newsfirstkannada.com

ಜೊತೆ ಜೊತೆಯಲಿ ಧರ್ಮಸ್ಥಳ ಮಂಜುನಾಥ ಸ್ವಾಮಿಯ ದರ್ಶನ ಪಡೆದ ಸಿಎಂ, ಡಿಸಿಎಂ; ಏನಿದರ ಸಂದೇಶ?

Share :

Published May 25, 2024 at 9:03pm

Update May 25, 2024 at 9:07pm

    ಧರ್ಮಸ್ಥಳ ಧರ್ಮಾಧಿಕಾರಿ ಹೆಗ್ಗಡೆಯವರ ಕಾಲಿಗೆ ಬಿದ್ದು ಡಿಕೆಶಿ ಆಶೀರ್ವಾದ

    ಜೊತೆಯಾಗಿ ಮಂಜುನಾಥನ ದರ್ಶನ ಪಡೆದ ಸಿಎಂ ಮತ್ತು ಡಿಸಿಎಂ

    ಶಾಸಕ ಹರೀಶ್ ಪೂಂಜ ವಿರುದ್ಧ ಸಿಎಂ ಸಿದ್ದರಾಮಯ್ಯ ಖಡಕ್​ ಪ್ರಶ್ನೆ

ಸರ್ಕಾರಕ್ಕೆ ವರುಷ ತುಂಬಿದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿ ಧರ್ಮಸ್ಥಳ ಮಂಜುನಾಥನ ಸನ್ನಿಧಾನಕ್ಕೆ ಭೇಟಿ ಕೊಟ್ಟು ದರ್ಶನ ಪಡೆದಿದ್ದಾರೆ. ಈ ಹಿಂದೆ ಮಾಂಸ ತಿಂದು ದೇವಸ್ಥಾನಕ್ಕೆ ಹೋದ್ರು ಎಂಬ ಟೀಕೆ ಹಿನ್ನೆಲೆ ಈ ಬಾರಿ ಯಾವುದೇ ವಿವಾದಕ್ಕೆ ಆಸ್ಪದ ಕೊಡದಂತೆ ನಡೆದುಕೊಂಡಿದ್ದಾರೆ. ಅಪ್ಪಟ ಸಾಂಪ್ರದಾಯಿಕ ರೀತಿಯಲ್ಲಿ ದೇವರ ದರ್ಶನ ಪಡೆದಿದ್ದು ವಿಶೇಷ.

ಇದನ್ನೂ ಓದಿ: ಪಾಂಡ್ಯಗೂ ಮುನ್ನ ಈ ಚಿತ್ತಚೋರರ ಜೊತೆ ಡೇಟಿಂಗ್! ​ ನತಾಶಾ ಪ್ರೇಮ್​ ಕಹಾನಿ ಸಿನಿಮಾವನ್ನೂ ಮೀರಿಸುತ್ತೆ..!

ಚುನಾವಣೆಯ ಪ್ರಚಾರದ ಭರಾಟೆ ಮುಗಿದ ಬಳಿಕ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿ ಫುಲ್ ರಿಲ್ಯಾಕ್ಸ್​ ಮೂಡ್​ನಲ್ಲಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಒಂದು ವರ್ಷ ಪೂರೈಸಿದ ಬಳಿಕ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿ ಫುಲ್ ಖುಷ್​ ಆಗಿದ್ದಾರೆ. ಈ ಬೆನ್ನಲ್ಲೇ ಇಂದು ಮೈಸೂರಿನಿಂದ ವಿಶೇಷ ವಿಮಾನದಲ್ಲಿ ಮಧ್ಯಾಹ್ನ ಮಂಗಳೂರಿನ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಈ ಹಿಂದೆ ಹೊತ್ತಿದ್ದ ಹರಕೆ ಪೂರೈಸಲು ಶ್ರೀ ಮಂಜುನಾಥನ ದರ್ಶನ ಪಡೆದಿದ್ದಾರೆ. ಸಿಎಂ, ಡಿಸಿಎಂ ಧರ್ಮಸ್ಥಳಕ್ಕೆ ಆಗಮಿಸುತ್ತಿದ್ದಂತೆ ಪೂರ್ಣ ಕುಂಭ, ವಾದ್ಯಘೋಷಗಳೊಂದಿಗೆ ಕ್ಷೇತ್ರದ ಪರವಾಗಿ ಹೆಗ್ಗಡೆ ಸಹೋದರ ಹರ್ಷೇಂದ್ರ ಹೆಗ್ಗಡೆ ಸ್ವಾಗತಿಸಿದರು. ಧರ್ಮಸ್ಥಳದ ಸಂಪ್ರದಾಯದಂತೆಯೇ ಇಬ್ಬರು ಕೂಡ ಅಂಗಿ ಕಳಚಿ, ಮೇಲೆ ಶಲ್ಯ ಹೊದ್ದು ಸ್ವಾಮಿಯ ದರ್ಶನ ಪಡೆದು ಮಂಜುನಾಥೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದರು.

ಸಿದ್ದು, ಡಿಕೆಶಿ ಭೇಟಿ ವೇಳೆ ಜೈ ಶ್ರೀರಾಮ್ ಕೂಗಿದ ಭಕ್ತರು

ಇನ್ನು, ಸಿದ್ದರಾಮಯ್ಯ ಹಾಗೂ ಡಿಕೆಶಿ ದೇವಸ್ಥಾನ ಪ್ರವೇಶದ ವೇಳೆ ಸಾಲುಗಟ್ಟಿ ನಿಂತಿದ್ದ ಸಾವಿರಾರು ಭಕ್ತರು ಜೈ ಶ್ರೀರಾಮ್ ಘೋಷಣೆ ಕೂಗಿದರು. ಕ್ಷೇತ್ರಕ್ಕೆ ಸಿಎಂ ಆಗಮನ ಹಿನ್ನೆಲೆ ದೇವಸ್ಥಾನ ಪ್ರವೇಶಕ್ಕೆ ಭಕ್ತರಿಗೆ ಕೆಲಕಾಲ ನಿರ್ಬಂಧಿಸಿದ್ದು ಭಕ್ತರ ಆಕ್ರೋಶಕ್ಕೆ ಕಾರಣವಾಗಿತ್ತು. ದರ್ಶನ ಪಡೆದು ಬಂದ ಬಳಿಕ ಭಕ್ತರಿಗೆ ಸಿಎಂ, ಡಿಸಿಎಂ ಕೈಮುಗಿದು ನಮಸ್ಕರಿಸಿದರು. ಬಳಿಕ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನ ಭೇಟಿ ಮಾಡಿದರು. ಈ ವೇಳೆ ಧರ್ಮಾಧಿಕಾರಿ ಹೆಗ್ಗಡೆಯವರ ಕಾಲಿಗೆ ಬಿದ್ದು ಡಿಕೆಶಿ ಆಶೀರ್ವಾದ ಪಡೆದರು. ಇನ್ನು ಈ ಹಿಂದೆ ಸಿಎಂ ಸಿದ್ದರಾಮಯ್ಯ ಮಾಂಸಾಹಾರ ತಿಂದು ಧರ್ಮಸ್ಥಳಕ್ಕೆ ಹೋಗಿದ್ದರೆಂಬ ಟೀಕೆ ಹಿನ್ನೆಲೆ ಇವತ್ತು ಬೆಳಗ್ಗೆ ಹೋಟೆಲ್‌ನಲ್ಲಿ ದೋಸೆ ಸವಿದಿದ್ದರು.

ಶಾಸಕ ಆದ ಮಾತ್ರಕ್ಕೆ ಪೂಂಜಾ ಗಲಾಟೆ ಮಾಡಬಹುದಾ ಅಂತ ಸಿಎಂ ಪ್ರಶ್ನೆ

ಇನ್ನು, ಇದಕ್ಕೂ ಮೊದಲು ಮಂಗಳೂರಿನ ಏರ್​ಪೋರ್ಟ್​ನಲ್ಲಿ ಶಾಸಕ ಹರೀಶ್ ಪೂಂಜ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಪ್ರತಿಕ್ರಿಯೆ ನೀಡಿದ್ದಾರೆ.

ಈ ಪ್ರಕರಣದಲ್ಲಿ ಕಾಂಗ್ರೆಸ್ ನ ಒತ್ತಡ ಅಂದರೆ ಏನು? ಕಾನೂನು ಎಲ್ಲರಿಗೂ ಒಂದೇ. 353 ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಇದು ಬೇ ಲೇಬಲ್ ಅಫೆನ್ಸಾ ನಾನ್ ಬೇಲೆಬಲ್ ಅಪೆನ್ಸಾ? ಇದು ನಾನ್ ಬೇಲೆಬಲ್ ಅಫೆನ್ಸ್ ಇದೆ. ಈ ಪ್ರಕರಣ ಬೇಲೇಬೇಲ್ ಅಫೆನ್ಸ್ ಅಲ್ಲ. ಈ ಪ್ರಕರಣದಲ್ಲಿ ಏಳು ವರ್ಷ ಜೈಲುವಾಸ ಇದೆ. ಎಂಎಲ್​ಎ ಅಂತಾ ಬಿಟ್ಟು ಬಿಡೋಕೆ ಆಗುತ್ತಾ? ಎಂಎಲ್ ಎ ಆದ್ರೆ ಪೊಲೀಸ್ ಮೇಲೆ ಗಲಾಟೆ ಮಾಡಬಹುದಾ. ಶಾಸಕ ಪೂಜಾ ಮೇಲೆ ಎರಡು ಎಫ್ ಐ ಆರ್ ಇದೆ. ಶಾಸಕ ಪೂಂಜಾ ಯಾರ ಪರವಾಗಿ ಗಲಾಟೆ ಮಾಡಿದ್ದಾರೆ ಅಂತ ಹೇಳಿದ್ದಾರೆ.

– ಸಿಎಂ ಸಿದ್ದರಾಮಯ್ಯ

ಇನ್ನು ದೇವರ ದರ್ಶನ ಮುಗಿಸಿದ ಬಳಿಕ ಸ್ಪೀಕರ್ ಯು.ಟಿ ಖಾದರ್ ಸಹೋದರನ ಮಗಳ ಮದುವೆ ಕಾರ್ಯಕ್ರಮಕ್ಕೆ ಸಿಎಂ, ‌ಡಿಸಿಎಂ ತೆರಳಿದ್ರು. ಒಟ್ಟಾರೆ ಸಿಎಂ ಹಾಗೂ ಡಿಸಿಎಂ ಸರ್ಕಾರಕ್ಕೆ ವರುಷ ತುಂಬಿದ ಹಿನ್ನೆಲೆ ಮಂಜುನಾಥನ ದರ್ಶನ ಪಡೆದು ಯಾವುದೇ ಸಮಸ್ಯೆ ಇಲ್ಲದೆ ಸರ್ಕಾರ ನಡೆಯಲಪ್ಪ ಅಂತ ಪ್ರಾರ್ಥಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜೊತೆ ಜೊತೆಯಲಿ ಧರ್ಮಸ್ಥಳ ಮಂಜುನಾಥ ಸ್ವಾಮಿಯ ದರ್ಶನ ಪಡೆದ ಸಿಎಂ, ಡಿಸಿಎಂ; ಏನಿದರ ಸಂದೇಶ?

https://newsfirstlive.com/wp-content/uploads/2024/05/siddu-darmas4.jpg

Load More