newsfirstkannada.com

ಆರ್​​ಸಿಬಿ ರುಬ್ಬಿದ ಟ್ರೋಲರ್ಸ್; ಇದು ​ಕಥೆಯಲ್ಲ ವ್ಯಥೆ.. ಹೇಳೋಕೂ ಆಗ್ತಿಲ್ಲ, ಅನುಭವಿಸೋಕೂ ಆಗ್ತಿಲ್ಲ..!

Share :

Published April 13, 2024 at 12:21pm

  ಆರ್​​​ಸಿಬಿಯ ಹೊಸ ಅಧ್ಯಾಯ ಕಂಡು ದಂಗಾದ ಫ್ಯಾನ್ಸ್

  ಆಟಗಾರರು, ಮ್ಯಾನೇಜ್​ಮೆಂಟ್​ ವಿರುದ್ಧ ಆಕ್ರೋಶ

  ಮುಂಬೈ ಇಂಡಿಯನ್ಸ್​ ವಿರುದ್ಧ ಹೀನಾಯ ಸೋಲು

ಹೊಸ ಅದ್ಯಾಯ ಅಂತಾ ಟೂರ್ನಿ ಶುರು ಮಾಡಿದಾಗ ಆರ್​​ಸಿಬಿ ಅಭಿಮಾನಿಗಳಲ್ಲಿ ಹೊಸ ಹುರುಪು ಬಂದಿತ್ತು. ಬಹುತೇಕ ಫ್ಯಾನ್ಸ್​​ ಹೊಸ ಕೋಚ್​, ಹೊಸ ಸೀಸನ್​. ಪಕ್ಕಾ ಕಪ್​ ನಮ್ದೇ ಅಂದಿದ್ರು. ಅಸಲಿ ಅಖಾಡದಲ್ಲಿ ಅದೇ ರಾಗ.. ಅದೇ ಹಾಡು. ಹಳೇ ಪುಸ್ತಕದ್ದೇ ಹೊಸ ಅಧ್ಯಾಯ ಓಪನ್​ ಆಗಿದೆ. ಸಾಲು ಸಾಲು ಸೋಲಿನಿಂದ ಆರ್​​ಸಿಬಿ ಫ್ಯಾನ್ಸ್​ ಕಂಗೆಟ್ಟಿದ್ದಾರೆ.

ಸೋಲು.. ಸೋಲು.. ಸೋಲು.. ಸೋಲು.. ಸತತ 4 ಸೋಲು.. ಆಡಿರೋ 6 ಪಂದ್ಯದಲ್ಲಿ ಒಂದು ಗೆಲುವು.. ಐದು ಸೋಲು.. ಹೇಗ್​​ ಸ್ವಾಮಿ ತಡ್ಕೋಬೇಕು ಜೀವ..! ಈ ಹಿಂದೆ ಸೋತ್ರೂ, ಗೆದ್ರೂ ಆರ್​​ಸಿಬಿ ಅಂತಿದ್ದ ಫ್ಯಾನ್ಸ್,​ ಇದೀಗ ಅಸಮಾಧಾನಗೊಂಡಿದ್ದಾರೆ. ತಾಳ್ಮೆಯ ಕಟ್ಟೆಯೊಡೆದಿದ್ದು, ಆಕ್ರೋಶ ಹೊರ ಹಾಕ್ತಿದ್ದಾರೆ.

ಇದನ್ನೂ ಓದಿ:ಮನೆ ಶಿಫ್ಟ್ ಮಾಡಲು ಹೋಗ್ತಿದ್ದಾಗ ಸಂಭವಿಸಿತು ದುರಂತ; ನಾಲ್ವರು ಸಾವು, ಮೂವರು ಗಂಭೀರ

ಮುಂಬೈ ವಿರುದ್ಧದಲ್ಲಿ ಬ್ಯಾಟ್ಸ್​ಮನ್​, 197 ರನ್​ಗಳ ಉತ್ತಮ ಟಾರ್ಗೆಟ್​ ಅನ್ನೇ ಸೆಟ್​ ಮಾಡಿದ್ರು. ಆದ್ರೆ, ಬೌಲರ್ಸ್​​​ ಈ ಟಾರ್ಗೆಟ್​ನ ಡಿಫೆಂಡ್​​ ಮಾಡಿಕೊಳ್ಳುವಲ್ಲಿ ಫೇಲ್​ ಆದ್ರು. ಘರ್ಜಿಸಿದ ಮುಂಬೈ ಬ್ಯಾಟರ್ಸ್​ ಜಸ್ಟ್​ 15.3 ಓವರ್​ಗಳಲ್ಲೇ ಚಚ್ಚಿ ಬಿಸಾಕಿದ್ರು. ಈ ಆಟದ ನೋಡಿದ ಮೇಲೆ ಫ್ಯಾನ್ಸ್​ ಈ ಬೌಲಿಂಗ್​ ಲೈನ್​ಅಪ್​ ಇಟ್ಟುಕೊಂಡ್ರೆ, ಆಅರ್​​ಸಿಬಿ 2 ಸಲ ಬ್ಯಾಟಿಂಗ್​ ಮಾಡಬೇಕು.. ಆಗ ಮಾತ್ರ ಗೆಲ್ಲೋಕ್​ ಸಾಧ್ಯ ಅಂತಿದ್ದಾರೆ.

ಇದನ್ನೂ ಓದಿ: ಮೂವರು ಮಕ್ಕಳ ಸ್ಕೂಲ್​ ಫೀಸ್ ಕಟ್ಟದೇ ಧೋನಿ ನೋಡಲು 64,000 ಖರ್ಚು ಮಾಡಿದ ಅಭಿಮಾನಿ..!

ಇದನ್ನೂ ಓದಿ: RCBಗೆ ಪ್ಲೇ-ಆಫ್ ದಾರಿ ಕಷ್ಟವೇನೂ ಅಲ್ಲ​.. ಕಮರುತ್ತಿರುವ ಕನಸುಗಳಿಗೆ ಜೀವ ತುಂಬಲು ಇನ್ನೂ ಇವೆ ದಾರಿಗಳು..!

ಒಂದೆಡೆ ಫ್ಯಾನ್ಸ್​ ಆಕ್ರೋಶ ವ್ಯಕ್ತಪಡಿಸ್ತಾ ಇದ್ರೆ ಇನ್ನೊಂದೆಡೆ ಆರ್​​ಸಿಬಿಯ ಸೋಲು ಟ್ರೋಲರ್​​ಗಳಿಗೆ ಫುಲ್​ ಮೀಲ್ಸ್​​​ ಊಟ ಸಿಕ್ಕಂತಾಗಿದೆ. ಈ ಸೀಸನ್​ನಲ್ಲೂ ಆರ್​​ಸಿಬಿ ಈ ಕಪ್​​ ನಮ್ದೇ ಅಂತಾ ಅಭಿಯಾನ ಆರಂಭಿಸಿತು. ಆ ಕಪ್​ ನಮ್ದೇ ಅನ್ನೋ ಲೈನ್​ ಅನ್ನೇ ಹೊಡೆದಾಕವೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂಬೈ – ಆರ್​​ಸಿಬಿ ನಡುವಿನ ಹೈಲೆಟ್ಸ್​ ಆ ಕಥೆನ ಹೇಳ್ತಿದೆ.

ಇದನ್ನೂ ಓದಿ: ಹೆಸರು ಚೇಂಜ್ ಮಾಡಿ ಓಡಾಟ, ಕೆಫೆ ಸ್ಫೋಟದ ಮಾಸ್ಟರ್​ಮೈಂಡ್​ ಬಗ್ಗೆ ಸುಳಿವು ಸಿಕ್ಕಿದ್ದು ಹೇಗೆ ಗೊತ್ತಾ..?

ಮುಂಬೈ ವಿರುದ್ಧ ಕಳಪೆ ಬೌಲಿಂಗ್​ ಮಾಡಿದ ಆರ್​​ಸಿಬಿ ಬೌಲರ್ಸ್​ ವಿರುದ್ಧವಂತೂ ಫ್ಯಾನ್ಸ್​​ ರೊಚ್ಚಿಗೆದ್ದಿದ್ದಾರೆ. ನಮಗೆ ಬ್ಯಾಟಿಂಗ್​ ಮಾತ್ರ ಸಾಕು.. ಬೌಲಿಂಗ್​ ಬೇಡವೇ ಬೇಡ ಅಂತಿದ್ದಾರೆ.

ಆರ್​​ಸಿಬಿಯ ಪ್ರತಿ ಪಂದ್ಯಕ್ಕೂ ಮುಂಚೆ ಕೆಲ ಹಾರ್ಡ್​ಕೋರ್​​ ಫ್ಯಾನ್ಸ್​ Don’T Underestimate The Power Of Rcb Power ಅಂತಾರೆ. ಕಪ್​ ನಮ್ದೇ ಅನ್ನೋದಂತೂ ಸಖತ್​​ ಟ್ರೆಂಡ್​ ಆಗುತ್ತೆ. ಆದ್ರೆ ಅಂತ್ಯದಲ್ಲಿ ಆಟಗಾರರ ಫ್ಲಾಫ್​ ಶೋ ಆ ಆತ್ಮವಿಶ್ವಾಸವನ್ನೂ ಕುಗ್ಗಿಸ್ತಿದೆ.
ಕನ್ನಡಿಗರನ್ನ ಕೂರಿಸಿ ಬೇರೆ ರಾಜ್ಯದ ಆಟಗಾರರನ್ನ ಆಡಿಸೋದು, ಫಾರಿನ್​ ಪ್ಲೇಯರ್​ ಮೇಲೆ ಕೋಟಿ-ಕೋಟಿ ಸುರಿಯೋದು ಇದೇ ಆರ್​​ಸಿಬಿಯ ಹೊಸ ಅಧ್ಯಾಯ ಅಂತಾ ಫ್ಯಾನ್ಸ್​ ಹೇಳ್ತಿದ್ದಾರೆ.

ಒಟ್ಟಿನಲ್ಲಿ ಹೀನಾಯ ಸೋಲಿಗೆ ಶರಣಾಗಿರುವ ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ಅಭಿಮಾನಿಗಳ ಆಕ್ರೋಶಕ್ಕೆ ತುತ್ತಾಗಿದೆ. ಫ್ಲೇ ಆಫ್​ ಬಾಗಿಲೂ ಬಹುತೇಕ ಮುಚ್ಚಿದೆ. ಕಪ್​ ಕನಸೂ ಬಹುತೇಕ ನುಚ್ಚು ನೂರಾಗಿದೆ. ಅಟ್ಲೀಸ್ಟ್​ ಉಳಿದ ಪಂದ್ಯಗಳಲ್ಲಾದ್ರೂ ಲಾಯಲ್​​ ಅಭಿಮಾನಿಗಳಿಗೊಸ್ಕರ ಉತ್ತಮ ಪರ್ಫಾಮೆನ್ಸ್​ ಆಟಗಾರರು ನೀಡ್ತಾರಾ? ಕಾದು ನೋಡೋಣ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಆರ್​​ಸಿಬಿ ರುಬ್ಬಿದ ಟ್ರೋಲರ್ಸ್; ಇದು ​ಕಥೆಯಲ್ಲ ವ್ಯಥೆ.. ಹೇಳೋಕೂ ಆಗ್ತಿಲ್ಲ, ಅನುಭವಿಸೋಕೂ ಆಗ್ತಿಲ್ಲ..!

https://newsfirstlive.com/wp-content/uploads/2024/04/RCB-27.jpg

Load More