್ಣು ತಿನ್ನುತ್ತಿದ್ದಾರೆ ಎಂದು ಇ.ಡಿ ಕೋರ್ಟ್‌ಗೆ ಹೇಳಿದೆ. ಈ ವಾದ ಆಲಿಸಿದ ನ್ಯಾಯಾಲಯ ಕೇಜ್ರಿವಾಲ್ ಅವರ ಡೈಯಟ್ ಚಾರ್ಟ್ ನೀಡಲು ತಿಹಾರ್ ಜೈಲು ಅಧಿಕಾರಿಗಳಿಗೆ ಸೂಚನೆ ನೀಡಿದೆ. ನಾಳೆ ಈ ಬಗ್ಗೆ ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಮತ್ತೆ ವಿಚಾರಣೆ ನಡೆಸಲಿದೆ.

ಇದನ್ನೂ ಓದಿ: ತಿಹಾರ್ ಜೈಲು ಪಾಲಾದ ಕೇಜ್ರಿವಾಲ್.. ದೆಹಲಿ ಸಿಎಂ ಆನ್ಸರ್ ಕೇಳಿ, ಕೇಳಿ ED ಅಧಿಕಾರಿಗಳು ಸುಸ್ತು! 

ದೆಹಲಿ ಕೋರ್ಟ್‌ನಲ್ಲಿ ಜಾಮೀನು ಸಿಗದ ಹಿನ್ನೆಲೆಯಲ್ಲಿ ಅರವಿಂದ್ ಕೇಜ್ರಿವಾಲ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಕೇಜ್ರಿವಾಲ್ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್, ಏಪ್ರಿಲ್ 24ರೊಳಗೆ ನೋಟಿಸ್‌ಗೆ ಉತ್ತರಿಸುವಂತೆ ಇ.ಡಿ.ಗೆ ಸೂಚನೆ ನೀಡಿದೆ. ಏಪ್ರಿಲ್ 29ರಂದು ಮತ್ತೆ ಕೇಜ್ರಿವಾಲ್ ಅವರ ಅರ್ಜಿ ವಿಚಾರಣೆ ನಡೆಸುವುದಾಗಿ ತಿಳಿಸಿದೆ. ಏಪ್ರಿಲ್ 29ರವರೆಗೆ ಕೇಜ್ರಿವಾಲ್ ಅವರಿಗೆ ಜಾಮೀನು ಸಿಗುವ ಸಾಧ್ಯತೆ ಇಲ್ಲದಾಗಿದೆ.

ಸುಪ್ರೀಂಕೋರ್ಟ್‌ನಲ್ಲೂ ರಿಲೀಫ್ ಸಿಗದ ಹಿನ್ನೆಲೆಯಲ್ಲಿ ಅರವಿಂದ್ ಕೇಜ್ರಿವಾಲ್ ಅವರು ಹೆಲ್ತ್ ಚೆಕಪ್ ಮಾಡಿಸಿಕೊಳ್ಳಲು ಅರ್ಜಿ ಸಲ್ಲಿಸಿದ್ದಾರೆ. ಕೇಜ್ರಿವಾಲ್ ಅವರ ಡೈಯಟ್ ಚಾರ್ಟ್‌ನಲ್ಲಿ ಮಾವಿನ ಹಣ್ಣು ತಿನ್ನಲು ಶಿಫಾರಸು ಮಾಡಿರೋದು ವಿವಾದಕ್ಕೆ ಕಾರಣವಾಗಿದೆ. ಈ ಡೈಯಟ್ ಚಾರ್ಟ್‌ ಅನ್ನು ಕೋರ್ಟ್ ನಾಳೆ ಪರಿಶೀಲನೆ ನಡೆಸಲು ಮುಂದಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜೈಲಿನಲ್ಲಿ ಮಾವಿನ ಹಣ್ಣು ತಿಂದು ಶುಗರ್‌ ಲೆವೆಲ್ ಏರಿಸಿಕೊಂಡ ಕೇಜ್ರಿವಾಲ್; ಬೇಲ್‌ಗೆ ಮಾಸ್ಟರ್ ಪ್ಲಾನ್‌?

https://newsfirstlive.com/wp-content/uploads/2024/04/Kejriwal-Mango-Jail.jpg

Load More