newsfirstkannada.com

ಮನೆ ಶಿಫ್ಟ್ ಮಾಡಲು ಹೋಗ್ತಿದ್ದಾಗ ಸಂಭವಿಸಿತು ದುರಂತ; ನಾಲ್ವರು ಸಾವು, ಮೂವರು ಗಂಭೀರ

Share :

Published April 13, 2024 at 11:59am

    ಕಾರು-ಟ್ರಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಅನಾಹುತ

    ಕಾರಿನಲ್ಲಿ ಒಟ್ಟು 7 ಮಂದಿ ಪ್ರಯಾಣ ಮಾಡುತ್ತಿದ್ದರು

    ಗಾಯಗೊಂಡಿರುವ ಮೂವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ

ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಅರ್ಜುಣಗಿ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿ ನಾಲ್ವರು ಸಾವನ್ನಪ್ಪಿದ್ದಾರೆ. ಕಾರು-ಸಿಮೆಂಟ್ ಸಾಗಾಟ ಮಾಡುತ್ತಿದ್ದ ಟ್ರಕ್ ಮುಖಾಮುಖಿಯಾಗಿ ದುರಂತ ಸಂಭವಿಸಿದೆ.

ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೋರ್ವ ಬಾಲಕಿಯ ಸ್ಥಿತಿ ಗಂಭೀರವಾಗಿದೆ. ಬಾಲಕಿಯನ್ನು ವಿಜಯಪುರ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಕಾರಿನಲ್ಲಿ ಒಟ್ಟು ಏಳು ಜನರಿದ್ದರು.

ಇದನ್ನೂ ಓದಿ: ಮೂವರು ಮಕ್ಕಳ ಸ್ಕೂಲ್​ ಫೀಸ್ ಕಟ್ಟದೇ ಧೋನಿ ನೋಡಲು 64,000 ಖರ್ಚು ಮಾಡಿದ ಅಭಿಮಾನಿ..!

ಬ್ಯಾಂಕ್ ಉದ್ಯೋಗಿ ಅರ್ಜುನ್ ಹಾಗೂ ಅವರ ಮಗ ಮೇಘರಾಜ, ಮಾವ ರವಿನಾಥ್, ಅತ್ತೆ ಸಾವನ್ನಪ್ಪಿದ್ದಾರೆ. ಹೆಂಡತಿ, ಇಬ್ಬರು ಮಕ್ಕಳಿಗೆ ಗಂಭೀರ ಗಾಯವಾಗಿದೆ. ಅರ್ಜುನ್​ಗೆ ರವಿನಾಥ್ ತಮ್ಮ ಮಗಳು ಜಯಶ್ರೀಯನ್ನು ಮದುವೆ ಮಾಡಿಕೊಟ್ಟಿದ್ದರು. ಅರ್ಜುನ್​ ಮೂವರು ಮಕ್ಕಳಿದ್ದು, ಅವರಲ್ಲಿ ಓರ್ವ ಮಗ ಮೇಘರಾಜ ಅಪಘಾತದಿಂಂದ ಸಾವನ್ನಪ್ಪಿದ್ದಾನೆ.

6 ವರ್ಷದ ನಾಯನಾ ಸ್ಥಿತಿ ಗಂಭೀರವಾಗಿದ್ದು,. 13 ವರ್ಷದ ಮತ್ತೊಬ್ಬ ಮಗ ಪ್ರೇಮಸಿಂಗ್​ಗೂ ಗಾಯವಾಗಿದೆ. ಇವರು ವಿಜಯಪುರ ಜಿಲ್ಲೆ ತಿಕೋಟಾ ತಾಲೂಕಿನ ಬರಟಗಿ ತಾಂಡಾದ ನಿವಾಸಿಗಳು ಎಂದು ತಿಳಿದುಬಂದಿದೆ. ಮೃತ ರವಿನಾಥ ಸುನಿಲಾಲ್ ಪತ್ತಾರ ( 52 ), ಪುಷ್ಪಾ ರವಿನಾಥ ಪತ್ತಾರ ( 40) ಇಬ್ಬರು ಗಂಡ-ಹೆಂಡತಿ. ಇವರು ಬಾಗಲಕೋಟೆ ಜಿಲ್ಲೆ ಮುಧೋಳ ಪಟ್ಟಣದ ನಿವಾಸಿಗಳು.

ಇದನ್ನೂ ಓದಿ:ಬೇರೊಬ್ಬನ ಜೊತೆ ಮದುವೆ; ನೊಂದು ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಜೀವಬಿಟ್ಟ ಪ್ರೇಮಿಗಳು

30 ವರ್ಷದ ಜಯಶ್ರೀ ಅರ್ಜುನ ರಜಪೂತ, 6 ವರ್ಷದ ನಯಾರಾ ಅರ್ಜುನ ರಜಪೂತ, 13 ವರ್ಷದ ಪ್ರೇಮಸಿಂಗ್ ಅರ್ಜುನ ರಜಪೂತಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವಿಜಯಪುರದಿಂದ ಮಹಾಲಿಂಗಪುರಕ್ಕೆ ಮನೆ ಸ್ಥಳಾಂತರಿಸಲು ತೆರಳುತ್ತಿದ್ದರು ಎಂದು ತಿಳಿದುಬಂದಿದೆ.

ಬ್ಯಾಂಕ್ ಉದ್ಯೋಗಿಯಾಗಿದ್ದ ಅರ್ಜುನ್ ಸಿಂಗ್​​ಗೆ ಮಹಾಲಿಂಗಪುರದಿಂದ ವಿಜಯಪುರಕ್ಕೆ ವರ್ಗಾವಣೆ ಗೊಂಡಿತ್ತು. ಮನೆ ಸ್ಥಳಾಂತರಿಸಲು ವಿಜಯಪುರದಿಂದ ಜಮಖಂಡಿ ಮಾರ್ಗವಾಗಿ ಮಹಾಲಿಂಗಪುರಕ್ಕೆ ತೆರಳುತ್ತಿದ್ದರು. KA 28 D 1021 ನಂಬರಿನ ಕಾರಿನಲ್ಲಿ ಏಳು ಜನ ತೆರಳುತ್ತಿದ್ದರು. ಜಮಖಂಡಿಯಿಂದ ಸಿಮೆಂಟ್ ಲೋಡ್ ಇದ್ದ KA 16 B 6472 ನಂಬರಿನ ಲಾರಿ ವಿಜಯಪುರದತ್ತ ಬರುತ್ತಿದ್ದ ವೇಳೆ ಮುಖಾಮುಖಿ ಡಿಕ್ಕಿಯಾಗಿದೆ.

ಇದನ್ನೂ ಓದಿ: RCBಗೆ ಪ್ಲೇ-ಆಫ್ ದಾರಿ ಕಷ್ಟವೇನೂ ಅಲ್ಲ​.. ಕಮರುತ್ತಿರುವ ಕನಸುಗಳಿಗೆ ಜೀವ ತುಂಬಲು ಇನ್ನೂ ಇವೆ ದಾರಿಗಳು..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮನೆ ಶಿಫ್ಟ್ ಮಾಡಲು ಹೋಗ್ತಿದ್ದಾಗ ಸಂಭವಿಸಿತು ದುರಂತ; ನಾಲ್ವರು ಸಾವು, ಮೂವರು ಗಂಭೀರ

https://newsfirstlive.com/wp-content/uploads/2024/04/VIJ-ACCIDENT-1.jpg

Load More