/newsfirstlive-kannada/media/post_attachments/wp-content/uploads/2024/04/Siddu-prasad.jpg)
ಮೈಸೂರು: ರಾಜ್ಯ ರಾಜಕಾರಣದಲ್ಲಿ ಮಹತ್ತರ ಬೆಳವಣಿಗೆ ನಡೆದಿದೆ. ಬಿಜೆಪಿ ಸಂಸದ ಶ್ರೀನಿವಾಸ ಪ್ರಸಾದ್ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದ್ದಾರೆ.
ಕಳೆದ ಹಲವು ವರ್ಷಗಳಿಂದ ಸಿದ್ದರಾಮಯ್ಯರಿಂದ ದೂರ ಉಳಿದಿದ್ದ ಶ್ರೀನಿವಾಸ ಪ್ರಸಾದ್ ಅವರ ಜಯಲಕ್ಷ್ಮಿ ಪುರಂ ನಿವಾಸಕ್ಕೆ ಭೇಟಿ ನೀಡಿದ ಸಿಎಂ 6 ವರ್ಷದ ಮುನಿಸು ಮರೆತು ಒಂದಾಗಿ ನಿಂತು ಚುನಾವಣೆಗೆ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ. ಈ ಮೂಲಕ ಶ್ರೀನಿವಾಸ್ ಪ್ರಸಾದ್ ಸಪೋರ್ಟ್ ಯಾರಿಗೆ ಅನ್ನೋ ಪ್ರಶ್ನೆ ಶುರುವಾಗಿದ್ದು, ಬಿಜೆಪಿ ನಾಯಕರಿಗೆ ಮತ್ತೆ ಟೆನ್ಷನ್ ಶುರುವಾಗಿದೆ.
ಸಿದ್ದರಾಮಯ್ಯ- ಪ್ರಸಾದ್ ಭೇಟಿಗೆ ಕಾರಣಗಳು
- ಲೋಕಸಭಾ ಚುನಾವಣೆಗೆ ಸುನೀಲ್ ಬೋಸ್ ಸ್ಪರ್ಧಿಸಿರುವುದು
- ಈಗಾಗಲೇ ಡಾ.ಎಚ್.ಸಿ.ಮಹದೇವಪ್ಪ, ಪುತ್ರ ಸುನೀಲ್ ಬೋಸ್, ಡಾ.ಯತೀಂದ್ರ ಸಿದ್ದರಾಮಯ್ಯ ಮೂಲಕ ಭೇಟಿ ಮಾಡಿರುವುದು
- ಕಳೆದ ಏಳೆಂಟು ವರ್ಷಗಳ ರಾಜಕೀಯ ವೈಷಮ್ಯ ಮರೆಯುವಂತೆ ಮನವಿ ಮಾಡಿರುವುದು
- ಶ್ರೀನಿವಾಸ ಪ್ರಸಾದ್ ರಾಜಕೀಯ ನಿವೃತ್ತ ಸಂದರ್ಭದಲ್ಲಿ ಅವರನ್ನ ಗೌರವಿಸುವ ನೆಪ
- ಶ್ರೀನಿವಾಸ ಪ್ರಸಾದ್ ಕುಟುಂಬಕ್ಕೆ ಟಿಕೆಟ್ ಕೈತಪ್ಪಿರುವುದು
- ಬಿಜೆಪಿ ಪಕ್ಷದಲ್ಲಿ ಮೂಲೆಗುಂಪು ಮಾಡಿದ್ದಾರೆ. ಮುಂದೆ ಅಳಿಯಂದಿರು, ಮೊಮ್ಮಕ್ಕಳ ರಾಜಕಾರಣಕ್ಕೆ ತೊಂದರೆ ಆಗುತ್ತದೆ ಎಂಬ ಮನವರಿಕೆ ಮಾಡಲು
- ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಗೆಲ್ಲಿಸಿಕೊಳ್ಳಲು
- ಮೈಸೂರು-ಚಾಮರಾಜನಗರ ಭಾಗದಲ್ಲಿ ಪ್ರಸಾದ್ ಅಭಿಮಾನಿಗಳ ಕಾಂಗ್ರೆಸ್ ನತ್ತ ಸೆಳೆಯಲು
- ಕಾಂಗ್ರೆಸ್ ಪಕ್ಷದಲ್ಲಿ ಮುಂಬರುವ ದಿನಗಳಲ್ಲಿ ಪ್ರಸಾದ್ ಅಳಿಯಂದಿರು ಹಾಗು ಕುಟುಂಬದವರಿಗೆ ಅವಕಾಶ ಕಲ್ಪಿಸುವ ಭರವಸೆ
- ಹಳೆಯ ದೋಸ್ತಿ ಮುಂದುವರಿಸುವ ಇಂಗಿತ
ಇದನ್ನೂ ಓದಿ:ಆರ್ಸಿಬಿ ರುಬ್ಬಿದ ಟ್ರೋಲರ್ಸ್; ಇದು ಕಥೆಯಲ್ಲ ವ್ಯಥೆ.. ಹೇಳೋಕೂ ಆಗ್ತಿಲ್ಲ, ಅನುಭವಿಸೋಕೂ ಆಗ್ತಿಲ್ಲ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ