newsfirstkannada.com

VIDEO: ‘ಸುಳ್ಳು ಹೇಳಿದ್ರೆ ನಾನು ರಾಜಕೀಯ ಬಿಡ್ತೀನಿ’- ಕೇಂದ್ರ ಸರ್ಕಾರಕ್ಕೆ ಸಿಎಂ ಸಿದ್ದು ಖಡಕ್ ಸವಾಲು

Share :

Published February 9, 2024 at 3:56pm

  ರಾಜ್ಯದಿಂದ 4.30 ಲಕ್ಷ ಕೋಟಿ ರೂಪಾಯಿ ಹಣ ಈ ವರ್ಷ ಸಂಗ್ರಹ

  ಇಡೀ ದೇಶದ ತೆರಿಗೆ ಪಾವತಿಸುವುದರಲ್ಲಿ ಕರ್ನಾಟಕ 2ನೇ ರಾಜ್ಯ

  ರಾಜ್ಯಕ್ಕೆ ಅನ್ಯಾಯ ಆದ್ರೆ ನಾವು ಬಾಯಿ ಮುಚ್ಚಿಕೊಂಡು ಇರಬೇಕಾ?

ದಾವಣಗೆರೆ: ಅನುದಾನ ತಾರತಮ್ಯ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ದೆಹಲಿಗೆ ಹೋಗಿ ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ ಸಿಎಂ ಸಿದ್ದರಾಯಮಯ್ಯ ಈಗ ಮತ್ತೊಂದು ಖಡಕ್ ಸವಾಲು ಹಾಕಿದ್ದಾರೆ.

ಚಲೋ ದೆಹಲಿ ಪ್ರತಿಭಟನೆ ವೇಳೆ ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಬಹಳಷ್ಟು ಅನ್ಯಾಯವಾಗುತ್ತಿದೆ. ಅನುದಾನದ ವಿಚಾರದಲ್ಲಿ ತಾರತಮ್ಯ ಆಗುತ್ತಿದೆ ಎಂದು ಅಂಕಿ-ಅಂಶಗಳ ಸಮೇತ ಆರೋಪ ಮಾಡಿದ್ದರು. ಇದನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಿರಾಕರಿಸಿದ್ದಾರೆ.

ಇದನ್ನೂ ಓದಿ: ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಪ್ರತಿ ಪೈಸೆ ಲೆಕ್ಕ ಕೊಟ್ಟ ಸಿಎಂ ಸಿದ್ದರಾಮಯ್ಯ; ಎಲ್ಲರೂ ಫುಲ್​ ಶಾಕ್​!

ಕೇಂದ್ರ ಸರ್ಕಾರದ ಉತ್ತರಕ್ಕೆ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ, ತೆರಿಗೆ ಹಣದ ವಿಚಾರದಲ್ಲಿ ನಾನು ಸುಳ್ಳು ಹೇಳ್ತೀನಿ ಅನ್ನೋದಾದ್ರೆ ನಾನು ರಾಜಕೀಯವನ್ನೇ ಬಿಟ್ಟು ಬಿಡ್ತೀನಿ. ಅದು ಕರ್ನಾಟಕದಲ್ಲಿ ಕಲೆಕ್ಟ್ ಆದ ತೆರಿಗೆ ಹಣ. ರಾಜ್ಯದಿಂದ 4.30 ಲಕ್ಷ ಕೋಟಿ ರೂಪಾಯಿ ಹಣ ಈ ವರ್ಷ ಸಂಗ್ರಹವಾಗಿದೆ. ಅದರಲ್ಲಿ 50 ಸಾವಿರದ 257 ಕೋಟಿ ಹಣ ಮಾತ್ರ ರಾಜ್ಯಕ್ಕೆ ಬರುತ್ತೆ. ಇಡೀ ದೇಶದ ತೆರಿಗೆ ಪಾವತಿಸುವುದರಲ್ಲಿ ಕರ್ನಾಟಕ 2ನೇ ರಾಜ್ಯವಾಗಿದೆ. ರಾಜ್ಯಕ್ಕೆ ಅನ್ಯಾಯ ಆದ್ರೆ ನಾವು ಬಾಯಿ ಮುಚ್ಚಿಕೊಂಡು ಇರಬೇಕಾ ಎಂದು ಗುಡುಗಿದ್ದಾರೆ.

ಇನ್ನು, ಮಾಜಿ ಸಿಎಂ ಬಿ.ಎಸ್‌ ಯಡಿಯೂರಪ್ಪನವರು ತಲೆ ಅಲ್ಲಾಡಿಸುತ್ತಾರೆ ಅಂದ್ರೆ ನಾವು ಅಲ್ಲಾಡಿಸಬೇಕಾ. ಅವರು ಬಾಯಿ ಮುಚ್ಕೊಂಡಿದ್ದಾರೆ ಅಂದ್ರೆ ನಾವು ಬಾಯಿ ಮುಚ್ಕೊಂಡಿರಬೇಕಾ? ಎಂದು ಸಿಎಂ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ‘ಸುಳ್ಳು ಹೇಳಿದ್ರೆ ನಾನು ರಾಜಕೀಯ ಬಿಡ್ತೀನಿ’- ಕೇಂದ್ರ ಸರ್ಕಾರಕ್ಕೆ ಸಿಎಂ ಸಿದ್ದು ಖಡಕ್ ಸವಾಲು

https://newsfirstlive.com/wp-content/uploads/2024/02/SIDDARAMAIH_CM.jpg

Load More