ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ, ಕಾಂಗ್ರೆಸ್ ಮುಖಂಡ ಮರಿಗೌಡ ಸಾವು
ತೀವ್ರ ಹೃದಯಾಘಾತಕ್ಕೆ ಬಲಿಯಾದ ಕುರುಬ ಸಮುದಾಯದ ಮುಖಂಡ..!
ಕಾಂಗ್ರೆಸ್ ಮುಖಂಡ ಮರಿಗೌಡ ಪಾಟೀಲ್ ನಿಧನಕ್ಕೆ ಕುಟುಂಬಸ್ಥರ ಕಣ್ಣೀರು
ಯಾದಗಿರಿ: ಸಿಎಂ ಸಿದ್ದರಾಮಯ್ಯ ಆಪ್ತ, ಕಾಂಗ್ರೆಸ್ ಮುಖಂಡ ಮರಿಗೌಡ ಪಾಟೀಲ್ ಹುಲ್ಕಲ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕುರುಬ ಸಮುದಾಯದ ಪ್ರಭಾವಿ ಮುಖಂಡ ಮರಿಗೌಡ (65) ತಮ್ಮ ಕೊನೆಯುಸಿರೆಳೆದಿದ್ದಾರೆ.
ಮರಿಗೌಡ ಸಿಎಂ ಸಿದ್ದರಾಮಯ್ಯ ಅವರಿಗೆ ಆಪ್ತರಾಗಿದ್ದರು. ಈ ಹಿಂದೆ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದರು. ಜತೆಗೆ ಕೃಷ್ಣ ಕಾಡಾ (ಭೀಮರಾಯನಗುಡಿ) ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಮರಿಗೌಡ ಅವರಿಗೆ ಕಲಬುರ್ಗಿ ತೊಗರಿ ಮಂಡಳಿ ಅಧ್ಯಕ್ಷರಾಗಿ ಆಯ್ಕೆಯಾಗುವ ಅವಕಾಶ ಕೂಡ ಇತ್ತು. ಆದರೆ, ಇದನ್ನು ನಿರಾಕರಿಸಿದ್ರು.
ಇನ್ನು, ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅತ್ಯಾಪ್ತರಾಗಿದ್ದರು ಮರಿಗೌಡ. ಇವರು ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಹುಲ್ಕಲ್ ಗ್ರಾಮದವರು. ಈಗ ಮರಿಗೌಡರ ನಿಧನಕ್ಕೆ ಕುಟುಂಬಸ್ಥರು ಕಂಬನಿ ಮಿಡಿದಿದ್ದಾರೆ.
ಇದನ್ನೂ ಓದಿ: ದುಡ್ಡು ಕೊಡಿ ಸ್ವಾಮಿ.. 3 ತಿಂಗಳಿಂದ ಬಾರದ ಗೃಹಲಕ್ಷ್ಮಿ ಹಣ; ಸಿದ್ದು ಸರ್ಕಾರದ ನಡೆಗೆ ಮಹಿಳೆಯರ ಕಣ್ಣೀರು: VIDEO
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ