newsfirstkannada.com

‘ಆಪರೇಷನ್‌ ಬಿಜೆಪಿಗಾಗಿ ಬ್ಯಾಂಕ್ ಖಾತೆಗಳು ಸೀಜ್‌’- ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಸಿದ್ದರಾಮಯ್ಯ

Share :

Published March 22, 2024 at 2:54pm

    ಮೊದಲ ಬಾರಿಗೆ ಪಕ್ಷವೊಂದರ ಬ್ಯಾಂಕ್ ಖಾತೆ ಸ್ಥಗಿತಗೊಳಿಸಲಾಗಿದೆ

    ರಾಜೀನಾಮೆ ಕೊಡಿ ಚುನಾವಣೆ ನಡೆಸುತ್ತೇವೆ ಅಂತ ಶಾಸಕರಿಗೆ ಆಫರ್?

    ಚುನಾವಣೆಯಲ್ಲಿ ಸೋಲುತ್ತೇವೆಂಬ ಭೀತಿಯಿಂದ ಈ ರೀತಿ ಮಾಡುತ್ತಿದ್ದಾರೆ

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷಗಳ ಬ್ಯಾಂಕ್ ಖಾತೆಗಳನ್ನೆಲ್ಲಾ ಸೀಜ್ ಮಾಡಿರೋ ಆರೋಪ ಕೇಳಿ ಬಂದಿದೆ. ಪ್ರಧಾನಿ ಮೋದಿ ಸರ್ಕಾರ ಮತ್ತು ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕರು ಈ ಬಗ್ಗೆ ಗಂಭೀರ ಆರೋಪಗಳನ್ನ ಮಾಡಿದ್ದು, ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್, ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್‌ ಸುರ್ಜೇವಾಲಾ ಅವರು ಸುದ್ದಿಗೋಷ್ಟಿ ನಡೆಸಿದ್ದು, ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಲೋಕಸಭಾ ಚುನಾವಣೆಯಲ್ಲಿ ಸೋಲುತ್ತೇವೆಂಬ ಭೀತಿಯಿಂದ ನಿಷ್ಕ್ರಿಯಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ಮಾಡಬಾರದೆಂಬ ಕಾರಣಕ್ಕೆ ಸ್ಥಗಿತಗೊಳಿಸಿದ್ದಾರೆ. ರಾಜಕೀಯ ಪಕ್ಷಗಳ‌ ಕತ್ತು ಹಿಸುಕುವ ಕೆಲಸ ಮಾಡ್ತಿದ್ದಾರೆ. ಇದು ಅತ್ಯಂತ ಖಂಡನೀಯವಾದದ್ದು ಎಂದಿದ್ದಾರೆ.

ಇದನ್ನೂ ಓದಿ: ಇಂಗ್ಲಿಷ್ ಮೀಡಿಯಂಗೆ ಸೇರಿಸುತ್ತೇನೆ ಅಂತ ಕರೆ ತಂದ ಸೋನುಗೌಡ; ವಿಚಾರಣೆಯಲ್ಲಿ ಮಗು ಕಣ್ಣೀರು

ಮತ್ತೆ ಆಪರೇಷನ್ ಕಮಲ‌ದ ಆಫರ್‌!

ಆಪರೇಷನ್ ಕಮಲ ಆರಂಭಿಸಿದ್ದು ಬಿಜೆಪಿಯವರೇ. ರಾಜೀನಾಮೆ ಕೊಡಿಸಿ ಕೋಟಿಗಟ್ಟಲೆ ಹಣ ಖರ್ಚು ಮಾಡಿದ್ದಾರೆ. ಈಗಲೂ ಆಪರೇಷನ್ ಕಮಲ‌ ನಡೆಸಲು ಮುಂದಾಗಿದ್ದಾರೆ. 50 ಕೋಟಿ ಕೊಡುವ ಆಮಿಷವೊಡ್ಡುತ್ತಿದ್ದಾರೆ. ರಾಜೀನಾಮೆ ಕೊಡಿ ಚುನಾವಣೆ ನಡೆಸುತ್ತೇವೆ ಅಂತ ಶಾಸಕರಿಗೆ ಹೇಳುತ್ತಿದ್ದಾರೆ. ಇದು ಯಾವ ಹಣ ಕಪ್ಪು ಹಣ ಅಲ್ಲವಾ? ಇವರು ಸಂಸದೀಯ ವ್ಯವಸ್ಥೆ ನಾಶ ಮಾಡುತ್ತಿದ್ದಾರೆ. ಜನರ ಅಭಿಪ್ರಾಯ ಇಲ್ಲ ಅನ್ನೋದು ಗೊತ್ತಾಗಿದೆ. ಭಾವನಾತ್ಮಕ ವಿಷಯಗಳನ್ನ ಎಷ್ಟು ದಿನ ಹೇಳಿಕೊಂಡು ಇರಲು ಆಗುತ್ತೆ. ಜನರನ್ನ ಭಾವನಾತ್ಮಕವಾಗಿ ದಾರಿ ತಪ್ಪಿಸಲು ಸಾಧ್ಯವಿಲ್ಲ. ತುಂಬಾ ವರ್ಷ ಇದು ನಡೆಯೋದಿಲ್ಲ ಎಂದು ಸಿಎಂ ಎಚ್ಚರಿಸಿದ್ದಾರೆ.

ಕರ್ನಾಟಕದಲ್ಲಿ ಕಾಂಗ್ರಂಸ್‌ ಕನಿಷ್ಠ 20 ಸ್ಥಾನ ಗೆಲ್ಲುತ್ತೇವೆ. ಐಟಿ, ಇಡಿ, ಸಿಬಿಐ ಎಲ್ಲವೂ ಬಿಜೆಪಿಯವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿವೆ. ಮೊದಲ ಬಾರಿಗೆ ಪಕ್ಷವೊಂದರ ಬ್ಯಾಂಕ್ ಖಾತೆ ಸ್ಥಗಿತಗೊಳಿಸಲಾಗಿದೆ. ಚುನಾವಣಾ ಆಯೋಗ ಕೂಡಲೇ ಮಧ್ಯಪ್ರವೇಶಿಸಬೇಕು. ಸ್ಥಗೊತಗೊಳಿಸಿರುವ ಬ್ಯಾಂಕ್ ಖಾತೆಯನ್ನ ಓಪನ್ ಮಾಡಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಆಪರೇಷನ್‌ ಬಿಜೆಪಿಗಾಗಿ ಬ್ಯಾಂಕ್ ಖಾತೆಗಳು ಸೀಜ್‌’- ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಸಿದ್ದರಾಮಯ್ಯ

https://newsfirstlive.com/wp-content/uploads/2024/03/Siddaramaiah-Dkshivakumar-3.jpg

Load More