newsfirstkannada.com

ಅಗ್ನಿ ಪರೀಕ್ಷೆಯಲ್ಲಿ ಗೆದ್ದ ‘ಟೈಗರ್‌’; ಕಾಂಗ್ರೆಸ್ ದೋಸ್ತಿ ಸರ್ಕಾರ ಸೇಫ್‌; ಯಾರಿಗೆಷ್ಟು ಮತ?

Share :

Published February 5, 2024 at 3:22pm

Update February 5, 2024 at 3:32pm

    ವಿಶ್ವಾಸಮತಯಾಚನೆಯಲ್ಲಿ ಗೆದ್ದು ಬೀಗಿದ JMM, RJD, ಕಾಂಗ್ರೆಸ್

    ಜಾರ್ಖಂಡ್‌ ‘ಟೈಗರ್’ ಸರ್ಕಾರದ ಪರ 47 ಶಾಸಕರು ಮತ ಚಲಾವಣೆ

    ಶಿಬು ಸೊರೇನ್ ಸ್ಥಾಪಿಸಿದ JMM ಪಕ್ಷದ ಉಪಾಧ್ಯಕ್ಷ ಚಂಪೈ ಸೊರೇನ್

ರಾಂಚಿ: ಜಾರ್ಖಂಡ್ ಮುಖ್ಯಮಂತ್ರಿ ಚಂಪೈ ಸೊರೇನ್ ಅವರು ಕೊನೆಗೂ ವಿಧಾನಸಭೆಯಲ್ಲಿ ತಮ್ಮ ಬಹುಮತ ಸಾಬೀತು ಪಡಿಸಿದ್ದಾರೆ. 81 ಶಾಸಕರ ವಿಧಾನಸಭೆಯಲ್ಲಿ ಸರ್ಕಾರದ ಬಹುಮತಕ್ಕೆ 41 ಶಾಸಕರ ಬೆಂಬಲದ ಅಗತ್ಯವಿತ್ತು. ವಿಶ್ವಾಸಮತಯಾಚನೆಯಲ್ಲಿ ಚಂಪೈ ಸೋರೆನ್‌ ಸರ್ಕಾರದ ಪರ 47 ಶಾಸಕರು ಮತ ಚಲಾವಣೆ ಮಾಡಿದ್ದಾರೆ.

ಜಾರ್ಖಂಡ್‌ನಲ್ಲಿ ಜೆಎಂಎಂ, ಆರ್‌ಜೆಡಿ ಹಾಗೂ ಕಾಂಗ್ರೆಸ್ ಮೈತ್ರಿಕೂಟದ ಸರ್ಕಾರ ಅಸ್ತಿತ್ವದಲ್ಲಿದೆ. ಭೂಮಿ ಖರೀದಿ ಹಾಗೂ ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಮಾಜಿ ಸಿಎಂ ಹೇಮಂತ್ ಸೊರೇನ್ ಅವರು ಜೈಲು ಪಾಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಚಂಪೈ ಸೊರೇನ್ ಅವರನ್ನು ಮೈತ್ರಿಕೂಟ ಸಿಎಂ ಆಗಿ ಆಯ್ಕೆ ಮಾಡಿತ್ತು.

ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಚಂಪೈ ಸೊರೇನ್ ಅವರಿಗೆ ರಾಜ್ಯಪಾಲರು ಬಹುಮತ ಸಾಬೀತು ಪಡಿಸಲು ಇಂದು ಕಾಲಾವಕಾಶ ನೀಡಿದ್ದರು. ಇಂದು ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸಿದ ಸಿಎಂ ಚಂಪೈ ಸೊರೇನ್ ಅವರು ಸುಲಭವಾಗಿ ಬಹುಮತ ಸಾಬೀತುಪಡಿಸಿದ್ದಾರೆ. 47 ಶಾಸಕರ ಬೆಂಬಲ ಚಂಪೈ ಸೊರೇನ್ ಸರ್ಕಾರಕ್ಕೆ ಇರೋದ್ರಿಂದ ಮುಂದಿನ 6 ತಿಂಗಳ ಕಾಲ ಜೆಎಂಎಂ ನೇತೃತ್ವದ ಸರ್ಕಾರ ಸುಭದ್ರವಾಗಿದೆ. ಜಾರ್ಖಂಡ್ ಅಸೆಂಬ್ಲಿಯಲ್ಲಿ ಎನ್​ಡಿಎ ಮಿತ್ರಪಕ್ಷಗಳು 29 ಮತಗಳನ್ನು ಪಡೆದಿವೆ.

ಇದನ್ನೂ ಓದಿ: ‘ಜಾರ್ಖಂಡ್ ಟೈಗರ್’ಗೆ ಇಂದು ಅಗ್ನಿ ಪರೀಕ್ಷೆ.. ಆಪರೇಷನ್ ಕಮಲ ಫೇಲ್ಯೂರ್ ಮಾಡೋದೇ ದೊಡ್ಡ ಚಾಲೆಂಜ್..!

ಜಾರ್ಖಂಡ್​ ಟೈಗರ್​ ಎಂದೇ ಚಂಪೈ​ ಪ್ರಖ್ಯಾತಿ
67 ವರ್ಷದ ಚಂಪೈ ಸೊರೇನ್ ಸೆರೈಕೆಲಾ ಕ್ಷೇತ್ರದ ಶಾಸಕರು. ಇದುವರೆಗೂ ನಾಲ್ಕು ಬಾರಿ ಶಾಸಕರಾಗಿ ಆಯ್ಕೆ ಆಗಿದ್ದಾರೆ. ಶಿಬು ಸೊರೆನ್ ಸ್ಥಾಪಿಸಿದ ಜೆಎಂಎಂ ಪಕ್ಷದ ಉಪಾಧ್ಯಕ್ಷರು ಕೂಡ ಹೌದು. ಇನ್ನು ಜಾರ್ಖಂಡ್ ಪ್ರತ್ಯೇಕ ರಾಜ್ಯ ರಚನೆ ಚಳವಳಿಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಹೀಗಾಗಿಯೇ ಅವರನ್ನು ಜಾರ್ಖಂಡ್​ ಟೈಗರ್​ ಎಂದು ಕರೆಯುತ್ತಾರೆ. ಹೇಮಂತ್ ಸೊರೆನ್ ಅವರ ನಿಷ್ಠಾವಂತ ಬೆಂಬಲಿಗರು ಆಗಿರುವ ಚಂಪೈ ಹೇಮಂತ್​ ಸೊರೇನ್​ ಸಂಪುಟದಲ್ಲಿ ಸಚಿವರಾಗಿ ಸೇವೆ ಸಲ್ಲಿದ್ದಾರೆ. ಸಾರಿಗೆ ಸೇರಿ ವಿವಿಧ ಖಾತೆಗಳನ್ನು ಚಂಪೈ ಸೊರೇನ್ ನಿಭಾಯಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಗ್ನಿ ಪರೀಕ್ಷೆಯಲ್ಲಿ ಗೆದ್ದ ‘ಟೈಗರ್‌’; ಕಾಂಗ್ರೆಸ್ ದೋಸ್ತಿ ಸರ್ಕಾರ ಸೇಫ್‌; ಯಾರಿಗೆಷ್ಟು ಮತ?

https://newsfirstlive.com/wp-content/uploads/2024/02/Jarkhand-Cm-Soren-1.jpg

Load More