newsfirstkannada.com

ಬರ ಪರಿಹಾರಕ್ಕಾಗಿ ಮಹತ್ವದ ನಿರ್ಧಾರ; ಸುಪ್ರೀಂಕೋರ್ಟ್​ ಮೆಟ್ಟಿಲೇರಿದ ರಾಜ್ಯ ಸರ್ಕಾರ

Share :

Published March 25, 2024 at 6:16am

    ಬೆಂಗಳೂರು ಸೇರಿ ಬಹುತೇಕ ನಗರ-ಪಟ್ಟಣಗಳ ಜನರ ನೀರಿನ ಸಂಕಟ

    ಮೋದಿ ಸರ್ಕಾರ ವಿರುದ್ಧ ಸಿಡಿದ ರಾಜ್ಯ ಸುಪ್ರೀಂ​ನಲ್ಲಿ ರಿಟ್​​​ ಅರ್ಜಿ ಸಲ್ಲಿಕೆ

    ನಮ್ಮ ತೆರಿಗೆ ನಮ್ಮ ಹಕ್ಕು ಎಲ್ಲಾ ಸ್ಟಂಟ್​ ಎಂದ ಹೆಚ್​ಡಿ ಕುಮಾರಸ್ವಾಮಿ

ಎಂಥಾ ಪರಿಸ್ಥಿತಿ ನೋಡಿ ರಾಜ್ಯದಲ್ಲಿ. ಇಲ್ಲಿ ಕುಡಿಯೋಕೆ ನೀರಿಲ್ಲ. ಬರ ಬಿದ್ದು ಜನ ಅದೆಂಥಾ ಸಂಕಟ ಅನುಭವಿಸ್ತಿದ್ದಾರೆ ರಾಜ್ಯಾದ್ಯಂತ ಅನ್ನೋದು ನಿಮಗೂ ಗೊತ್ತಿದೆ. ಆದ್ರೆ, ರಾಜಕಾರಣದಲ್ಲಿ ಮೊಸರಲ್ಲೂ ಕಲ್ಲು ಹುಡುಕೋ ಬುದ್ಧಿ. ಈ ಹೊತ್ತಲ್ಲಿ ಹೊಸ ಸಂಘರ್ಷಕ್ಕೆ ಸಿದ್ದು ಸೆಡ್ಡು ಹೊಡೆದಿದ್ದಾರೆ. ಆ ಸೆಡ್ಡು ಇತಿಹಾಸದಲ್ಲೇ ರಾಜ್ಯವೊಂದು ಬರ ಪರಿಹಾರಕ್ಕಾಗಿ ಕೇಂದ್ರದ ವಿರುದ್ಧ ಮೊದಲ ಬಾರಿ ಸುಪ್ರೀಂ​​ ಕದ ತಟ್ಟಿಸಿದೆ.

2 ತಿಂಗಳು ಉರುಳಿದ್ರೆ ಮಳೆಗಾಲ, ಇನ್ನೂ ಬಂದಿಲ್ಲ ಬರ ಪರಿಹಾರ!

ಮುಂಗಾರು-ಹಿಂಗಾರು ಕೈಕೊಟ್ಟು ಇಡೀ ರಾಜ್ಯವನ್ನೇ ಬರಕ್ಕೆ ತಳ್ಳಿದ ವರುಣ, ಸಂಕಟವನ್ನ ಸಂಭ್ರಮದಿಂದ ನೋಡ್ತಿದ್ದಾನೆ. ಈ ಸಂಭ್ರಮದಲ್ಲಿ ಕೇಂದ್ರ ಸರ್ಕಾರವೂ ಪಾಲು ಪಡೆದಿದೆಯೋ ಏನೋ? ಸೂರ್ಯನ ಪ್ರತಾಪಕ್ಕೆ ಒಣಗಿ ನಿಂತ ಬೆಳೆಗಳು, ಹನಿ ನೀರಿಗಾಗಿ ಬಿಕ್ಕುತ್ತಿವೆ. ಜಲಪಾತ್ರೆಗಳೆಲ್ಲವೂ ಬರಿದಾಗಿ ಬಣಗುಡ್ತಿದ್ದು, ಪ್ರಾಣಿ ಪಕ್ಷಿಗಳ ಆರ್ತನಾದ ಹೇಳ ತೀರದು. ಇತ್ತ, ಬೆಂಗಳೂರು ಸೇರಿ ಬಹುತೇಕ ನಗರ-ಪಟ್ಟಣಗಳ ಜನರ ನೀರಿನ ಸಂಕಟ, ಅಧಿಕಾರಸ್ಥರಿಗೆ ಪ್ರೀತಿ. ಅಂದ್ಹಾಗೆ ಈ ಸಂಕಟಗಳ ಒಂದ್ಕಡೆಯಾದ್ರೆ, ಇನ್ನೊಂದ್ಕಡೆ ಕಾನೂನು ಕದನಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಬರ ಪರಿಹಾರ ನೀಡ್ತಿಲ್ಲ ಅಂತ ಸುಪ್ರೀಂ ಕೋರ್ಟ್​ಗೆ ದೂರು ಕೊಂಡೊಯ್ದಿದೆ. ಎನ್​ಡಿಆರ್​ಎಫ್​ ಪರಿಹಾರಕ್ಕಾಗಿ ಅನುದಾನ ಬಿಡುಗಡೆ ಮಾಡದೇ ತಾರತಮ್ಯ ಆರೋಪಿಸಿ ಸುಪ್ರೀಂ ಕೋರ್ಟ್‌ಗೆ ರಿಟ್​​ ಸಲ್ಲಿದೆ. ಬರ ಪರಿಹಾರ ನೀಡಲು ನಿರ್ದೇಶಿಸುವಂತೆ ರಾಜ್ಯ ಸರ್ಕಾರವೊಂದು ಸುಪ್ರೀಂಕೋರ್ಟ್‌ಗೆ ಹೋಗಿದ್ದು ಇದೇ ಮೊದಲು.

ಇದನ್ನು ಓದಿ: ನಾನು ಎಸ್​ಪಿ.. 30 ಗ್ರಾಂ ಚಿನ್ನ, 2 ಸಾವಿರ ರೂಪಾಯಿ ಪಡೆದು ವಂಚಿಸಿದ ಮಹಿಳೆ; ನಕಲಿ ನಿವೇದಿತಾಳ ಮುಖವಾಡ ಬಯಲು

‘ಬರಕ್ಕೆ ಪರಿಹಾರ ಕೊಡಿಸಿ’!

ಸಂವಿಧಾನದ 32ನೇ ವಿಧಿ ಅಡಿಯಲ್ಲಿ ರಾಜ್ಯದಿಂದ ರಿಟ್ ಅರ್ಜಿ ಸಲ್ಲಿಸುತ್ತಿದ್ದೇವೆ. 2023ರ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ರಾಜ್ಯದಲ್ಲಿ ಶೇ.25 ಮಳೆ ಕೊರತೆಯಾಗಿದೆ. ರಾಜ್ಯದ 196 ತಾಲೂಕುಗಳಲ್ಲಿ ತೀವ್ರ ಬರ, 27 ತಾಲೂಕುಗಳಲ್ಲಿ ಬರ ಪರಿಸ್ಥಿತಿಯಿದೆ. ಬರ ಪರಿಸ್ಥಿತಿಯಿಂದ ಈವರೆಗೆ 35,162 ಕೋಟಿ ಮೌಲ್ಯದ ಬೆಳೆ ನಾಶವಾಗಿದೆ.. ರಾಜ್ಯದಿಂದ 4 ಬಾರಿ ಬರಗಾಲದ ಮೌಲ್ಯಮಾಪನ ಮಾಡಲಾಗಿದೆ.. ಬೆಳೆನಷ್ಟದ ಪರಿಹಾರಕ್ಕಾಗಿ ₹4,663.112 ಕೋಟಿ.. ಬರಗಾಲದಿಂದ ಸಮಸ್ಯೆಗೆ ಒಳಗಾದ ಕುಟುಂಬಗಳಿಗೆ ಪರಿಹಾರ ನೀಡಲು ₹12,577.9 ಕೋಟಿ.. ಕುಡಿಯುವ ನೀರು ಪೂರೈಕೆಗೆ ₹566.78 ಕೋಟಿ.. ಜಾನುವಾರು ಆರೈಕೆಗೆ ₹363.68 ಕೋಟಿ.. ಹೀಗೆ ಒಟ್ಟು ₹18,171.44 ಕೋಟಿ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ವರದಿ ಸಲ್ಲಿಸಿದೆ.. ಕೇಂದ್ರ ಸರ್ಕಾರಕ್ಕೆ ಮೂರು ಬಾರಿ ಮನವಿ ಪತ್ರ ಸಲ್ಲಿಸಿದರೂ ಕಾನೂನು ಪ್ರಕಾರ ಪರಿಹಾರ ನೀಡಿಲ್ಲ.. ಹೀಗಾಗಿ ಕೇಂದ್ರ ಸರ್ಕಾರಕ್ಕೆ ಪರಿಹಾರ ನೀಡುವಂತೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಬೇಕು.

– ಸಿದ್ದರಾಮಯ್ಯ, ಮುಖ್ಯಮಂತ್ರಿ

ಆದ್ರೆ, ಬರ ಪರಿಹಾರದ ಬಗ್ಗೆ ಮಾತ್ನಾಡದ ವಿಪಕ್ಷಗಳು ಇದನ್ನ ಕಾಮಾಲೆ ಕಣ್ಣಿಂದ ಕಾಣ್ತಿವ್ಯಾ ಅನ್ನೋ ಅನುಮಾನ ಜನ ಸಾಮಾನ್ಯರಲ್ಲಿ ಕಾಡ್ತಿದೆ. ಇದೊಂದು ರಾಜಕೀಯ ಸ್ಟಂಟ್‌ ಅಂತ ಬಿಂಬಿಸಲು ಯತ್ನಿಸಿ, ರಾಜ್ಯದ ಮುಖ್ಯಮಂತ್ರಿಗೆ ಈ ಪರಿಸ್ಥಿತಿ ಬರಬಾರದು ಅಂತ ಅಣಕಿಸಿವೆ. ಕರ್ನಾಟಕವೇ ಆದ್ಯತೆ ಅಂತ ಪುಂಗಿ ಬಿಡುವ ದಳಪತಿಗಳಿಗೆ ಏನಾಯ್ತು? ಕೇವಲ ರಾಜಕೀಯಕ್ಕಾಗಿ ನಾಡ ಹಿತವನ್ನೇ ಜೆಡಿಎಸ್​​​ ಮರೆರು ಬಿಡ್ತಾ? ಬರ ಏನು ಬಯಸಿ ಬಯಸಿ ಬರುವ ಭಾಗ್ಯನಾ? ಜನ ಸಾಮಾನ್ಯನಿಗೆ ಬಂದ ಸ್ಥಿತಿ ಕಣ್ಣಿಗೆ ಕಾಣ್ತಿಲ್ಲವಾ? ಇದರಲ್ಲಿ ಸ್ಟಂಟ್​​ ಯಾರದ್ದೋ, ಡ್ರಾಮಾ ಯಾರದ್ದೋ? ವೈಫಲ್ಯ ಯಾರದ್ದೋ ಜನರೇ ತೀರ್ಮಾನಿಸಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬರ ಪರಿಹಾರಕ್ಕಾಗಿ ಮಹತ್ವದ ನಿರ್ಧಾರ; ಸುಪ್ರೀಂಕೋರ್ಟ್​ ಮೆಟ್ಟಿಲೇರಿದ ರಾಜ್ಯ ಸರ್ಕಾರ

https://newsfirstlive.com/wp-content/uploads/2024/01/SIDDU-DKS-1.jpg

Load More