ಗೃಹ ಆರೋಗ್ಯ ಯೋಜನೆಗೆ CM ಸಿದ್ದರಾಮಯ್ಯ ಚಾಲನೆ.. ಬಿಪಿ, ಶುಗರ್, ಕ್ಯಾನ್ಸರ್ ತಪಾಸಣೆ; ಉಚಿತ ಔಷಧಿ ಪೂರೈಕೆ

author-image
Bheemappa
Updated On
ಗೃಹ ಆರೋಗ್ಯ ಯೋಜನೆಗೆ CM ಸಿದ್ದರಾಮಯ್ಯ ಚಾಲನೆ.. ಬಿಪಿ, ಶುಗರ್, ಕ್ಯಾನ್ಸರ್ ತಪಾಸಣೆ; ಉಚಿತ ಔಷಧಿ ಪೂರೈಕೆ
Advertisment
  • ದಿನಕ್ಕೆ 15 ಮನೆಗಳಿಗೆ ತೆರಳಿ ಕಾರ್ಯಕರ್ತರ ತಂಡದಿಂದ ತಪಾಸಣೆ
  • ಅನಾರೋಗ್ಯ, ಮರಣ ತಡೆಗಟ್ಟವುದು ಈ ಯೋಜನೆಯ ಗುರಿ ಆಗಿದೆ
  • ರಾಜ್ಯಾದ್ಯಂತ ಅಸಾಂಕ್ರಾಮಿಕ ರೋಗಗಳ ತಪಾಸಣೆ ನಡೆಸುತ್ತಾರೆ

ಜನರ ಮನೆ ಬಳಿಗೆ ಆರೋಗ್ಯ ಸೇವೆ ಒದಗಿಸಲೆಂದು ಕಾಂಗ್ರೆಸ್​ ಸರ್ಕಾರ ಗೃಹ ಆರೋಗ್ಯ ಯೋಜನೆ ಜಾರಿಗೊಳಿಸಿದೆ. ರಾಜ್ಯಾದ್ಯಂತ ಅಸಾಂಕ್ರಾಮಿಕ ರೋಗಗಳಾದ ರಕ್ತದೊತ್ತಡ, ಮಧುಮೇಹ ತಪಾಸಣೆಗೆ ಆರೋಗ್ಯ ಇಲಾಖೆ ಸಜ್ಜಾಗಿದ್ದು, ರೋಗಕ್ಕೆ ತುತ್ತಾದವರಿಗೆ ಜನರ ಮನೆ ಬಳಿ ಉಚಿತವಾಗಿ ಔಷಧಿಗಳ ಪೂರೈಕೆ ಮಾಡಲಿದೆ.

ಗೃಹ ಆರೋಗ್ಯ ಯೋಜನೆಯಡಿ ಜನರ ಮನೆ ಬಳಿಗೆ ಬರುತ್ತೆ ಔಷಧಿ

ರಾಜ್ಯ ಸರ್ಕಾರದ ಮಹತ್ವದ ಗೃಹ ಆರೋಗ್ಯ ಯೋಜನೆಗೆ ಚಾಲನೆ ದೊರೆತಿದೆ. ಬೆಂಗಳೂರಿನ ವಿಧಾನ ಸೌಧದ ಬ್ಯಾಂಕ್ವೆಂಟ್​ ಹಾಲ್​ನಲ್ಲಿ ಸಿಎಂ ಸಿದ್ದರಾಮಯ್ಯ ದೀಪ ಬೆಳಗಿಸುವ ಮೂಲಕ ಗೃಹ ಆರೋಗ್ಯ ಯೋಜನೆಗೆ ಚಾಲನೆ ನೀಡಿದ್ದಾರೆ. ಕೋಲಾರ ಜಿಲ್ಲೆಯಿಂದ ಯೋಜನೆ ಪ್ರಾರಂಭಿಸಲಾಗಿದ್ದು, ಸಾಂಕೇತಿಕವಾಗಿ ನಾಲ್ವರಿಗೆ ಔಷಧಿಗಳನ್ನ ವಿತರಿಸಲಾಯಿತು.

ಇದನ್ನೂ ಓದಿ: ಎಲ್ಲ ದಿಕ್ಕುಗಳಲ್ಲೂ ಧಾರಾಕಾರ ಮಳೆ; ರಾಜ್ಯದ ಜಿಲ್ಲೆಗಳಲ್ಲೂ ನಿರಂತರ ವರುಣಾರ್ಭಟ, ಎಲ್ಲೆಲ್ಲಿ ಏನಾಗಿದೆ?

publive-image

ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಗೃಹ ಆರೋಗ್ಯ ಯೋಜನೆಯ ರೂವಾರಿ ಆಗಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಇದೊಂದು ದೂರದೃಷ್ಟಿಯ ಯೋಜನೆ. ರಾಜ್ಯದಲ್ಲಿ ಶೇಕಡಾ 26.9% ರಷ್ಟು ಬಿಪಿ, ಶೇಕಡಾ 15.6% ರಷ್ಟು ಶುಗರ್​ ರೋಗಗಳಿಂದ ಜನರು ಬಳಲುತ್ತಿದ್ದು, ಇದರಿಂದ‌ ಉಂಟುಗುತ್ತಿರುವ ಮರಣ ಹಾಗೂ ಅನಾರೋಗ್ಯ ತಡೆಗಟ್ಟವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ ಎಂದರು. ಅಲ್ಲದೇ ಬಾಯಿ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಗರ್ಭಕಂಠದ ಕ್ಯಾನ್ಸರ್​ ರೋಗಗಳಿಗೆ ಪರಿಹಾರ ಒದಗಿಸಲು ಗೃಹ ಆರೋಗ್ಯ ಯೋಜನೆಯಲ್ಲಿ ರೂಪ ರೇಷೆಗಳನ್ನ ಸಿದ್ಧಪಡಿಸಲಾಗಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಗೃಹ ಆರೋಗ್ಯ ಯೋಜನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಗ್ರಾಮೀಣ ಭಾಗದ ಜನರು ತಪಾಸಣೆಯನ್ನೇ ಮಾಡಿಸಿಕೊಂಡಿರುವುದಿಲ್ಲ. ಹೀಗಾಗಿ ಆರೋಗ್ಯ ಇಲಾಖೆ ಮನೆಗಳಿಗೆ ತೆರಳಿ ಜನರ ಅಸಾಂಕ್ರಾಮಿಕ ರೋಗಗಳ ತಪಾಸಣೆ ನಡೆಸುವುದರ ಜೊತೆಗೆ ಉಚಿತ ಔಷಧಿ ಪೂರೈಸಲಾಗುತ್ತೆ ಅಂತ ಮಾಹಿತಿ ನೀಡಿದರು.

ಇದನ್ನೂ ಓದಿ:ಪುಣೆಯಲ್ಲಿ ವಿರಾಟ್ ಪವರ್ ಫುಲ್ ಬ್ಯಾಟಿಂಗ್ ರೆಕಾರ್ಡ್.. 3 ಮಾದರಿಯಲ್ಲೂ ಇಲ್ಲಿ ಕೊಹ್ಲಿನೇ ಕಿಂಗ್!

publive-image

ಯೋಜನೆಯ ಕಾರ್ಯಚಟುವಟಿಕೆ

  • ಬಿಪಿ, ಶುಗರ್, ಬಾಯಿ, ಗರ್ಭ, ಕ್ಯಾನ್ಸರ್, ಅಸ್ವಸ್ಥತೆಗಳ ತಪಾಸಣೆ
  • ಕಾರ್ಯಕರ್ತರ ತಂಡವು ದಿನಕ್ಕೆ 15 ಮನೆಗಳಿಗೆ ತೆರಳಿ ತಪಾಸಣೆ
  • ಉಚಿತ ಔಷಧಿ, ಆಹಾರ, ವ್ಯಾಯಾಮ ಸಲಹೆ ನೀಡಲಾಗುವುದು
  • 1 ತಿಂಗಳ ನಂತರ ವಿಶೇಷ ಆರೋಗ್ಯ ಶಿಬಿರಗಳನ್ನ ಆಯೋಜನೆ
  • ಫಾಲೋ ಅಪ್‌ ಹಾಗೂ ಮಾಸಿಕ ಆರೋಗ್ಯ ಶಿಬಿರಗಳ ವ್ಯವಸ್ಥೆ
  • ಅಕಾಲಿಕ ಮರಣ, ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಬದ್ಧ

ಸದ್ಯಕ್ಕೆ ಕೋಲಾರ ಜಿಲ್ಲೆಯಿಂದ ಯೋಜನೆ ಪ್ರಾರಂಭವಾಗಿದ್ದು, ಮುಂಬರುವ ಜನವರಿ ತಿಂಗಳಿನಿಂದ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಯೋಜನೆ ಜಾರಿ ಮಾಡಲು ರಾಜ್ಯ ಸರ್ಕಾರ ರೆಡಿಯಾಗ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment