newsfirstkannada.com

ನೆಕ್ಸ್ಟ್​​ ಲೆವೆಲ್​ಗೆ ಹೋದ​​​ ಆಂಧ್ರ ರಾಜಕಾರಣ; ಸಿಎಂ ಜಗನ್​​ ಮೇಲೆಯೇ ಕಲ್ಲೆಸೆದು ಅಟ್ಯಾಕ್​, ಅಸಲಿ ಆಗಿದ್ದೇನು..?

Share :

Published April 14, 2024 at 7:38am

Update April 14, 2024 at 10:07am

  ಕಿಡಿಗೇಡಿಗ ಕೃತ್ಯದಿಂದ ಜಗನ್ ಹಣೆ, ಎಡಗಣ್ಣು, ತಲೆಗೆ ಗಾಯವಾಗಿವೆ

  ಬಸ್ ಯಾತ್ರೆಯಿಂದ ಕೆಳಗಿಳಿಸಿ ಚಿಕಿತ್ಸೆ ನೀಡಿದ ವೈದ್ಯರು, ನಂತರ ವಿಶ್ರಾಂತಿ

  ಕಲ್ಲೇಟು ಬಿದ್ದು ಓರ್ವ ನಾಯಕ ಗಂಭೀರವಾಗಿ ಗಾಯಗೊಂಡಿದ್ದಾರೆ

ರಾಜಕೀಯ ಅನ್ನೋದು ಅದೆಷ್ಟು ಹಾಳಾಗಿದೆಯೋ.. ಶ್ರೀಸಾಮಾನ್ಯನ ಕಲ್ಪನೆಗೂ ನಿಲುಕದ ಕೊಳಕಿನ ಆಗರವಿದು. ಮೊನ್ನೆಯಷ್ಟೇ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಬಿದ್ದು ಹಣೆಗೆ ಗಾಯ ಮಾಡಿಕೊಂಡಿದ್ರು. ಈ ಬೆನ್ನಲ್ಲೇ ಕಳೆದ ರಾತ್ರಿ ಆಂಧ್ರ ಸಿಎಂ ಜಗನ್ ಮೇಲೆ ಕಿಡಿಗೇಡಿಗಳು ಕಲ್ಲೆಸೆದಿದ್ದಾರೆ.

ಲೋಕಸಮರದ ಕಾವು ಭಾಸ್ಕರನ ಬಿಸಿಲಿಗೂ ಠಕ್ಕರ್ ಕೊಡ್ತಿದೆ. ಭರ್ಜರಿ ಪ್ರಚಾರ, ರೋಡ್ ಶೋಗಳು ಎಲ್ಲೆಡೆ ಆಯೋಜನೆಗೊಳ್ಳುತ್ತಿವೆ. ಕರ್ನಾಟಕದಲ್ಲಿ ಪ್ರಚಾರದ ವೇಳೆ ನಾಯಕರು ಒಬ್ಬರ ಮೇಲೆ ಮತ್ತೊಬ್ಬರು ವಾಗ್ಬಾಣಗಳು ಹೂಡುತ್ತಾರೆ. ಕೆಲವೊಮ್ಮೆ ನಾಲಿಗೆ ಹರಿಬಿಟ್ಟು ಮನಸ್ಸಿಗೆ ಘಾಸಿ ಮಾಡ್ತಾರೆ. ಆದ್ರೆ ಆಂಧ್ರಪ್ರದೇಶದ ರಾಜಕಾರಣ ನೆಕ್ಸ್ಟ್​ ಲೆವೆಲ್​ಗೆ ಹೋಗಿದೆ.

ಇದನ್ನೂ ಓದಿ:ತಂಪೆರೆದ ಮಳೆರಾಯ.. ರಾಜ್ಯದ ಯಾವ್ಯಾವ ಜಿಲ್ಲೆಯಲ್ಲಿ ಭಾರೀ ಮಳೆ..?

ಆಂಧ್ರಪ್ರದೇಶ ಸಿಎಂ ಜಗನ್ ಮೇಲೆ ಕಲ್ಲು ಎಸೆದ ಕಿಡಿಗೇಡಿಗಳು
YSRCP ಪಕ್ಷ ವಿಜಯವಾಡದಲ್ಲಿ ಭರ್ಜರಿ ಪ್ರಚಾರ ಕಾರ್ಯ ನಡೆಸುತ್ತಿದೆ. ತೆರೆದ ವಾಹನದ ಮೂಲಕ ನಾವು ಸಿದ್ಧ ಅನ್ನೋ ಱಲಿ ನಡೆಸುತ್ತಿದ್ದ ಆಂಧ್ರಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಮೇಲೆ ಕಿಡಿಗೇಡಿಗಳು ಕಲ್ಲು ಎಸೆದಿದ್ದಾರೆ. ಪರಿಣಾಮ ಜಗನ್ ಹಣೆ, ಎಡಗಣ್ಣು ಹಾಗೂ ತಲೆಗೆ ಗಾಯವಾಗಿವೆ. ತಕ್ಷಣವೇ ಜಗನ್ ಅವರಿಗೆ ಭದ್ರತಾ ಪಡೆಗಳು ರಕ್ಷಣೆ ನೀಡಿವೆ. ಜಗನ್ ಅವರನ್ನು ಬಸ್ ಯಾತ್ರೆಯಿಂದ ಕೆಳಗೆ ಇಳಿಸಿ ಪ್ರಥಮ ಚಿಕಿತ್ಸೆ ನೀಡಿ ಕೆಲ ಹೊತ್ತು ವಿಶ್ರಾಂತಿ ಪಡೆಯಲು ವೈದ್ಯಾಧಿಕಾರಿಗಳ ತಂಡ ಸೂಚಿಸಿದೆ. ಆದರೆ ಜಗನ್ ಪ್ರಥಮ ಚಿಕಿತ್ಸೆ ಪಡೆದು ಮತ್ತೆ ಪ್ರಚಾರ ಕಾರ್ಯ ಮುಂದುವರಿಸಿದ್ರು. ಇದೇ ವೇಳೆ ಜಗನ್ ಪಕ್ಕದಲ್ಲಿದ್ದ ನಾಯಕರಿಗೂ ಕಲ್ಲೇಟು ಬಿದ್ದಿದ್ದು ಒರ್ವ ನಾಯಕ ಗಂಭೀರವಾಗಿ ಗಾಯಗೊಂಡಿದ್ದಾರೆ.

ವಿಜಯವಾಡದಲ್ಲಿ ಜಗನ್ ಯಾತ್ರೆಗೆ ಅದ್ಧೂರಿ ಸ್ವಾಗತ ಸಿಕ್ಕಿ ಬೆಂಬಲಿಗರು, ಜನರು ಜಗನ್‌ಗೆ ಹೂವಿನ ಸ್ವಾಗತ ನೀಡಿದ್ದರು. ಹಲವರು ಹೂವಿನ ದಳಗಳನ್ನು ಎಸೆದಿದ್ದರು. ಇದರ ನಡುವೆ ಕೆಲವು ಕಿಡಿಗೇಡಿಗಳು ಮೊದಲೇ ಸಂಚು ರೂಪಿಸಿ ದಾಳಿ ಮಾಡಿದ್ದಾರೆ. ಹೀಗಾಗಿ ಭಾರಿ ಸಂಖ್ಯೆಯಲ್ಲಿ ಸೇರಿದ್ದ ಜನರ ನಡುವೆ ಸೇರಿ ಕಲ್ಲು ತೂರಾಟ ನಡೆಸಿದ್ದಾರೆ. ಈ ಕಲ್ಲುತೂರಾಟದ ಹಿಂದೆ ಟಿಡಿಪಿ ಕೈವಾಡವಿದೆ ಎಂದು ವೈಎಸ್ಆರ್ ಕಾಂಗ್ರೆಸ್ ಆರೋಪಿಸಿದೆ. ಚುನಾವಣೆಯಲ್ಲಿ ಮತದಾರರನ್ನು ಗೆಲ್ಲಲು ಸಾಧ್ಯವಾಗದ ಪಕ್ಷಗಳು ಕಲ್ಲುತೂರಾಟ ನಡೆಸಿ ನಮ್ಮನ್ನು ಬೆದರಿಸುವ ತಂತ್ರಕ್ಕೆ ಇಳಿದಿದೆ. ಇದಕ್ಕೆ ಜನರು ಉತ್ತರಿಸಲಿದ್ದಾರೆ ಎಂದು ಹೇಳಿದೆ.

ಇದನ್ನೂ ಓದಿ: ಟೀಂ ಇಂಡಿಯಾದ ಡ್ರೆಸ್ಸಿಂಗ್ ರೂಮ್​​ನಲ್ಲಿ ಸೀತಾ, ಗೀತಾ.. ಇಬ್ಬರು ಆಟಗಾರರ ಸಿಕ್ರೇಟ್​ ರಿವೀಲ್ ಮಾಡಿದ ಕೊಹ್ಲಿ..!

ಇಲ್ಲಿ ಗಮನಿಸಬೇಕಾದ ಅಂಶವಂದ್ರೆ ಆಂಧ್ರಪ್ರದೇಶದಲ್ಲಿ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆ ಒಟ್ಟಿಗೆ ನಡೆಯಲಿದೆ. 175 ಸದಸ್ಯ ಬಲದ ವಿಧಾನಸಭೆ ಮತ್ತು 25 ಲೋಕಸಭಾ ಸ್ಥಾನಗಳಿಗೆ ಮೇ 13ರಂದು ಚುನಾವಣೆ ನಡೆಯಲಿದೆ. ವೈಎಸ್‌ಆರ್‌ಸಿಪಿ 2019ರ ಚುನಾವಣೆಯಲ್ಲಿ 151 ವಿಧಾನಸಭಾ ಮತ್ತು 22 ಲೋಕಸಭಾ ಕ್ಷೇತ್ರಗಳನ್ನು ಗೆದ್ದಿತ್ತು. ಈ ಬಾರಿ ಟಿಡಿಪಿ, ಬಿಜೆಪಿ ಮತ್ತು ಜನಸೇನೆ ಮೈತ್ರಿಯಿಂದ ಸವಾಲು ಎದುರಿಸುತ್ತಿದ್ದು ಗೆಲುವು ಕಠಿಣವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನೆಕ್ಸ್ಟ್​​ ಲೆವೆಲ್​ಗೆ ಹೋದ​​​ ಆಂಧ್ರ ರಾಜಕಾರಣ; ಸಿಎಂ ಜಗನ್​​ ಮೇಲೆಯೇ ಕಲ್ಲೆಸೆದು ಅಟ್ಯಾಕ್​, ಅಸಲಿ ಆಗಿದ್ದೇನು..?

https://newsfirstlive.com/wp-content/uploads/2024/04/JAGAN-2.jpg

Load More